Monday, April 27, 2015

Daily Crime Reports As on 27/04/2015 at 19:30 Hrsಅಪಘಾತ ಪ್ರಕರಣ

  • ಮಣಿಪಾಲ: ದಿನಾಂಕ 25.04.15 ರಂದು ಅಪರಾಹ್ನ 12:45 ಗಂಟೆಗೆ ಪಿರ್ಯಾದಿದಾರರಾದ ಸದಾನಂದ ಮೂಲ್ಯ, ತಂದೆ ತುಕ್ರ ಮೂಲ್ಯ, ವಾಸ: ಮಂಚಿಕೋಡಿ, ಕುಂಜಿಬೆಟ್ಟು ಅಂಚೆ, ಶಿವಳ್ಳಿ ಗ್ರಾಮ, ಉಡುಪಿ ತಾಲೂಕು ರವರು ತನ್ನ ದ್ಚಿಚಕ್ರ ವಾಹನ ನಂಬ್ರ ಕೆಎ 20 ಈಎಚ್‌ ‌1759ನೇದರಲ್ಲಿ ತನ್ನ ಮಗ ಯಶಪಾಲ್‌ನನ್ನು ಕುಳ್ಳಿರಿಸಿಕೊಂಡು ಅಲೆವೂರು ಮಣಿಪಾಲ ರಸ್ತೆಯಲ್ಲಿ ಬರುತ್ತಿರುವಾಗ ವಿಠ್ಠಲ ಸಭಾಭವನದ ಬಳಿ ತಲುಪಿದಾಗ ಎದುರಿನಿಂದ ಕೆಎ 20 ಸಿ 6788ನೇ ವಾಹನವನ್ನು ಅದರ ಚಾಲಕ ಚಂದ್ರಶೇಖರ ಪ್ರಭುರವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಹಾಗೂ ಅವರ ಮಗ ವಾಹನ ಸಮೇತ ರಸ್ತೆಗೆ ಬಿದ್ದು, ಪಿರ್ಯಾದಿದಾರರಿಗೂ ಅವರ ಮಗ ಯಶಪಾಲ್‌ನಿಗೂ ತೀವ್ರ ಸ್ವರೂಪದ ಗಾಯವಾಗಿರುತ್ತದೆ. ಈ ಅಪಘಾತದಿಂದ ಪಿರ್ಯಾದಿದಾರರ ವಾಹನ ಜಖಂಗೊಂಡಿರುತ್ತದೆ. ಪಿರ್ಯಾದಿದಾರರನ್ನು ಹಾಗೂ ಅವರ ಮಗ ಯಶಪಾಲ್‌‌ನನ್ನು ಅಲ್ಲಿ ಸೇರಿದವರು ಚಿಕಿತ್ಸೆಯ ಬಗ್ಗೆ ಕೆ.ಎಮ್‌.ಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ ಎಂಬುದಾಗಿ ಸದಾನಂದ ಮೂಲ್ಯ ರವರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 64/2015 ಕಲಂ 279, 337 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ. 

ಅಸ್ವಾಭಾವಿಕ ಮರಣ ಪ್ರಕರಣ

  • ಮಣಿಪಾಲ: ಪಿರ್ಯಾದಿದಾರರಾದ ಮಹಮ್ಮದ್ ಶರೀಫ್‌ ತಂದೆ ಸುಲೈಮಾನ್‌, ವಾಸ: ಬರಿಮಾರ್ ಅಂಚೆ, ಬಲ್ಟಿಲಿಯಾ ಗ್ರಾಮ, ಬಂಟ್ವಾಳ ತಾಲೂಕು ರವರ ತಮ್ಮ ಸಹೋದರ್‌ ಭಯ (24) ಎಂಬಾತನು ಮಣಿಪಾಲದ ಸಿ.ಸಿ.ಸಿ.ಎಲ್‌ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡು 10ನೇ ಬ್ಲಾಕ್‌ನ ಹಿಂಬದಿ ಶೆಡ್‌ನಲ್ಲಿ ವಾಸವಾಗಿರುತ್ತಾನೆ. ಆತನು ದಿನಾಂಕ 26.04.15 ರಂದು ರಾತ್ರಿ ಸಮಯ ಮಲಗಿದ್ದವನು ಎದ್ದು ಹೋಗಿ ಶೆಡ್‌‌ನ ಎದುರುಗಡೆ ಮರದ ಗೆಲ್ಲಿಗೆ ತನ್ನ ಪ್ಯಾಂಟನ್ನು ಕಟ್ಟಿ ಇನ್ನೊಂದು ತುದಿಯನ್ನು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಮೃತನು ತನ್ನ ಸಂಸಾರದಲ್ಲಿ ವಿರಸದಿಂದ ಬೇಸರಗೊಂಡು ವಿಪರೀತ ಮದ್ಯಪಾನ ಮಾಡಿಕೊಂಡಿದ್ದವನು ಕಳೆದ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಎಂಬುದಾಗಿ ಮಹಮ್ಮದ್ ಶರೀಫ್‌ ರವರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 16/2015 ಕಲಂ 174 ಸಿ.ಆರ್. ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

No comments: