Tuesday, April 28, 2015

Daily Crimes Reported as On 28/04/2015 at 17:00 Hrs


ಅಪಘಾತ ಪ್ರಕರಣಗಳು
  • ಬ್ರಹ್ಮಾವರ:ದಿನಾಂಕ:27/04/2015 ರಂದು ಬೆಳಿಗ್ಗೆ 10:30 ಗಂಟೆಗೆ ಉಡುಪಿ ತಾಲೂಕು, ಕಾಡೂರು ಗ್ರಾಮದ, ಮುಂಡಾಡಿ ಹಂಚಿನ ಕಾರ್ಖಾನೆ ಬಳಿ ಕೊಕ್ಕರ್ಣೆ ಕಡೆಯಿಂದ ಬ್ರಹ್ಮಾವರ ಕಡೆಗೆ ಆರೋಪಿ ಮಿಥುನ್ ಶೆಟ್ಟಿ ತನ್ನ ಕೆಎ 20 ಡಬ್ಲೂ 5105 ನೇ ಹೀರೋ ಹೊಂಡ ಫ್ಯಾಶನ್ ಪ್ರೋ ಮೋಟಾರ್ ಸೈಕಲನ್ನು ತಿರುವು ರಸ್ತೆಯಲ್ಲಿ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸುತ್ತಾ ಮುಂದಿನಿಂದ ಹೋಗುತ್ತಿದ್ದ ಓಮ್ನಿ ಕಾರನ್ನು ಓವರ್ ಟೇಕ್ ಮಾಡುವ ಭರದಲ್ಲಿ ಎದುರಿನಿಂದ ಬರುತ್ತಿದ್ದ ರವೀಂದ್ರ ಶೆಟ್ಟಿರವರು ಚಲಾಯಿಸುತ್ತಿದ್ದ ಕೆಎ 20 ಎಕ್ಸ್ 2251 ನೇ ಟಿವಿಎಸ್ ಸ್ಟಾರ್ ಸಿಟಿ ಮೋಟಾರ್ ಸೈಕಲ್‌ಗೆ ಢಿಕ್ಕಿ ಹೊಡೆದ ಪರಿಣಾಮ, ಎರಡೂ ಮೋಟಾರ್ ಸೈಕಲ್‌ಗಳು ರಸ್ತೆಯಲ್ಲಿ ಮಗುಚಿ ಬಿದ್ದು, ಆರೋಪಿ ಚಲಾಯಿಸುತ್ತಿದ್ದ ಮೋಟಾರ್ ಸೈಕಲ್‌ನ ಸಹಸವಾರ ಅಮಿತ್ ಶೆಟ್ಟಿ ಎಂಬವನ ತಲೆಗೆ ತೀವ್ರ ತರಹದ ಗಾಯವಾಗಿರುತ್ತದೆ, ಎದುರಿನಿಂದ ಬರುತ್ತಿದ್ದ ಟಿವಿಎಸ್ ಸ್ಟಾರ್ ಸಿಟಿ ಮೋಟಾರ್ ಸೈಕಲ್‌ನ ಸವಾರನಾದ ರವೀಂದ್ರ ಶೆಟ್ಟಿಯ ಬಲಕಾಲಿಗೆ ತೀವ್ರ ಗಾಯವಾಗಿರುತ್ತದೆ. ಗಾಯಗೊಂಡವರನ್ನು ಮಣಿಪಾಲ ಕೆಎಮ್‌ಸಿ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ದಾಖಲು ಮಾಡಿರುತ್ತಾರೆ. ಈ ಬಗ್ಗೆ ರಮೇಶ್ ಶೆಟ್ಟಿ (33), ತಂದೆ:ಭುಜಂಗ ಶೆಟ್ಟಿ, ವಾಸ:ಸೂರಾಲ್, ಹಲುವಳ್ಳಿ ಗ್ರಾಮ, ಉಡುಪಿ ತಾಲೂಕುರವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣಾ ಅಪರಾಧ ಕ್ರಮಾಂಕ 66/15 ಕಲಂ 279,338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಗಂಗೊಳ್ಳಿ:ದಿನಾಂಕ:27/04/2015 ರಂದು ಪಿರ್ಯಾದಿದಾರರಾದ ನಾಗೇಂದ್ರ ಪೂಜಾರಿ (27), ತಂದೆ:ಕೆಂಜಾಡಿ ಮನೆ, ಸೇನಾಪುರ ಗ್ರಾಮ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆರವರು ತನ್ನ ಹೊಸ ಪಲ್ಸರ್‌ ಮೋಟಾರು ಸೈಕಲ್‌ನಲ್ಲಿ ಅವರ ತಮ್ಮ ರಾಘವೇಂದ್ರ ಪೂಜಾರಿಯವರನ್ನು ಸಹಸವಾರನಾಗಿ ಕುಳ್ಳಿರಿಸಿಕೊಂಡು ಕುಂದಾಪುರ ಕಡೆಯಿಂದ ತ್ರಾಸಿ ಕಡೆಗೆ ಬರುತ್ತಿದ್ದಾಗ, ಮದ್ಯಾಹ್ನ 2:30 ಗಂಟೆಗೆ ಹೊಸಾಡು ಗ್ರಾಮದ ಅರಾಟೆ ಬಳಿ ರಾಷ್ಟ್ರೀಯ ಹೆದ್ದಾರಿ-66 ರ ಬಳಿ ತಲುಪಿದಾಗ ಹಿಂಬದಿಯಿಂದ ಕೆಎ 05 ಎಬಿ 2676 ನೇ ಟಿಪ್ಪರ್‌ ಲಾರಿ ಚಾಲಕನಾದ ಜಯ ಕುಮಾರನು ಟಿಪ್ಪರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ನಾಗೇಂದ್ರ ಪೂಜಾರಿರವರ ಬೈಕನ್ನು ಓವರ್‌ ಟೇಕ್‌ ಮಾಡಿ ಮುಂದೆ ಬಂದು, ಒಮ್ಮೆಲೆ ಎಡಕ್ಕೆ ಚಲಾಯಿಸಿ ನಾಗೇಂದ್ರ ಪೂಜಾರಿರವರ ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್‌ ಸಮೇತ ಕೆಳಗೆ ಬಿದ್ದು, ಮೋಟಾರು ಸೈಕಲ್‌ ಸವಾರ ನಾಗೇಂದ್ರ ಪೂಜಾರಿಯವರಿಗೆ ಬಲ ಕೈ ಮೊಣಗಂಟು, ಬಲಕಣ್ಣು, ಕಾಲಿನ ಬೆರಳಿಗೆ ರಕ್ತಗಾಯ ಹಾಗೂ ಸಹಸವಾರ ರಾಘವೇಂದ್ರ ಪೂಜಾರಿಗೆ ತಲೆಗೆ ಹಾಗೂ ಕಾಲಿಗೆ ರಕ್ತಗಾಯವಾಗಿದ್ದು, ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ನಾಗೇಂದ್ರ ಪೂಜಾರಿರವರು ನೀಡಿದ ದೂರಿನಂತೆ ಗಂಗೊಳ್ಳಿ ಠಾಣಾ ಅಪರಾಧ ಕ್ರಮಾಂಕ 54/2014 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಪಡುಬಿದ್ರಿ:ದಿನಾಂಕ:27/04/2015 ರಂದು 18:00 ಗಂಟೆಗೆ ಉಡುಪಿ ಕಡೆಯಿಂದ ಪಡುಬಿದ್ರಿ ಕಡೆಗೆ ಕೆಎ 19 ಸಿ 8061 ನೇ ಟಿಪ್ಪರ್ ಚಾಲಕನಾದ ಆರೋಪಿ ಬೀರಪ್ಪ ಎಂಬವರು ಟಿಪ್ಪರ್‌ನಲ್ಲಿ ಹಿಟಾಚಿ ಯಂತ್ರವನ್ನು ಹೇರಿಕೊಂಡು ತೆಂಕ ಎರ್ಮಾಳ್ ಗ್ರಾಮದ ಎರ್ಮಾಳ್ ಗರಡಿ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಅತೀವೇಗ ಹಾಗೂ ಅಜಾಗರೂಕತೆಯಿಂದ ಟಿಪ್ಪನ್ನು ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ರಸ್ತೆಯ ತೀರಾ ಬಲಬದಿಗೆ ಬಂದು ಉಡುಪಿ ಕಡೆಗೆ ಹೋಗುತ್ತಿದ್ದ ಕೆಎ 20 ಡಿ 3884 ನೇ ಸ್ವಿಪ್ಟ್ ಕಾರಿಗೆ ಡಿಕ್ಕಿ ಹೊಡೆದು, ಟಿಪ್ಪರ್ ಲಾರಿಯಲ್ಲಿದ್ದ ಹಿಟಾಚಿ ಯಂತ್ರ ಸಮೇತ ಟಿಪ್ಪರ್ ಲಾರಿ ಕಾರಿನ ಮೇಲೆ ಬಿದ್ದ ಪರಿಣಾಮ, ಕಾರಿನ ಒಳಗೆ ಸಿಲುಕಿಕೊಂಡಿರುವ ಕಾರು ಚಾಲಕರಾದ ವಿಠಲ ನಾಯ್ಕ (62) ಎಂಬವರನ್ನು ಹೊರತೆಗೆದು ಚಿಕಿತ್ಸೆಯ ಬಗ್ಗೆ ಮುಕ್ಕಾ ಶ್ರೀನಿವಾಸ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿಸಿದ್ದು, ಕಾರಿನ ಹಿಂಬದಿಯಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರಿಗೆ ಸಣ್ಣಪುಟ್ಟ ಗಾಯವಾಗಿರುತ್ತದೆ. ಘಟನೆಗೆ ಕೆಎ 19 ಸಿ 8061 ನೇ ಟಿಪ್ಪರ್ ಲಾರಿಯಲ್ಲಿ ಹಿಟಾಚಿ ಯಂತ್ರವನ್ನು ಲೋಡ್‌ ಮಾಡಿಕೊಂಡು ಹೋಗುವಾಗ ಲಾರಿಯ ಮಾಲಕನು ಯಾವುದೇ ಕನಿಷ್ಠ ಸುರಕ್ಷತೆಯ ಕ್ರಮವನ್ನು ಕೈಗೊಳ್ಳದೇ ನಿರ್ಲಕ್ಷತನ ವಹಿಸಿದ್ದು ಹಾಗೂ ಟಿಪ್ಪರ್ ಲಾರಿಯ ಚಾಲಕನು ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ಚಲಾಯಿಸಿದ್ದೇ ಕಾರಣವಾಗಿರುತ್ತದೆ.ಈ ಬಗ್ಗೆ ವಿಶ್ವನಾಥ (33) ತಂದೆ:ಭಾಸ್ಕರ ಪೂಜಾರಿ, ವಾಸ:ಕುಡುಂಘಟ್ಟ ಮನೆ, ಕುರ್ಕಾಲು ಗ್ರಾಮ, ಸುಭಾಶ ನಗರ ಅಂಚೆ, ಉಡುಪಿ ತಾಲೂಕುರವರು ನೀಡಿದ ದೂರಿಂತೆ ಪಡುಬಿದ್ರಿ ಠಾಣಾ ಅಪರಾಧ ಕ್ರಮಾಂಕ 56/15  ಕಲಂ:279, 337, 304 (ಎ) ಐ.ಪಿ.ಸಿ ಮತ್ತು 134 (ಎ) & (ಬಿ) ಜೊತೆಗೆ 187 ಐ.ಎಂ.ವಿ ಆಕ್ಟ್‌ನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
  • ಶಿರ್ವಾ:ದಿನಾಂಕ:25/04/2015 ರಂದು ಪಿರ್ಯಾದಿದಾರರಾದ ಇಂದ್ರೇಶ್ (31) ತಂದೆ:ಪದ್ಮನಾಭ ವಾಸ:ಶಿನಾ ನಿವಾಸ, ಕಡಿಯಾಳಿ ಉಡುಪಿರವರು ತನ್ನ ಕೆಎ 19 ಇಎನ್ 7245 ಮೋಟಾರ್ ಸೈಕಲ್‌ನಲ್ಲಿ ಸಹಸವಾರನಾಗಿ ತನ್ನ ಸ್ನೇಹಿತ ಗಣೇಶ್ ಎಂಬಾತನನ್ನು ಕುಳ್ಳಿರಿಸಿಕೊಂಡು ಕಟಪಾಡಿ ಕಡೆಯಿಂದ ಶಿರ್ವಾ ಕಡೆಗೆ ಬರುತ್ತಿರುವಾಗ ಮದ್ಯಾಹ್ನ 13:30 ಗಂಟೆಗೆ ಶಿರ್ವಾ ನ್ಯಾರ್ಮ ಎಂಬಲ್ಲಿ ಇಂದ್ರೇಶ್ರವರ ಎದುರಿನಿಂದ ಅಂದರೆ ಶಿರ್ವಾ ಕಡೆಯಿಂದ ಒಂದು ಟಿಪ್ಪರ್ ಲಾರಿ ಬರುತ್ತಿದ್ದು, ಟಿಪ್ಪರ್‌ನ ಹಿಂದೆ ಕೆಎ 20 ಇಡಿ 0562ನೇ ಮೋಟಾರ್ ಸೈಕಲ್‌ನಲ್ಲಿ ಆರೋಪಿತ ಶಿವಕುಮಾರ್ ಎಂಬಾತನು ಸಹಸವಾರ ರಮೇಶ್ ಎಂಬವನನ್ನು ಕುಳ್ಳಿರಿಸಿಕೊಂಡು ಮೋಟಾರ್ ಸೈಕಲನ್ನು ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಟಿಪ್ಪರ್ ಲಾರಿಯನ್ನು ಓವರ್ ಟೇಕ್ ಮಾಡಿ ಲಾರಿಯ ಬಲಬದಿಯಲ್ಲಿ ಬಂದು ಇಂದ್ರೇಶ್ರವರ ಮೋಟರ್ ಸೈಕಲ್‌ಗೆ ಢಿಕ್ಕಿ ಹೊಡೆದ ಪರಿಣಾಮ, ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಇಂದ್ರೇಶ್ರವರ ಎಡ ಕೈಗೆ ತರಚಿದ ಗಾಯವಾಗಿದ್ದು, ಅಪಘಾತ ಎಸಗಿದ ಮೋಟಾರ್ ಸೈಕಲ್ ನಲ್ಲಿ ಸಹ ಸವಾರನಾಗಿದ್ದ ರಮೇಶನಿಗೆ ಎಡ ಕಾಲಿನ ಪಾದದ ಬಳಿ ರಕ್ತ ಗಾಯವಾಗಿರುತ್ತದೆ. ಈ ಬಗ್ಗೆ ಇಂದ್ರೇಶ್‌ರವರು ನೀಡಿದ ದೂರಿನಂತೆ ಶಿರ್ವಾ ಠಾಣಾ ಅಪರಾಧ ಕ್ರಮಾಂಕ 27/2015 ಕಲಂ:279, 337 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಜೀವ ಬೆದರಿಕೆ ಪ್ರಕರಣ
  • ಶಿರ್ವಾ:ದಿನಾಂಕ:25/04/2015 ರಂದು ಸಂಜೆ 5:00 ಗಂಟೆಗೆ ಆರೋಪಿತರಾದ ವಿಲಿಯಂ ದಾಲ್ಮೇದಾ ಮತ್ತು ಚಾರ್ಲ್ಸ ದಾಲ್ಮೇದಾ ಇವರು ಪಿರ್ಯಾದಿದಾರರಾದ ಸ್ಟ್ಯಾನಿ ಪಿಂಟೋ, ತಂದೆ:ಪಿಲಿಪ್ ಪಿಂಟೋ ವಾಸ:ಭತ್ತಗೇಣಿ, ಕುತ್ಯಾರು ಗ್ರಾಮರವರ ಮನೆಯ ಹತ್ತಿರ ಬಂದು ಗಲಾಟೆ ಮಾಡಿ ಸ್ಟ್ಯಾನಿ ಪಿಂಟೋರವರಿಗೆ, ಅವರ ಹೆಂಡತಿ ಮೇರಿ ಪಿಂಟೋ ಹಾಗೂ ಅತ್ತೆ ಸೆಲೆಸ್ತಿನ್ ನೊರೋನ್ಹಾ ಇವರಿಗೆ ಜೀವ ಬೆದರಿಕೆ ಹಾಕಿ ಆರೋಪಿತ ವಿಲಿಯಂ ದಾಲ್ಮೇದಾ ಕತ್ತಿ ಹಿಡಿದು ಸ್ಟ್ಯಾನಿ ಪಿಂಟೋರವರಿಗೆ ಹೊಡೆಯಲು ಬಂದಾಗ, ಸ್ಟ್ಯಾನಿ ಪಿಂಟೋರವರು ಓಡಿ ತಪ್ಪಿಸಿಕೊಂಡಿದ್ದು, ಆರೋಪಿತರು ನೀರು ಬಿಸಿ ಮಾಡುವ ದೊಡ್ಡ ಕೊಡವನ್ನು ಕತ್ತಿಯಿಂದ ಬಡಿದು ತೂತು ಮಾಡಿರುತ್ತಾರೆ. ಈ ಬಗ್ಗೆ ಸ್ಟ್ಯಾನಿ ಪಿಂಟೋರವರು ನೀಡಿದ ದೂರಿನಂತೆ ಶಿರ್ವಾ ಠಾಣಾ ಅಪರಾಧ ಕ್ರಮಾಂಕ 28/2015 ಕಲಂ 427, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: