Saturday, April 18, 2015

Daily Crimes Reported as On 18/04/2015 at 17:00 Hrs

ಕಳವು ಪ್ರಕರಣ
  • ಕೊಲ್ಲೂರು:ದಿನಾಂಕ:16/04/15 ರಂದು ರಾತ್ರಿ ಸುಮಾರು 11:00 ಗಂಟೆಗೆ ಪಿರ್ಯಾದಿದಾರರಾದ ಚಂದ್ರ ಮೊಗವೀರ (38) ತಂದೆ:ಗೋವಿಂದ ಮೊಗವೀರ, ವಾಸ:ಎತ್ತಿನ ಹಕ್ಲುಮನೆ, ಮೂಡುಮುಂದ ಅಂಚೆ, ಬೆಳ್ಳಾಲ ಗ್ರಾಮ, ಕುಂದಾಪುರ ತಾಲೂಕುರವರು ತನ್ನ ಅಣ್ಣನ ಕೆ.ಎ 20 ಯು 4138 ನೇ Splender Plus Black Color ಮೋಟಾರು ಬೈಕನ್ನು ಕೊಲ್ಲೂರು ದೇವಸ್ಥಾನಕ್ಕೆ ಸಂಬಂಧಪಟ್ಟ ಜಗದಾಂಬ ಲಾಡ್ಜ್‌ನ ಎದುರುಗಡೆ ದೇವಸ್ಥಾನದ ರಥಬೀದಿಯ ರಸ್ತೆ ಬದಿಯಲ್ಲಿ ಇಟ್ಟು, ಮಾತಾಛತ್ರ ಲಾಡ್ಜ್‌ಗೆ ಕರ್ತವ್ಯಕ್ಕೆ ಹೋಗಿದ್ದು, ಮಾರನೆ ದಿನ ತನ್ನ ಗೆಳೆಯರೊಡನೆ ಒಂದು ಕಾರಿನಲ್ಲಿ ಕುಂದಾಪುರಕ್ಕೆ ಹೋಗಿ ನಂತರ ಅಲ್ಲಿಂದ ತನ್ನ ಊರಾದ ಬೆಳ್ಳಾಲಕ್ಕೆ ಹೋಗಿ ಈ ದಿನ ತಾರೀಕು 18/04/2015 ರಂದು ಬೆಳಿಗ್ಗೆ 08:45 ಕ್ಕೆ ತಾನು ಬೈಕ್‌ ನಿಲ್ಲಿಸಿರುವ ಜಾಗಕ್ಕೆ ಬಂದು ನೋಡಲಾಗಿ ಬೈಕ್‌ ಕಾಣಿಸಿರುವುದಿಲ್ಲ. ಬಳಿಕ ದೇವಸ್ಥಾನದ ಪರಿಸರದಲ್ಲಿ ಹುಡುಕಿದ್ದು ಬೈಕ್‌ ಸಿಗದೇ ಇದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಳವಾಗಿರುವ ಬೈಕಿನ ಅಂದಾಜು ಮೌಲ್ಯ ಸುಮಾರು 30 ಸಾವಿರ ರೂಪಾಯಿ ಆಗಿರಬಹುದು.ಈ ಬಗ್ಗೆ ಚಂದ್ರ ಮೊಗವೀರರವರು ನೀಡಿದ ದೂರಿನಂತೆ ಕೊಲ್ಲೂರು ಠಾಣಾ ಅಪರಾಧ ಕ್ರಮಾಂಕ 38/2015 ಕಲಂ:379 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.  

No comments: