Sunday, April 26, 2015

Daily Crimes Reported as On 26/04/2015 at 17:00 Hrs

ಅಪಘಾತ ಪ್ರಕರಣಗಳು
  • ಕುಂದಾಪುರ ಸಂಚಾರ:ದಿನಾಂಕ 25/04/2015 ರಂದು ಸಂಜೆ ಸುಮಾರು 06:00 ಗಂಟೆಗೆ ಕುಂದಾಪುರ ತಾಲೋಕು  ಕುಂಭಾಶಿ ಗ್ರಾಮದ ಹರಿಹರ ದೇವಸ್ಥಾನದ ಕ್ರಾಸ್‌, ರಾಷ್ಟ್ರೀಯ ಹೆದ್ದಾರಿ 66 ರಸ್ತೆಯಲ್ಲಿ, ಆಪಾದಿತ ಯು.ಕೆ ಅಬುಬಕ್ಕರ್  ಎಂವರು KA 20 V 7474 ನೇ  ಸ್ಕೂಟನ್ನು ಕುಂದಾಪುರ ಕಡೆಯಿಂದ ತೆಕ್ಕಟ್ಟೆ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು, ವಾಹನದ ನಿಯಂತ್ರಣ ತಪ್ಪಿ ಸ್ಕಿಡ್‌ ಆಗಿ ವಾಹನ ಸಮೇತ ರಸ್ತೆಯಲ್ಲಿ ಬಿದ್ದು ಅವರ ತಲೆಗೆ, ಮುಖಕ್ಕೆ ಹಾಗೂ ಕೈ ಕಾಲುಗಳಿಗೆ ಗಾಯ ನೋವು ಉಂಟಾಗಿ ಕೋಟೇಶ್ವರ ಎನ್‌.ಆರ್‌ ಆಚಾರ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಬಳಿಕ ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಗೆ ಹೋಗಿ ಅಲ್ಲಿ ಚಿಕಿತ್ಸೆ ಪಡೆದು, ಅಲ್ಲಿಂದ ಮಂಗಳೂರು ಯನಪೋಯಾ ಆಸ್ಪತ್ರೆಗೆ ಹೋಗಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.ಈ ಬಗ್ಗೆ ಮೊಹಮ್ಮದ್ ಆರೀಫ್‌, (40) ತಂದೆ:ಹಸೈನರ್, ವಾಸ:ಕನ್ವಕೆರೆ, ತೆಕ್ಕಟ್ಟೆ ಗ್ರಾಮ & ಅಂಚೆ, ಕುಂದಾಪುರ ತಾಲೂಕುರವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಠಾಣಾ ಅಪರಾಧ ಕ್ರಮಾಂಕ 45/2015  ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಕೋಟ:ಪಿರ್ಯಾದಿದಾರರಾದ ಎಂ.ಶಿವರಾಮ ಉಡುಪ (65) ತಂದೆ:ಶ್ರೀನಿವಾಸ ಉಡುಪ, ವಾಸ:ಶ್ರೀ ಕಾರ್ತಿಕೇಯ, ಸಾಲಿಗ್ರಾಮ, ಕಾರ್ಕಡ ಗ್ರಾಮ, ಉಡುಪಿ ತಾಲೂಕುರವರು ದಿನಾಂಕ:24/04/2015 ರಂದು ಸಂಜೆ ಸುಮಾರು 4:15  ಗಂಟೆಗೆ ಸಾಲಿಗ್ರಾಮದಿಂದ ಮನೆಗೆ ಹೋಗುವಾಗ ಅವರ ಪರಿಚಯದ ಚಂದ್ರಶೇಖರ ಅಡಿಗ ಎಂಬವರು ಸಾಲಿಗ್ರಾಮ ಪೇಟೆಯಿಂದ ರಾಷ್ಟ್ರೀಯ ಹೆದ್ದಾರಿ-66 ಕ್ಕೆ ಕೆ.ಎ 20 ಯು 9802 ನೇ ನಂಬ್ರದ ಮೊಟಾರ್ ಸೈಕಲನ್ನು ಸವಾರಿ ಮಾಡಿಕೊಂಡು ಬರುವಾಗ ಉಡುಪಿ ಕಡೆಯಿಂದ ಕೆ.ಎ 19 ಎಂ.ಎ 1913 ನೇ  ಕಾರು ಚಾಲಕ ಬಿಲ್ವಪ್ರಿಯಾ ಎಂಬವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಕಾರು ಚಲಾಯಿಸಿ ಕೆ.ಎ 20 ಯು 9802 ನೇ ನಂಬ್ರದ ಮೋಟಾರ್ ಸೈಕಲ್‌ಗೆ ಢಿಕ್ಕಿ ಹೊಡೆದ ಪರಿಣಾಮ, ಮೋಟಾರ್ ಸೈಕಲ್ ಸವಾರ ಚಂದ್ರಶೇಖರ ಅಡಿಗರವರು, ಮೋಟಾರ್ ಸೈಕಲ್ ಸಮೇತ ಟಾರು ರಸ್ತೆಯ ಮೇಲೆ ಬಿದ್ದು ರಕ್ತಗಾಯಗೊಂಡು  ಚಿಕಿತ್ಸೆ ಬಗ್ಗೆ ಆಸ್ಪತ್ರೆಗೆ ದಾಖಲುಗೊಂಡಿರುವುದಾಗಿದೆ. ಈ ಬಗ್ಗೆ ಎಂ.ಶಿವರಾಮ ಉಡುಪರವರು ನೀಡಿದ ದೂರಿನಂತೆ ಕೋಟ ಠಾಣಾ ಅಪರಾಧ ಕ್ರಮಾಂಕ 79/2015 ಕಲಂ 279,338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.  
  • ಕೋಟ:ಪಿರ್ಯಾದಿದಾರರಾದ ರಾಘವೇಂದ್ರ ಕುಲಾಲ್ (30) ತಂದೆ:ಮಂಜುನಾಥ ಕುಲಾಲ್, ವಾಸ:ಯಡಾಡಿ-ಮತ್ಯಾಡಿ, ಕುಂದಾಪುರ ತಾಲೂಕುರವರು ದಿನಾಂಕ:25/04/2015 ರಂದು ಮಧ್ಯಾಹ್ನ ಸುಮಾರು 12:30 ಗಂಟೆಗೆ ಬಿದ್ಕಲ್ ಕಟ್ಟೆಯಿಂದ ಯಡಾಡಿ-ಮತ್ಯಾಡಿಯ ತನ್ನ ಮನೆಗೆ ಹೋಗುವರೇ, ಅವರ ಕೆ.ಎ 20 ಇಬಿ 7954 ನೇ ಮೋಟಾರ್ ಸೈಕಲನ್ನು ಚಲಾಯಿಸಿಕೊಂಡು ಬರುವಾಗ ನಾಲ್ತೂರಿನ ವಸಂತಿ ಎಂಬವರ ಮನೆಯ ಬಳಿ ಟಾರು ರಸ್ತೆಯಲ್ಲಿ ಸುಗೋಡಿ ಕಡೆಯಿಂದ ಬಿದ್ಕಲ್‌ಕಟ್ಟೆ ಕಡೆಗೆ ಕೆ.ಎ 02 ಜೆ.ಎ 8740 ನೇ ಮೋಟಾರ್ ಸೈಕಲ್‌ ಸವಾರ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಾಘವೇಂದ್ರ ಕುಲಾಲ್‌ರವರ ಮೋಟಾರ್ ಸೈಕಲ್‌ಗೆ ಎದುರಿನಿಂದ  ಢಿಕ್ಕಿ ಹೊಡೆದ ಪರಿಣಾಮ, ಮೋಟಾರ್ ಸೈಕಲ್ ಸಮೇತ ಟಾರು ರಸ್ತೆಯ ಮೇಲೆ ಬಿದ್ದು, ಎಡ ಹಾಗೂ ಬಲ ಭುಜದ ಒಳ ಜಖಂ ಆಗಿ ಚಿಕಿತ್ಸೆ ಬಗ್ಗೆ ಕುಂದಾಪುರ ವಿವೇಕ ಆಸ್ಪತ್ರೆಗೆ ದಾಖಲುಗೊಂಡಿರುವುದಾಗಿದೆ. ಈ ಬಗ್ಗೆ ರಾಘವೇಂದ್ರ ಕುಲಾಲ್‌ರವರು ನೀಡಿದ ದೂರಿನಂತೆ ಕೋಟ ಠಾಣಾ ಅಪರಾಧ ಕ್ರಮಾಂಕ 80/2015 ಕಲಂ 279,337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ      
  • ಕಾಪು:ದಿನಾಂಕ:24/04/2015 ರಂದು ಬೆಳಿಗ್ಗೆ ಸುಮಾರು 11:30 ಗಂಟೆಗೆ ಪಿರ್ಯಾದಿದಾರರಾದ ಸುರೇಶ್ ಶೆಟ್ಟಿ (ಸೂರಿ) (49), ತಂದೆ:ದೇವಪ್ಪ ಶೆಟ್ಟಿ, ವಾಸ:ಪಟೇಲ್ ಶಾಪ್ ಬಳಿ, ಪಡು ಗ್ರಾಮ, ಕಾಪುರವರು ಕಾಪು ಪೇಟೆಯಲ್ಲಿರುವಾಗ ಯಾರೋ ಸ್ಥಳೀಯರು ಸುರೇಶ್ ಶೆಟ್ಟಿರವರಿಗೆ  ಫೋನ್ ಮಾಡಿ, ಕೊಪ್ಪಲಂಗಡಿ ಐಸ್ ಪ್ಲಾಂಟ್ ಕಡೆಯಿಂದ ಮೂಳೂರಿಗೆ ಹೋಗುವ ರಸ್ತೆಯಲ್ಲಿ ಓರ್ವ ಮೊಟಾರ್ ಸೈಕಲ್ ಸವಾರನು ತೆಂಗಿನ ಮರಕ್ಕೆ ಢಿಕ್ಕಿ ಹೊಡೆದು, ರಸ್ತೆಯಲ್ಲಿ ಬಿದ್ದಿರುವ ಬಗ್ಗೆ ತಿಳಿಸಿದ ಮೇರೆಗೆ ಸುರೇಶ್ ಶೆಟ್ಟಿರವರು ಸ್ಥಳಕ್ಕೆ ಹೋಗಿ ನೋಡಿದ್ದು, ಅದು ಅವರ ಪರಿಚಯದ ಮೂಳೂರಿನ ಕಿಶೋರ್ ಎಂಬವರಾಗಿದ್ದು, ತಲೆಗೆ ತೀವ್ರ ಸ್ವರೂಪದ ಗಾಯವಾಗಿದ್ದ ಕಿಶೋರ್‌ನನ್ನು ಸುರೇಶ್ ಶೆಟ್ಟಿರವರು ಚಿಕಿತ್ಸೆ ಬಗ್ಗೆ ಉಡುಪಿ ಹೈಟೆಕ್ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ನಂತರ ಕಿಶೋರ್‌ರವರ ಮನೆಯವರು, ಅದೇ ದಿನ ಸಂಜೆ ಕಿಶೋರ್‌ರವರನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ಆದರ್ಶ ಆಸ್ಪತ್ರೆಗೆ ದಾಖಲಿಸಿದ್ದು, ಕಿಶೋರ್‌ರವರು ಅಲ್ಲಿ ಚಿಕಿತ್ಸೆಯಲ್ಲಿರುತ್ತಾ, ದಿನಾಂಕ:26/04/2015 ರಂದು ಬೆಳಿಗ್ಗೆ 09:45 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿದೆ. ಕಿಶೋರನು ತನ್ನ ಮೋಟಾರು ಸೈಕಲ್ ನಂಬ್ರ ಕೆಎ 20 ಜೆ 4932 ನೇದನ್ನು ನಿರ್ಲಕ್ಷತನದಿಂದ ಸವಾರಿ ಮಾಡಿ ರಸ್ತೆ ಬದಿಯಲ್ಲಿ ಇದ್ದ ತೆಂಗಿನ ಮರಕ್ಕೆ ಡಿಕ್ಕಿ ಹೊಡೆದು ತಲೆಗೆ ತೀವ್ರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಸುರೇಶ್ ಶೆಟ್ಟಿರವರು ನೀಡಿದ ದೂರಿನಂತೆ ಕಾಪು ಠಾಣಾ ಅಪರಾಧ ಕ್ರಮಾಂಕ 84/2015 ಕಲಂ:279, 304(ಎ) ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ
  • ಕಾರ್ಕಳ ನಗರ:ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಮುರತ್ತಂಗಡಿ ನಿವಾಸಿ ಪಿರ್ಯಾದಿದಾರರಾದ ಸುಧಾಕರ ಮೂಲ್ಯ (36), ತಂದೆ:ವಿಟ್ಟು ಮೂಲ್ಯ, ವಾಸ:ದೇವಿ ನಿಲಯ, ಮುರತ್ತಂಗಡಿ, ಸಾಣೂರು ಗ್ರಾಮ, ಕಾರ್ಕಳ ತಾಲೂಕುರವರ ತಂದೆ ವಿಟ್ಟು (72) ಎಂಬವರು ಕುತ್ತಿಗೆಯ ನರದ ತೊಂದರೆಯಿಂದ ಬಳಲುತ್ತಿದ್ದವರು, ದಿನಾಂಕ:23/04/2015 ರಂದು ರಾತ್ರಿ ಸುಮಾರು 10:30 ಗಂಟೆಗೆ ಮನೆಯೊಳಗಿನಿಂದ ಮೂತ್ರ ವಿಸರ್ಜನೆಗೆಂದು ಎದ್ದು ಹೊರಗೆ ಅಂಗಳದ ಬದಿಗೆ ಹೋಗುವಾಗ ಸುಮಾರು 2½ ಅಡಿ ಎತ್ತರದ ಜಗಲಿಯಿಂದ ಆಯತಪ್ಪಿ ಮನೆಯ ಅಂಗಳಕ್ಕೆ ಬಿದ್ದಾಗ, ಅಂಗಳದಲ್ಲಿದ್ದ ಬೆಂಚಿಗೆ ಅವರ ತಲೆ ತಾಗಿ ತೀವೃ ಗಾಯಗೊಂಡವರನ್ನು ಕಾರ್ಕಳದ ಸಿಟಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ, ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರೂ, ಚಿಕಿತ್ಸೆಗೆ ಸ್ಪಂದಿಸದೇ ದಿನಾಂಕ 25/04/2015 ರಂದು 08:00 ಗಂಟೆಗೆ ಮೃತಪಟ್ಟಿರುತ್ತಾರೆ. ಈ ಬಗ್ಗೆ ಸುಧಾಕರ ಮೂಲ್ಯರವರು ನೀಡಿದ ದೂರಿನಂತೆ ಕಾರ್ಕಳ ನಗರ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 15/2015 ಕಲಂ 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: