Saturday, April 18, 2015

Daily Crimes Reported as On 18/04/2015 at 07:00 Hrs

ಸುಲಿಗೆ ಪ್ರಕರಣ
  • ಕಾರ್ಕಳ: ದಿನಾಂಕ 07.04.2015 ರಂದು ಅಪರಾಹ್ನ 1:45 ಗಂಟೆಗೆ ಕಾರ್ಕಳ ತಾಲೂಕು ಕಸಬಾ ಗ್ರಾಮದ ಕಲ್ಲೊಟ್ಟೆ ಸೇತುವೆಯ ಬಳಿ ಫಿರ್ಯಾದಿ ಶ್ರೀಮತಿ ಬೇಬಿ ಇವರು ತನ್ನ ಮೊಮ್ಮಕ್ಕಳೊಂದಿಗೆ ಪೆರ್ವಾಜೆ ಕಡೆಯಿಂದ ತನ್ನ ಮನೆಯ ಕಡೆಗೆ ನಡೆದುಕೊಂಡು ಬರುತ್ತಿರುವಾಗ ಕಲ್ಲೊಟ್ಟೆ ಕಡೆಯಿಂದ ಹೀರೋ ಹೋಂಡಾ ಸಿ.ಡಿ-100 ಮೋಟಾರ್ ಸೈಕಲ್ಲಿನಲ್ಲಿ ಬಿಳಿ ಬಣ್ಣದಲ್ಲಿ ನೀಲಿ ಅಡ್ಡ ಗೆರೆಗಳಿರುವ ಟೀ ಶರ್ಟ್ ಧರಿಸಿರುವ ಅಪರಿಚಿತ ವ್ಯಕ್ತಿ ಸವಾರಿ ಮಾಡಿಕೊಂಡು ಬಂದು  ಫಿರ್ಯಾಧಿದಾರರ ಕುತ್ತಿಗೆಗೆ ಕೈ ಹಾಕಿ ಅವರು ಧರಿಸಿದ್ದ ಕೆಂಪು ಹವಳ ಇರುವ ಚಿನ್ನದ ಕನಕ ಮಾಲೆ ಸರವನ್ನು ಎಳೆದ ಪರಿಣಾಮ ಸರವು ಎರಡು ತುಂಡಾಗಿ ಅರ್ಧ ಭಾಗ ಕೆಳಗೆ ಬಿದ್ದಿದ್ದು, ಉಳಿದ ಅರ್ಧ ಭಾಗದಲ್ಲಿ ಮೂರು ಹವಳ ಮತ್ತು ಚಿನ್ನ ಇರುವ ಸುಮಾರು ಒಂದುವರೆ ಪವನ್ ತೂಕವಿರುವ ಸರವನ್ನು ಆರೋಪಿಯು ಸುಲಿಗೆ ಮಾಡಿಕೊಂಡು ಹೋಗಿರುತ್ತಾನೆ. ಸುಲಿಗೆಯಾಗಿರುವ ತುಂಡು ಸರದ ಅಂದಾಜು ಮೌಲ್ಯ ಸುಮಾರು 25,000 ರೂಪಾಯಿ ಆಗಬಹುದು. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ: 39/15 ಕಲಂ: 392 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಪಘಾತ ಪ್ರಕರಣ
  • ಪಡುಬಿದ್ರಿ: ದಿನಾಂಕ. 17.04.2015 ರಂದು 13:00 ಗಂಟೆಗೆ ನಡ್ಸಾಲು ಗ್ರಾಮದ  ಪಡುಬಿದ್ರಿ ಕಲ್ಸಂಕ ಬಳಿ ರಾ.ಹೆ 66 ರಲ್ಲಿ ಕೆಎ-47-1412 ನೇ ಟಿಪ್ಪರ್ ಚಾಲಕನು ಟಿಪ್ಪರ್ ನ್ನು  ಪಡುಬಿದ್ರಿ ಕಡೆಯಿಂದ ಉಡುಪಿ ಕಡೆಗೆ ಅತೀ ವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು  ಉಡುಪಿ ಕಡೆಯಿಂದ ಸುರತ್ಕಲ್ ಕಡೆಗೆ ಬರುತ್ತಿದ್ದ ಕೆಎ-19-ಝಡ್-4154 ನೇ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಚಲಾಯಿಸುತ್ತಿದ್ದ ಕೃಷ್ಣ ದೇವಾಡಿಗ ಎಂಬವರಿಗೆ ಸೊಂಟಕ್ಕೆ ಹಾಗೂ ಬಲ ಕೆನ್ನೆಗೆ ರಕ್ತಗಾಯವಾಗಿರುತ್ತದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಶ್ರೀಜಿತ್ 11 ವರ್ಷ ಎಂಬವರಿಗೆ ಮುಖಕ್ಕೆ ಹಾಗೂ ತಲೆಗೆ ತೀವ್ರ ಸ್ವರೂಪದ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ: 51/15 ಕಲಂ: 279, 337,338 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: