Tuesday, April 28, 2015

Daily Crimes Reported as On 28/04/2015 at 07:00 Hrs



ಅಪಘಾತ ಪ್ರಕರಣ

  • ಕಾರ್ಕಳ: ದಿನಾಂಕ 27.4.2015 ರಂದು 11:15 ಗಂಟೆಗೆ ಕಾರ್ಕಳ ತಾಲೂಕಿನ ನೀರೆ ಗ್ರಾಮದ ನೀರೆ ಜಡ್ಡು ಎಂಬಲ್ಲಿ ಉಡುಪಿ-ಕಾರ್ಕಳ ಜಿಲ್ಲಾ ಮುಖ್ಯ ರಸ್ತೆಯಲ್ಲಿ ಮಾರುತಿ ಓಮ್ನಿ ಕಾರು ನಂಬ್ರ KA05MH8661ನೇಯದರ ಚಾಲಕ ತನ್ನ ಬಾಬ್ತು ಓಮ್ನಿ ಕಾರನ್ನು ಬೈಲೂರು ಕಡೆಯಿಂದ ಉಡುಪಿ ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರ ಬಲಬದಿಯಲ್ಲಿ ಚಲಾಯಿಸಿಕೊಂಡು ಬಂದು, ಗುಡ್ಡೆಯಂಗಡಿ ಕಡೆಯಿಂದ ಬೈಲೂರು ಕಡೆಗೆ ಸಂತೋಷ ಎಂಬವರು ಸವಾರಿ ಮಾಡಿಕೊಂಡು ಬರುತ್ತಿದ್ದ ಮೋಟಾರು ಸೈಕಲ್ ನಂಬ್ರ KA20ED7295 ನೇಯದಕ್ಕೆ ಢಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್ ಸವಾರನಿಗೆ ಸಾಮಾನ್ಯ ಹಾಗೂ ಕಾಲಿಗೆ ಮೂಳೆ ಮುರಿತದ ತೀವೃ ಸ್ವರೂಪದ ಗಾಯಗಳಾಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 41/15 ಕಲಂ. 279, 337, 338 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

 ಅಕ್ರಮ ಮದ್ಯ ಮಾರಾಟ ಪ್ರಕರಣ

  • ಕಾರ್ಕಳ: ಕಾರ್ಕಳ ತಾಲೂಕಿನ ಕಸಬ ಗ್ರಾಮದಲ್ಲಿರುವ ಹೋಟೆಲ್‌ ಕಟೀಲ್‌ ಇಂಟರ್‌ ನ್ಯಾಷನಲ್‌ ಇದರಲ್ಲಿ ಯಾವುದೇ ಪರವಾನಿಗೆಯನ್ನು ಹೊಂದದೇ ಅಕ್ರಮವಾಗಿ ವಿದೇಶಿ ಮಧ್ಯವನ್ನು ದಾಸ್ತಾನು ಇರಿಸಿ, ಹೋಟೆಲಿಗೆ ಬರುವ ಗ್ರಾಹಕರಿಗೆ ಮಧ್ಯವನ್ನು ಸರಬರಾಜು ಮಾಡುತ್ತಿದ್ದಾರೆ ಎಂದು ಬಾತ್ಮೀದಾರರಿಂದ ಮಾಹಿತಿ ಬಂದ ಮೇರೆಗೆ ಕಬ್ಬಾಳ್‌ ರಾಜ್‌ ಹೆಚ್‌ ಡಿ, ಪೊಲೀಸ್‌ ಉಪ ನಿರೀಕ್ಷಕರು, ಕಾರ್ಕಳ ನಗರ ಪೊಲೀಸ್‌ ಠಾಣೆ ಇವರು  ತನ್ನ ಸಿಬ್ಬಂದಿಯವರೊಂದಿಗೆ 19:50 ಗಂಟೆಗೆ ಸದರಿ ಹೋಟೆಲಿಗೆ ಧಾಳಿ ನಡೆಸಿ ಹೋಟೆಲಿನಲ್ಲಿ ಅಕ್ರಮವಾಗಿ ದಾಸ್ತಾನು ಇರಿಸಿದ್ದ ಮತ್ತು ಗ್ರಾಹಕರಿಗೆ ಸರಬರಾಜು ಮಾಡುತ್ತಿದ್ದ ಸುಮಾರು 39,900/- ರೂಪಾಯಿ ಮೌಲ್ಯದ ವಿವಿಧ ಮಾದರಿಯ ಸ್ವದೇಶಿ ನಿರ್ಮಿತ ವಿದೇಶಿ ಮಧ್ಯವನ್ನು ವಶಪಡಿಸಿಕೊಂಡು ಹೋಟೆಲಿನ ಮಾಲಿಕರಲ್ಲೋರ್ವರಾದ ಆಪಾದಿತ ಡಿ ಆರ್‌ ರಾಜು ಇವರನ್ನು ವಶಕ್ಕೆ ತೆಗೆದುಕೊಂಡುದ್ದು,  ಆಪಾದಿತರಾದ 1. ಡಿ ಆರ್ರಾಜು, ಪ್ರಾಯ 55 ವರ್ಷ, ತಂದೆ ದಿವಂಗತ ರಾಮಯ್ಯ, ವಾಸ ಕೃತಿಕಾ, ಸ್ವರಾಜ್‌ ಮೈದಾನದ ಬಳಿ, ಕಸಬ ಗ್ರಾಮ, ಕಾರ್ಕಳ ತಾಲೂಕು ಮತ್ತು 2) ರೋಹಿತ್‌ ಕುಮಾರ್‌ ಕಟೀಲ್‌. ಕಾರ್ಕಳ ಇವರ ವಿರುದ್ದ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 42/2015  ಕಲಂ 32,  34 ಕರ್ನಾಟಕ ಅಬಕಾರಿ ಕಾಯಿದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಸ್ವಾಭಾವಿಕ ಮರಣ ಪ್ರಕರಣ

  • ಕೋಟ: ಶಶಿಕಲಾ ಪ್ರಾಯ:40 ವರ್ಷ ಎಂಬುವರು ದಿನಾಂಕ:27/04/2015 ರಂದು ಬೆಳಿಗ್ಗೆ 08:30 ಗಂಟೆಗೆ ಬುಟ್ಟಿ ವ್ಯಾಪಾರದ ಬಗ್ಗೆ ಮನೆಯಿಂದ ಹೋದವರು  ಸಂಜೆ ಸಮಾರು 4:00 ಗಂಟೆಗೆ  ತೆಕ್ಕಟ್ಟೆ ಗ್ರಾಮದ ಮಲ್ಯಾಡಿ ಎಂಬಲ್ಲಿ ಗದ್ದೆಯಲ್ಲಿ ಬಿದ್ದಿರುವುದಾಗಿ ಹೋಗಿ ನೋಡುವಾಗ ಶಶಿಕಲಾ ರವರು ಆಗಲೇ ಮೃತಪಟ್ಟಿರುತ್ತಾರೆ. ಈ ಬಗ್ಗೆ ಕೋಟ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 20/2015 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
  • ಹೆಬ್ರಿ: ಪ್ರಸನ್ನ (26) ಎಂಬುವವರು ಕುಡಿತದ ಚಟವುಳ್ಳವರಾಗಿದ್ದು, ಕುಡಿಯಲು ಹಣ ಹೊಂದಿಸಲಾಗದೇ, ಕುಡಿತವನ್ನೂ ಬಿಡಲಾಗದೇ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 25-04-2015 ರಂದು ಮಧ್ಯಾಹ್ನ ಸಮಯ ಸುಮಾರು 12:00 ಗಂಟೆಗೆ ಮುದ್ರಾಡಿ ಗ್ರಾಮದ ಬೆಲ್ಲಾಡಿ ಬೆಂಡೆಗುಡ್ಡೆಯಲ್ಲಿರುವ ತನ್ನ ಮನೆಯ ಟಾಯ್ಲೆಟ್‌ ಒಳಗೆ ಹೋಗಿ ಡೋರ್‌ ಲಾಕ್‌ ಮಾಡಿಕೊಂಡು ಯಾವುದೋ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಸಿದ ಸದ್ರಿ ಪ್ರಸನ್ನ ರವರನ್ನು ಚಿಕಿತ್ಸೆ ಬಗ್ಗೆ ಕೆ.ಎಮ್‌.ಸಿ ಮಣಿಪಾಲ್ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಿಸಿದ್ದು, ಅಲ್ಲಿಯ ವೈದ್ಯರು ನೀಡಿದ ಚಿತ್ಸೆ ಫಲಕಾರಿಯಾಗದೇ ದಿನಾಂಕ 27-04-2015 ರಂದು ಬೆಳಿಗ್ಗೆ 8:30 ಗಂಟೆಗೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಹೆಬ್ರಿ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 16/2015 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: