Thursday, April 16, 2015

Daily Crimes Reported as On 16/04/2015 at 07:00 Hrsಅಸ್ವಾಭಾವಿಕ ಮರಣ ಪ್ರಕರಣ

  • ಕುಂದಾಪುರ:  ದಿನಾಂಕ 15/04/2015 ರಂದು ಸಂಜೆ 5:15 ಗಂಟೆಗೆ ಜೆ.ಕೆ. ರೆಸಿಡೆನ್ಸಿ ಯಲ್ಲಿ  ರಲ್ಲಿ ಓರ್ವ ಮಹಿಳೆ  ಅಸ್ವಸ್ಥರಾಗಿ  ನೆಲದ ಮೇಲೆ ಬಿದ್ದಿದ್ದು ಆಗ ಪಿರ್ಯಾದಿ ಚೇತನ್ ಕುಮಾರ್ ಪಿ ಇವರು ರೂಮ್ ಗೆ ಹೋಗಿ   ಅಲ್ಲಿ  ನೆಲದ ಮೇಲೆ  ಅಸ್ವಸ್ಥರಾಗಿ  ಬಿದ್ದು ಉಸಿರಾಡುತ್ತಿದ್ದ ಮಹಿಳೆಯನ್ನು ಚಿಕಿತ್ಸೆ ಬಗ್ಗೆ  ಕುಂದಾಪುರ ಸರ್ಕಾರಿ ಅಸ್ಪತ್ರೆಗೆ  ಕರೆತಂದಾಗ ಆಕೆ ಮೃತಪಟ್ಟಿರುವುದನ್ನು ತಿಳಿಸಿರುತ್ತಾರೆ. ಈ ಬಗ್ಗೆ ಕುಂದಾಪುರ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 11/2015 ಕಲಂ:174(ಸಿ)  ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅಪಘಾತ ಪ್ರಕರಣ

  • ಕಾಪು: ದಿನಾಂಕ 15-04-2015 ರಂದು ಸಂಜೆ 17:10 ಗಂಟೆಗೆ ಪಿರ್ಯಾದಿ ಕೆ.ಪಿ ಶ್ರೀನಿವಾಸ ತಂತ್ರಿ ಇವರ ಸ್ನೇಹಿತರಾದ ಅನಂತಮೂರ್ತಿ ರವರು ತನ್ನ ಬಾಬ್ತು ಸ್ಕೂಟರ್‌ ನಂಬ್ರ  ಕೆಎ- 04 -ಇಕೆ -589 ನೇದರಲ್ಲಿ ರಾಹೇ 66 ರಲ್ಲಿ ಸವಾರಿ ಮಾಡಿಕೊಂಡು ಕಲ್ಯಾದಿಂದ ಕಾಪು ಕಡೆಗೆ ಬರುತ್ತಾ ಕಾಪು ಪಡು ಗ್ರಾಮದ ಕ್ವಾಲೀಟಿ ಕಾಂಪ್ಲೆಕ್ಸ್‌ ಬಳಿ ತಲುಪುತ್ತಿದ್ದಂತೆ  ಓರ್ವ ಕಾರು ಚಾಲಕನು ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಕೆಎ -19 ಎಎ- 7563 ನೇ ಕಾರನ್ನು ಅಡ್ಡಾದಿಡ್ಡಿಯಾಗಿ ಹಾಗೂ ಅತೀ ವೇಗ  ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸ್ನೇಹಿತರು ಸವಾರಿ  ಮಾಡಿಕೊಂಡು ಹೋಗುತ್ತಿದ್ದ ಸ್ಕೂಟರ್‌ಗೆ ಹಿಂದಿನಿಂದ ಬಂದು ಡಿಕ್ಕಿ ಹೊಡೆದು ಸುಮಾರು ದೂರದ ವರೆಗೆ ಅನಂತಮೂರ್ತಿರವರನ್ನು ವಾಹನದ ಸಮೇತರಾಗಿ ಎಳೆದುಕೊಂಡು ಹೋದ ಪರಿಣಾಮ ಅವರ ತಲೆಗೆ ಹಾಗೂ ಕೈಕಾಲುಗಳಿಗೆ ತೀವ್ರತರಹದ ಗಾಯವಾಗಿದ್ದು , ಚಿಕಿತ್ಸೆಯ ಬಗ್ಗೆ ಉಡುಪಿ ಹೈಟೇಕ್‌ ಆಸ್ಪತ್ರೆಗೆ ದಾಖಲಿಸಲಾಗಿರುತ್ತದೆ. ಈ ಅಪಘಾತವೆಸಗಿದ್ದ  ಕೆಎ 19 ಎಎ 7563 ನೇ ಕಾರು ಚಾಲಕನು ತನ್ನ ಬಾಬ್ತು ವಾಹನವನ್ನು ನಿಲ್ಲಿಸಿ ಪರಾರಿಯಾಗಿರುತ್ತಾರೆ.ಈ ಬಗ್ಗೆ ಕಾಪು ಪೊಲೀಸ್‌ ಠಾಣೆಯಲ್ಲಿ ಅಪರಾಧ ಪ್ರಕರಣ 74/2015 ಕಲಂ 279,337 ಐಪಿಸಿ ಕಲಂ 134(ಎ)&(ಬಿ) ಜೊತೆ 187 ಐಎಂವಿ ಕಾಯಿದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: