Tuesday, April 28, 2015

PRESS NOTE
ಉಡುಪಿ ಡಿ.ಸಿ.ಐ.ಬಿ ಪೊಲೀಸರ ಕಾರ್ಯಾಚರಣೆ ಇಬ್ಬರ  ಬಂಧನ- ಗಾಂಜಾ, ನಗದು ಹಾಗೂ ದ್ವಿಚಕ್ರ ವಾಹನ ವಶ


ದಿನಾಂಕ 28/04/15 ರಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಕೆ ಅಣ್ಣಾಮಲೈ ರವರ ನಿರ್ದೇಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಸಂತೋಷ ಕುಮಾರ್ ರವರ ಮಾರ್ಗದರ್ಶನದಲ್ಲಿ, ಉಡುಪಿ ಡಿ.ಸಿ.ಐ.ಬಿ ಇನ್ಸ್ ಪೆಕ್ಟರ್ ಟಿ.ಆರ್ ಜೈಶಂಕರ್ ರವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಮಣಿಪಾಲ ಎಂ.ಐ.ಟಿ ಕಾಲೇಜ್ ರಸ್ತೆಯ ಬಳಿ ದ್ವಿಚಕ್ರ ವಾಹನ ನಿಲ್ಲಿಸಿಕೊಂಡು ಗಾಂಜಾವನ್ನು ಮಾರಾಟ ಮಾಡುತ್ತಿದ್ದ  ಆರೋಪಿಗಳಾದ  1) ರಂಜಿತ್ ಪ್ರಾಯ: 23 ವರ್ಷ, ತಂದೆ: ನಾರಾಯಣ ಪೂಜಾರಿ, ವಾಸ: ನಿತ್ಯ ನಿವಾಸ, ಮಟ್ಟಾರು ಅಂಚೆ, ಶಿರ್ವಾ ಗ್ರಾಮ, ಉಡುಪಿ ತಾಲೂಕು 2) ಶಿವರಾಜ ಆಚಾರ್ಯ ಪ್ರಾಯ: 19 ವರ್ಷ, ತಂದೆ: ಯೊಗೀಶ ಆಚಾರ್ಯ, ವಾಸ: ಗುರು ಪ್ರಸಾದ್, ಮೂಡುಮನೆ, ಮೂಡು ಮಟ್ಟಾರು, ಶಿರ್ವಾ ಗ್ರಾಮ, ಉಡುಪಿ ತಾಲೂಕು ಎಂಬವರನ್ನು  ದಸ್ತಗಿರಿ ಮಾಡಿ ಒಟ್ಟು 1 ಕೆ.ಜಿ 240 ಗ್ರಾಂ ಗಾಂಜಾ, ನಗದು 1,390/- ರೂಪಾಯಿ, 2 ಮೊಬೈಲ್ ಫೋನ್, ಹಾಗೂ 2 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿರುತ್ತಾರೆ. ಸ್ವಾಧೀನಪಡಿಸಿಕೊಂಡ ಸ್ವತ್ತುಗಳ ಒಟ್ಟು ಮೌಲ್ಯ 1,36,590/- ರೂಪಾಯಿ ಆಗಿರುತ್ತದೆ. ಆರೋಪಿತರನ್ನು ಸ್ವತ್ತುಗಳೊಂದಿಗೆ ಮಣಿಪಾಲ ಠಾಣೆಗೆ ಹಸ್ತಾಂತರಿಸಿದ್ದು ಆರೋಪಿಗಳ ವಿರುದ್ದ ಪ್ರಕರಣ ದಾಖಲಾಗಿರುತ್ತದೆ.
     ಈ ಕಾರ್ಯಾಚರಣೆಯಲ್ಲಿ ಸಿಬ್ಬಂದಿಯವರಾದ ಎಎಸ್‌ಐ ರೊಸಾರಿಯೊ ಡಿಸೋಜ, ಸಂತೋಷ ಪುತ್ತೂರು, ಚಂದ್ರ ಶೆಟ್ಟಿ, ಸಂತೋಷ ಕುಂದರ್, ಸುರೇಶ, ರಾಮು ಹೆಗ್ಡೆ,  ರಾಘವೇಂದ್ರ ಉಪ್ಪುಂದ, ಪ್ರವೀಣ, ಥೊಮ್ಸನ್ ಮತ್ತು ವಾಹನ ಚಾಲಕ ಚಂದ್ರಶೇಖರರವರು ಪಾಲ್ಗೊಂಡಿರುತ್ತಾರೆ.

No comments: