Sunday, April 26, 2015

Daily Crimes Reported as On 26/04/2015 at 07:00 Hrs


ಅಪಘಾತ ಪ್ರಕರಣ
  • ಹೆಬ್ರಿ:ಪಿರ್ಯಾದಿದಾರರಾದ ರಮೇಶ (40),ತಂದೆ:ಬಾಡು ಹಾಂಡ, ವಾಸ:ಕನ್ಯಾನ, ನಡು ಮನೆ, ಚಾರ ಗ್ರಾಮ, ಕಾರ್ಕಳ ತಾಲೂಕುರವರ ಚಿಕ್ಕಪ್ಪ ರಮೇಶ ಹಾಂಡರವರು ದಿನಾಂಕ:24-04-2015 ರಂದು ಕೆಲಸ ಮುಗಿಸಿ ಹೆಬ್ರಿ ಕಡೆಯಿಂದ ಹೆಬ್ರಿ-ಉಡುಪಿ ರಸ್ತೆ ಮಾರ್ಗವಾಗಿ ಸೈಕಲ್‌ ಸವಾರಿ ಮಾಡಿಕೊಂಡು ತಮ್ಮ ಮನೆಗೆ ಹೋಗುವಾಗ ಸಂಜೆ ಸುಮಾರು 7:20 ಗಂಟೆಗೆ ಕಾರ್ಕಳ ತಾಲೂಕು, ಹೆಬ್ರಿ ಗ್ರಾಮದ, ಕನ್ಯಾನ ಬಾಯರ್‌ಬೆಟ್ಟು ಎಂಬಲ್ಲಿ ಹೆಬ್ರಿ-ಹೆಬ್ಬಾಗಿಲು ಮನೆ ಕಡೆ ಹೋಗುವ ರಸ್ತೆಗೆ ತಾನು ಸವಾರಿ ಮಾಡುತ್ತಿದ್ದ ಸೈಕಲನ್ನು ತಿರುಗಿಸುವಾಗ ಹೆಬ್ರಿ ಕಡೆಯಿಂದ ಉಡುಪಿ ಕಡೆಗೆ ಕೆಎ 20 ಪಿ 9188 ನೇ ಕಾರನ್ನು ಅದರ ಚಾಲಕ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಮೇಶರವರ ಚಿಕ್ಕಪ್ಪ ರಮೇಶ ಹಾಂಡರವರು ಸವಾರಿ ಮಾಡುತ್ತಿದ್ದ ಸೈಕಲ್‌ಗೆ ಢಿಕ್ಕಿ ಹೊಡೆದ ಪರಿಣಾಮ ರಮೇಶ ಹಾಂಡರವರ ಎರಡೂ ಕಾಲಿಗೂ ತೀವ್ರ ಗಾಯಗೊಂಡಿರುವುದಲ್ಲದೇ, ಅವರ ತಲೆಯ ಹಿಂಭಾಗಕ್ಕೆ ರಕ್ತಗಾಯವಾಗಿ ಕೆ.ಎಂ.ಸಿ ಮಣಿಪಾಲ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ರಮೇಶರವರು ನೀಡಿದ ದೂರಿನಂತೆ ಹೆಬ್ರಿ ಠಾಣಾ ಅಪರಾಧ ಕ್ರಮಾಂಕ 27/15 ಕಲಂ:279, 338 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ
  • ಪಡುಬಿದ್ರಿ:ಪಿರ್ಯಾದಿದಾರರಾದ ಪ್ರಕಾಶ್ ಶೆಟ್ಟಿ (60), ತಂದೆ:ದಿವಂಗತ ಮಹಾಬಲ ಶೆಟ್ಟಿ, ವಾಸ:ಅಡ್ವೆ, ಕೆಂಗಡಗುತ್ತು, ಪಲಿಮಾರು ಪೋಸ್ಟ್, ನಂದಿಕೂರು ಗ್ರಾಮ, ಉಡುಪಿ ತಾಲೂಕುರವರ ತಮ್ಮನಾದ ಪ್ರವೀಣ ಶೆಟ್ಟಿ (58) ಎಂಬವರು ವಿಪರೀತ ಮದ್ಯಪಾನ ಮಾಡುವ ಚಟವಿದ್ದು, ಕಾರಣದಿಂದಾಗಿ ಅಸೌಖ್ಯಗೊಂಡು ದಿನಾಂಕ:19/04/2015 ರಂದು 07:30 ಗಂಟೆಗೆ  ನಂದಿಕೂರು ಗ್ರಾಮದ ಅಡ್ವೆ ಗಣಪತಿ ದೇವಸ್ಥಾನದ ಹತ್ತಿರ ಬಿದ್ದುಕೊಂಡಿದ್ದವರನ್ನು ಉಡುಪಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದವರು ದಿನಾಂಕ:22/04/2015 ರಂದು ಬೆಳಿಗ್ಗೆ 12:00 ಗಂಟೆಗೆ ಮೃತಪಟ್ಟಿರುತ್ತಾರೆ. ಈ ಬಗ್ಗೆ ಪ್ರಕಾಶ್  ಶೆಟ್ಟಿರವರು ನೀಡಿದ ದೂರಿನಂತೆ 10/15 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಹುಡುಗ ಕಾಣೆ ಪ್ರಕರಣ
  • ಪಡುಬಿದ್ರಿ:ಪಿರ್ಯಾದಿದಾರರಾದ ಬಂದೇನವಾಜ (50), ತಂದೆ:ದಿವಂಗತ ಇಮಾಂಮಸಾಬ, ವಾಸ:ಕಣಮೇಶ್ವರ ತಾಲೂಕು, ಜೇವರ್ಗಿ, ಗುಲಬರ್ಗಾ ಜಿಲ್ಲೆರವರ ಎಂಬವರ ಅಣ್ಣನ ಮಗನಾದ ರಾಜಾಪಟೇಲ್ (24) ಎಂಬವರು ನಂದಿಕೂರು ಗ್ರಾಮದ ನಾಗಾರ್ಜುನ ಕಂಪೆನಿಯಲ್ಲಿ ಹೆಲ್ಪರ್ ಆಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ:17/04/2015 ರಂದು ಮಧ್ಯಾಹ್ನ ಊರಿಗೆ ಹೋಗುತ್ತೇನೆಂದು ನಂದಿಕೂರಿನಿಂದ ಹೋದವರು ಊರಿಗೆ ಹೋಗದೇ ವಾಪಾಸ್ಸು ನಂದಿಕೂರಿಗೆ ಬಾರದೇ ಕಾಣೆಯಾಗಿರುತ್ತಾರೆ.ಕಾಣೆಯಾದವರ ಚಹರೆ:ಗೋಧಿ ಮೈ ಬಣ್ಣ, ಸಪೂರ ದೇಹ, ಕೋಲು ಮುಖ, ಚಿಗುರು ಮೀಸೆ, ಗಡ್ಡ, 5.8” ಅಡಿ ಎತ್ತರ, ಕಪ್ಪು ಪ್ಯಾಂಟ್, ಹಳದಿ ಬಿಳಿ ಮಿಶ್ರಿತ ಟಿ ಶರ್ಟ್ ಧರಿಸಿರುತ್ತಾರೆ.
ಹಲ್ಲೆ ಪ್ರಕರಣ
  • ಶಂಕರನಾರಾಯಣ:ದಿನಾಂಕ:24/04/15 ರಂದು 17:45  ಘಂಟೆಗೆ ಕುಂದಾಪುರ ತಾಲೂಕಿನ ಅಂಪಾರು ಗ್ರಾಮದ  ಕಂಚಾರು ಎಂಬಲ್ಲಿ  ಆರೋಪಿಗಳಾದ ಶ್ರೀಧರ ಶೆಟ್ಟಿ, ಪ್ರಭಾಕರ ಶೆಟ್ಟಿ, ಗಿರಿಜಮ್ಮ, ರೇವತಿ ಶೆಟ್ಟಿರವರಿ ಗೂ ಪಿರ್ಯಾದಿದಾರರಾದ ನಾರಾಯಣ ಶೆಟ್ಟಿ (51) ತಂದೆ:ಶಿವರಾಮ ಶೆಟ್ಟಿ, ವಾಸ: ಕಂಚಾರು, ಅಂಪಾರು ಗ್ರಾಮರವರಿಗೂ ಇರುವ ದಾರಿಯ ವಿಚಾರದಲ್ಲಿ ಆರೋಪಿತರು  ಕೋಪಗೊಂಡು ನಾರಾಯಣ ಶೆಟ್ಟಿರವರ ತಲೆ, ಬೆನ್ನಿಗೆ ಹಾಗೂ ಕೈಗೆ ಮರದ ದೊಣ್ಣೆ ಹಾಗೂ ಕತ್ತಿಯಿಂದ  ಹಲ್ಲೆ ಮಾಡಿರುತ್ತಾರೆ. ಈ ಸಮಯ ಜಗಳ ಬಿಡಿಸಲು  ಬಂದ  ನಾರಾಯಣ ಶೆಟ್ಟಿರವರ ಮಗಳು ಸೌಮ್ಯರವರಿಗೂ ಸಹ ಹಲ್ಲೆ ಮಾಡಿ, ಇನ್ನು ಮುಂದೆ ನಮ್ಮ  ಸುದ್ದಿಗೆ ಬಂದರೇ ನಿಮ್ಮನ್ನು ಕೊಂದು ಹಾಕುತ್ತೇವೆ ಎಂದು  ಜೀವ ಬೆದರಿಕೆ ಹಾಕಿ ಅವಾಚ್ಯ ಶಬ್ದದಿಂದ ಬೈದಿರುತ್ತಾರೆ.ಈ ಬಗ್ಗೆ 73/15 ಕಲಂ:323 324, 504, 506 ಜೊತೆಗೆ 34 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.  
ಇತರ ಪ್ರಕರಣ
  • ಕೋಟ:ಪಿರ್ಯಾದಿದಾರರಾದ ಡಾ||ಕೇಶವ ಕೋಟೇಶ್ವರ, ಮುಖ್ಯ ಕಾರ್ಯನಿರ್ವಾಹಕರು, ಸ್ಪೂರ್ತಿಧಾಮ, ಬೇಳೂರು, ಕುಂದಾಪುರ ತಾಲೂಕುರವರು ಕುಂದಾಪುರ ತಾಲೂಕು ಬೇಳೂರು ಗ್ರಾಮದ, ಸ್ಫೂರ್ತಿಧಾಮ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕರಾಗಿದ್ದು, ಅವರು ದಿನಾಂಕ:25/04/2015 ರಂದು ಬೆಳಿಗ್ಗೆ 04:45 ಗಂಟೆಗೆ ಸ್ಫೂರ್ತಿಧಾಮಕ್ಕೆ ವೀಕ್ಷಣೆಗಾಗಿ ಆಗಮಿಸಿದ ಸಮಯದಲ್ಲಿ ದಿನಾಂಕ:24/04/2015 ರಂದು ರಾತ್ರಿ ಯಾರೋ ಪೋಷಕರು ಅವರ ಸುಮಾರು 8 ತಿಂಗಳ ಗಂಡು ಮಗುವನ್ನು ಸಂಪೂರ್ಣವಾಗಿ ತೊರೆದು ಬಿಡುವ ಉದ್ದೇಶದಿಂದ ಅಪಾಯಕ್ಕೊಡ್ಡಿ ಸ್ಫೂರ್ತಿಧಾಮದಲ್ಲಿ ಮಕ್ಕಳ ರಕ್ಷಣೆಗಾಗಿ ಇಟ್ಟಿರುವ "ಮಮತೆಯ ತೊಟ್ಟಿಲು" ವಿನಲ್ಲಿ ಇರಿಸಿ ಹೋಗಿದ್ದನ್ನು ರಕ್ಷಿಸಿ, ವಶಕ್ಕೆ ಪಡೆದು ದತ್ತು ಕೇಂದ್ರದಲ್ಲಿ ಪುನರ್ವಸತಿ ಕಲ್ಪಿಸಿ ಆರೈಕೆ ಮಾಡಲಾಗುತ್ತಿರುವುದಾಗಿದೆ. ಈ ಬಗ್ಗೆ ಡಾ||ಕೇಶವ ಕೋಟೇಶ್ವರರವರು ನೀಡಿದ ದೂರಿನಂತೆ ಕೋಟ ಠಾಣಾ ಅಪರಾಧ ಕ್ರಮಾಂಕ 78/2015 ಕಲಂ 317 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.     

No comments: