Thursday, April 16, 2015

Daily Crimes Reported as On 16/04/2015 at 17:00 Hrs


ಅಪಘಾತ ಪ್ರಕರಣ
  • ಬ್ರಹ್ಮಾವರ:ದಿನಾಂಕ:15/04/2015 ರಂದು 12:15 ಗಂಟೆಗೆ ಉಡುಪಿ ತಾಲೂಕು ಹೇರಾಡಿ ಗ್ರಾಮದ ರಂಗನಕೆರೆ ಬಸ್ಸ್ ನಿಲ್ಲಾಣದ ಬಳಿ ಆರೋಪಿ ಯತೀಶ ತನ್ನ ಮೋಟಾರ್‌ ಸೈಕಲ್ ನಂಬ್ರ ಕೆಎ-20-ಎಕ್ಸ್-7748 ನೇದನ್ನು ಮಂದಾರ್ತಿ ಕಡೆಯಿಂದ ಬಾರ್ಕೂರು ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಎಡಬದಿಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ, ಪಿರ್ಯಾದಿದಾರರಾದ ಅರುಣ (24) ತಂದೆ:ಬಾಬುನಾಯ್ಕ ವಾಸ:ರಂಗನಕೆರೆ, ಹೇರಾಡಿ ಗ್ರಾಮ, ಉಡುಪಿ ತಾಲೂಕುರವರ ಪರಿಚಯದ ಜಯರಾಮ ಎಂಬವರಿಗೆ ಢಿಕ್ಕಿ ಹೊಡೆದ ಪರಿಣಾಮ ಜಯರಾಮ ಎಂಬವರು ರಸ್ತೆಗೆ ಬಿದ್ದು ತಲೆಯ ಬಲಭಾಗಕ್ಕೆ ಹಾಗೂ ಬಲ ಕಾಲಿನ ಕೋಲು ಕಾಲಿಗೆ ತೀವ್ರ ಸ್ವರೂಪದ ಗಾಯವಾಗಿದ್ದು, ಆರೋಪಿ ಮೋಟಾರು ಸೈಕಲ್ ಸವಾರ ಯತೀಶ ಹಾಗೂ ಸಹಸವಾರ ರಮೇಶ ಎಂಬವರಿಗೂ ಗಾಯವಾಗಿರುವುದಾಗಿದೆ.ಈ ಬಗ್ಗೆ ಅರುಣರವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣಾ ಅಪರಾಧ ಕ್ರಮಾಂಕ 62/15 ಕಲಂ:279,337,338 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕಳವು ಪ್ರಕರಣ
  • ಕಾರ್ಕಳ ಗ್ರಾಮಾಂತರ:ದಿನಾಂಕ:14/03/2015 ರಂದು ರಾತ್ರಿ 20:15 ಗಂಟೆಯಿಂದ ದಿನಾಂಕ:15/04/2015 ರಂದು ಬೆಳಗ್ಗಿನ ಜಾವ 03:30 ಗಂಟೆಯ ನಡುವಿನ ಅವಧಿಯಲ್ಲಿ ಕಾರ್ಕಳ ತಾಲೂಕು ಕಲ್ಯಾ ಗ್ರಾಮದ ಕುಂಟಾಡಿ ಕೈಕಂಬ ಎಂಬಲ್ಲಿರುವ ಪಿರ್ಯಾದಿದಾರರಾದ ಶ್ರೀಮತಿ ಕೆ.ಶಾಂತಾ ಆಚಾರಿ (54) ಗಂಡ:ಎಂ.ಕೆ ಜನಾರ್ಧನ ಆಚಾರಿ, ವಾಸ:ಕೈಕಂಬ, ಕುಂಟಾಡಿ ಕಲ್ಯಾ ಗ್ರಾಮ, ಕಾರ್ಕಳ ತಾಲೂಕುರವರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಯಾರೋ ಕಳ್ಳರು ಮನೆಯ ಬಾಗಿಲ ಬೀಗವನ್ನು ಬಲತ್ಕಾರವಾಗಿ ಒಡೆದು ಒಳ ಪ್ರವೇಶೀಸಿ ಮನೆಯಲ್ಲಿ ಕೋಣೆಯೊಳಗಿದ್ದ ಸೂಟ್‌ಕೇಸ್‌ನಿಂದ ಕೆ.ಶಾಂತಾ ಆಚಾರಿರವರ 34,000/- ರೂಪಾಯಿ ಹಣ ಹಾಗೂ ಕೆ.ಶಾಂತಾ ಆಚಾರಿರವರ ಗಂಡನ ಸುಮಾರು 2 ಬೆಳ್ಳಿಯ ತಗಡಿನ ತುಂಡುಗಳನ್ನು, 2 ಬೆಳ್ಳಿಯ ಉಂಗುರ ಹಾಗೂ  ಕೆ.ಶಾಂತಾ ಆಚಾರಿರವರ ಮಗನ 3 ಗ್ರಾಂ ತೂಕದ ಚಿನ್ನದ ಕಿವಿಯ ಟಿಕ್ಕಿ ಮತ್ತು ಹವಳದ ಬೆಳ್ಳಿ ಸರವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಳವಾದ ಸೊತ್ತಿನ ಒಟ್ಟು ಮೊತ್ತ 40,000/- ರೂಪಾಯಿ ಆಗಿದೆ.ಈ ಬಗ್ಗೆ ಕೆ.ಶಾಂತಾ ಆಚಾರಿರವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಠಾಣಾ ಅಪರಾಧ ಕ್ರಮಾಂಕ 59/2015 ಕಲಂ:457,380 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಮನುಷ್ಯ ಕಾಣೆ ಪ್ರಕರಣ
  • ಉಡುಪಿ ನಗರ:ಪಿರ್ಯಾದಿದಾರರಾದ ಹನುಮಪ್ಪ (42), ತಂದೆ:ಯಮುನಪ್ಪ, ವಾಸ ಹನುಮಂತ ನಗರ, ನಿಟ್ಟೂರು, ಪುತ್ತೂರು ಗ್ರಾಮ ಉಡುಪಿರವರ ತಮ್ಮ ಮೈಲಾರಪ್ಪ (40) ನವರು ಕೂಲಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 10/04/2015 ರಂದು ಬೆಳಗ್ಗೆ 08:45 ಗಂಟೆಗೆ ಕೂಲಿ ಕೆಲಸಕ್ಕೆಂದು ಮನೆಯಿಂದ ಹೋದವರು ವಾಪಾಸು ಬಾರದೇ ಇದ್ದು, ಈ ಬಗ್ಗೆ ಹನುಮಪ್ಪರವರ ಸಂಬಂಧಿಕರು ಸ್ವಂತ ಊರಾದ ಬಾದಾಮಿ ಮುಂತಾದ ಕಡೆಗಳಲ್ಲಿ ವಿಚಾರಿಸಲಾಗಿ ಪತ್ತೆಯಾಗಿರುವುದಿಲ್ಲ, ಆತನ ಮೊಬೈಲ್ ನಂಬ್ರಕ್ಕೆ ಕರೆ ಮಾಡಿದಾಗ ಸ್ವಿಚ್ಡ್‌ ಆಫ್ ಆಗಿರುತ್ತದೆ, ಕಾಣೆಯಾದವರ ಪತ್ತೆ ಬಗ್ಗೆ ಉತ್ತರ ಕರ್ನಾಟಕಲ್ಲಿ ಹುಡುಕಾಟದಲ್ಲಿದ್ದರಿಂದ ತಡವಾಗಿ ದೂರು ನೀಡಿರುವುದಾಗಿದೆ.ಈ ಬಗ್ಗೆ ಹನುಮಪ್ಪರವರು ನೀಡಿದ ದೂರಿನಂತೆ ಉಡುಪಿ ನಗರ ಠಾಣಾ ಅಪರಾಧ ಕ್ರಮಾಂಕ 88/2015 ಕಲಂ ಮನುಷ್ಯ ಕಾಣೆ ಎಂಬುದಾಗಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
  • ಗಂಗೊಳ್ಳಿ:ಕುಂದಾಪುರ ತಾಲೂಕು ತ್ರಾಸಿ ಗ್ರಾಮದ ದೇವಳಿ ನಿವಾಸಿ ಶ್ರೀಮತಿ ಹೆಲೆನ್ ಲೂವಿಸ್ (63) ಗಂಡ:ಚಾರ್ಲಿ ಲೂವಿಸ್, ವಾಸ:ದೇವಳ್ಳಿ, ತ್ರಾಸಿ ಗ್ರಾಮ, ಕುಂದಾಪುರ ತಾಲೂಕುರವರ ಮಗ ಮಾರ್ಟಿನ್ ಲೂಯೀಸ್ (41) ಇವರು ದಿನಾಂಕ:08/04/2015 ರಂದು ಬೆಳಿಗ್ಗೆ 10:00 ಗಂಟೆಗೆ ಮನೆಯಿಂದ ಹೊರಗಡೆ ಕಾರ್ಯಕ್ರಮಕ್ಕೆ ಹೋಗುವುದಾಗಿ ತಿಳಿಸಿ ಹೋದವರು ವಾಪಾಸು ಮನೆಗೆ  ಬಾರದೇ ಕಾಣೆಯಾಗಿದ್ದು ಈ ತನಕ ಪತ್ತೆಯಾಗಿರುವುದಿಲ್ಲ ಎಂಬುದಾಗಿ ಶ್ರೀಮತಿ ಹೆಲೆನ್ ಲೂವಿಸ್‌ರವರು ನೀಡಿದ ದೂರಿನಂತೆ ಗಂಗೊಳ್ಳಿ ಠಾಣಾ ಅಪರಾಧ ಕ್ರಮಾಂಕ 49/2015 ಕಲಂ:ಗಂಡಸು ಕಾಣೆ ಎಂಬುದಾಗಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: