Tuesday, April 14, 2015

Daily Crimes Reported as On 14/04/2015 at 07:00 Hrs



ಅಪಘಾತ ಪ್ರಕರಣ

  • ಕುಂದಾಪುರ:  ದಿನಾಂಕ 13/04/2015 ರಂದು ಸಮಯ  ಸುಮಾರು ಮಧ್ಯಾಹ್ನ 3:20 ಗಂಟೆಗೆ  ಕುಂದಾಪುರ ತಾಲೂಕು  ಹಂಗಳೂರು   ಗ್ರಾಮದ  ದುರ್ಗಾಂಬಾ ಗ್ಯಾರೇಜ್ ಬಳಿ ರಾ.ಹೆ 66 ರಸ್ತೆಯಲ್ಲಿ  ಆಪಾದಿತ ಶಶಿಕಾಂತ ಎಂಬವರು KA20-B-4687  ನೇ ಟಿಪ್ಪರ್  ಲಾರಿಯನ್ನು ಕುಂದಾಪುರ ಕಡೆಯಿಂದ ಕೊಟೇಶ್ವರ ಕಡೆಗೆ  ಅತೀವೇಗ  ಹಾಗೂ  ಅಜಾಗರುಕತೆಯಿಂದ  ಚಲಾಯಿಸಿಕೊಂಡು  ಬಂದು ಗುರುಮೂರ್ತಿ ಎಂಬವರು ಸವಾರಿ ಮಾಡಿಕೊಂಡು ಪಿರ್ಯಾದಿ ಮಲ್ಲಿಕಾರ್ಜುನ್  ಎಸ್‌. ಆರಿಯಾಳ್‌ ಇವರು ಸಹ ಸವಾರರಾಗಿ  ಅದೇ  ದಿಕ್ಕಿ ಹೋಗುತ್ತಿದ್ದ  ಟಿವಿಎಸ್  ಜುಪಿಟರ್ ಸ್ಕೂಟರ್‌  ನ್ನು ಓವರ್‌ಟೇಕ್ ಮಾಡಿ    ಬಳಿಕ  ರಾ.ಹೆ  ರಸ್ತೆಯ  ಎಡಕ್ಕೆ ಚಲಾಯಿಸಿ  ಒಮ್ಮಲೆ  ನಿಲ್ಲಿಸಿದ  ಪರಿಣಾಮ  ಟಿವಿಎಸ್  ಜುಪಿಟರ್ ಸ್ಕೂಟರ್‌  ಟಿಪ್ಪರ್ ನ ಹಿಂಬದಿಗೆ  ತಾಗಿ  ಅಪಘಾತಕ್ಕೆ  ಒಳಗಾಗಿ  ಪಿರ್ಯಾದಿ  ಹಾಗೂ ಸ್ಕೂಟರ್ ಸವಾರ ಗುರುಮೂರ್ತಿ ಗಾಯಗೊಂಡು ಕುಂದಾಪುರ  ಚಿನ್ಮಯಿ  ಆಸ್ಪತ್ರೆಯಲ್ಲಿ    ಚಿಕಿತ್ಸೆ ಬಗ್ಗೆ  ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಪ್ರಕರಣ  39/15 ಕಲಂ: ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಕಾರ್ಕಳ: ಫಿರ್ಯಾದಿ ಅಬ್ದುಲ್ ಹಮೀದ್  ಇವರು ಸ್ವಂತ ಕೆಲಸದ ನಿಮಿತ್ತ ದಿನಾಂಕ: 13/04/2015 ರಂದು ತನ್ನ ಮೋಟಾರು ಸೈಕಲ್ ನಲ್ಲಿ ಶೃಂಗೇರಿ ಕಡೆಗೆ ಬಜಗೋಳಿ ಕಡೆಯಿಂದ ಹೋಗುತ್ತಿರುವಾಗ ಮಾಳ ಚೆಕ್ ಪೋಸ್ಟ್  ನಿಂದ ಎಸ್ ಕೆ. ಬಾರ್ಡ ರ್ ಕಡೆಗೆ  2 ಕಿ.ಮೀ ದೂರ ಮಾಳ ಘಾಟ್ ನ ಏರಿಕೆ ತಿರುವು ರಸ್ತೆಯಲ್ಲಿ ಕೆಎ 19 ಡಿ 444 ನೇ ಬಸ್ಸಿನ ಚಾಲಕನು ಅಜಾಗರೂಕತೆಯಿಂದ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ ಎದುರಿನಿಂದ ಅಂದರೆ ಎಸ್.ಕೆ. ಬಾರ್ಡರ್ ಕಡೆಯಿಂದ ಮಾಳ ಚೆಕ್ ಪೋಸ್ಟ್ ಕಡೆಗೆ ಬರುತ್ತಿದ್ದ ಕೆಎ19 ಎಂಸಿ 5764 ನೇ ಸ್ವಿಫ್ಟ್ ಕಾರಿಗೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಎರಡೂ ವಾಹನಗಳು ಜಖಂಗೊಂಡು,  ಕಾರಿನಲ್ಲಿದ್ದ ಚಾಲಕ ಅಬ್ದುಲ್  ರಹಿಮಾನ್,ಅವರ ಹೆಂಡತಿ ಆಬಿದಾ, ಹೆಣ್ಣು ಮಕ್ಕಳಾದ ಜೈನಭಾ, ಹಾಗೂ ಸಾರಾ ಆಫಿಯಾರವರಿಗೆ ರಕ್ತಗಾಯ ಉಂಟಾಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಪ್ರಕರಣ  56/15 ಕಲಂ: ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಹಲ್ಲೆ ಪ್ರಕರಣ

  • ಕೋಟ: ಪಿರ್ಯಾದಿ ವೆಂಕಟೇಶ ಕುಲಾಲ್ ಇವರು ದಿನಾಂಕ:13/04/2015 ರಂದು ಬೆಳಿಗ್ಗೆ 08:00 ಗಂಟೆ ಸಮಯಕ್ಕೆ ಕುಂದಾಪುರ ತಾಲೂಕು ಹಾರ್ದಳ್ಳಿ ಮಂಡಳ್ಳಿ ಗ್ರಾಮದ ಮಣಿಗೇರಿ ಕೋಣಿಮನೆ ಎಂಬಲ್ಲಿರುವ ತನ್ನ ಮನೆಯ ಅಂಗಳದಲ್ಲಿ ತಮ್ಮ ಚಂದ್ರ ಹಾಗೂ ತಂಗಿ ಲಕ್ಷ್ಮೀ ಎಂಬುವರ ಜೊತೆ ಮಾತನಾಡುತ್ತಿರುವಾಗ ಇನ್ನೊಬ್ಬ ತಮ್ಮನಾದ ಸಂಜೀವ ಕುಲಾಲನು ಕತ್ತಿಯನ್ನು ಹಿಡಿದು ಕೊಂಡು ಪಿರ್ಯಾದಿದಾರರ ಬಳಿಗೆ ಬಂದು ಪಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯವಾಗಿ ಬೈದು ಕೈಯಲ್ಲಿದ್ದ ಕತ್ತಿಯನ್ನು ಬೀಸಿದಾಗ ಬಲ ಕೈ  ಹಸ್ತಕ್ಕೆ ತಾಗಿ  ರಕ್ತಗಾಯವಾಗಿದ್ದು ಇದನ್ನು ತಡೆಯಲು ಬಂದ ಲಕ್ಷ್ಮೀ ಕುಲಾಲ್ತಿಯವರಿಗೆ ಕತ್ತಿ ಬೀಸಿದ ಪರಿಣಾಮ  ಎಡ ಕೈಯ ಕೋಲು ಕೈಗೆ  ರಕ್ತಗಾಯವಾಗಿ ಚಿಕಿತ್ಸೆ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲು ಗೊಂಡಿರುವುದಾಗಿದೆ. ಆರೋಪಿಯು ಪಿರ್ಯಾದಿದಾರರನ್ನು  ಉದ್ದೇಶಿಸಿ ಜೀವ ಬೆದರಿಕೆ ಹಾಕಿರುತ್ತಾನೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ ಅಪರಾಧ ಪ್ರಕರಣ 70/15 ಕಲಂ: 324, 504, 506 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಶಂಕರನಾರಾಯಣ: ದಿನಾಂಕ 13.04.15 ರಂದು ಬೆಳಿಗ್ಗೆ 11:00 ಗಂಟೆಗೆ  ಕುಂದಾಪುರ  ತಾಲೂಕಿನ ಕೊಡ್ಲಾಡಿ   ಗ್ರಾಮದ  ಮೇಲ್ದಾಸನಮನೆ ಎಂಬಲ್ಲಿ ಫಿರ್ಯಾದಿ ಶ್ರೀಮತಿ ಮುತ್ತಮ್ಮ ಶೆಡ್ತಿ ಇವರು ಮನೆಯ ಒಳಗಿನ ಅಡುಗೆ ಕೋಣೆಯನ್ನು ಒರೆಸುತ್ತಿರುವಾಗ ಆರೋಪಿ ಕುಶಲ್ಶೆಟ್ಟಿ ಯು  ಕೈಯಲ್ಲಿ ಕತ್ತಿ ಹಿಡಿದು ಬಂದು ನಿನ್ನನ್ನು ಕೊಂದು  ಹಾಕುತ್ತೇನೆ ಎಂದು ಹೇಳಿ ಜೀವ ಬೆದರಿಕೆ  ಹಾಕಿ  ಫಿರ್ಯಾದಿದಾರರ ಎಡಕೈಯ ಭುಜದ ಬಳಿ ಹಾಗೂ ಎಡಕಾಲಿನ ಮಣಿಗಂಟಿನ ಕಡಿದಿರುತ್ತಾನೆ ಇದರ ಪರಿಣಾಮ ಫಿರ್ಯಾದಿದಾರರ ಎಡಕೈಯ ಭುಜದ ಬಳಿ ಹಾಗೂ ಎಡಕಾಲಿನ ಮಣಿಗಂಟಿನ ಬಳಿ ತೀವ್ರ  ಸ್ವರೂಪದ ರಕ್ತ ಗಾಯವಾಗಿರುತ್ತದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಅಪರಾಧ ಪ್ರಕರಣ 64/15 ಕಲಂ: 326, 506(2) ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಮಟ್ಕಾ ಜುಗಾರಿ ಪ್ರಕರಣ

  • ಕೋಟ: ಕಮಲಾಕರ್ ಆರ್ ನಾಯಕ್ ಪಿ.ಎಸ್.ಐ ಕೋಟ ಠಾಣೆ ಇವರು ದಿನಾಂಕ:13/04/2015 ರಂದು 17:00 ಗಂಟೆಗೆ ಸಿಬ್ಬಂದಿಗಳೊಂದಿಗೆ ಇಲಾಖಾ ಜೀಪು ನಂಬ್ರ ಕೆ.ಎ:20 ಜಿ:208 ನೇದರಲ್ಲಿ ರೌಂಡ್ಸ ಕರ್ತವ್ಯದಲ್ಲಿರುವ ವೇಳೆ  ಕುಂದಾಪುರ ತಾಲೂಕು ತೆಕ್ಕಟ್ಟೆ ಗ್ರಾಮದ ಗಣೇಶ ವೈನ್‌ ಶಾಪ್  ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ನಡೆಯುತ್ತಿರುವ ಬಗ್ಗೆ ದೊರೆತ ಖಚಿತ ವರ್ತಮಾನದಂತೆ 17:45  ಗಂಟೆಗೆ ದಾಳಿ ನಡೆಸಿ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ಬಾಬು ಎಂಬುವವನನ್ನು  ದಸ್ತಗಿರಿ ಮಾಡಿ ಮಟ್ಕಾ ಜುಗಾರಿ ಆಟಕ್ಕೆ ಬಳಸಿದ ನಗದು 1380/.ರೂಪಾಯಿ, ಮಟ್ಕಾ ನಂಬ್ರ ಬರೆದ ಚೀಟಿ-1. ಹಾಗೂ ಬಾಲ್ ಪೆನ್ನು-1 ನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಆರೋಪಿಯು  ಮಟ್ಕಾ ಜುಗಾರಿ ಆಟದ ಬಗ್ಗೆ ಸಂಗ್ರಹಿಸಿದ ಹಣವನ್ನು ಬಿಡ್ಡರ್ ಕುಂದಾಪುರದ ಸುರೇಶ ಎಂಬುವವರಿಗೆ ನೀಡುತ್ತಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ ಅಪರಾಧ ಪ್ರಕರಣ 71/15 ಕಲಂ:78(1)(3) ಕರ್ನಾಟಕ ಪೊಲೀಸ್ ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಹೆಬ್ರಿ: ನಾಗೇಶ (25) ಎಂಬುವವವರು ಸುಮಾರು 4-5 ದಿನಗಳಿಂದ ಮನೆಗೆ ಬಾರದೇ ಇದ್ದು, ವಿಪರೀತ ಶರಾಬು ಕುಡಿಯುವ ಅಭ್ಯಾಸವನ್ನು ಹೊಂದಿದವರಾಗಿದ್ದು, ಸರಿಯಾದ ಕೂಲಿ ಸಿಗದೇ ಶರಾಬು ಕುಡಿಯಲು ಹಣದ ಅಡಚಣೆಯಿಂದಾಗಿ ಜೀವನದಲ್ಲಿ ಜಿಗುಪ್ಸೆಗೊಂಡು  ದಿನಾಂಕ 13-04-2015 ರಂದು ಸಂಜೆ ಸುಮಾರು 5:00 ಗಂಟೆಗೆ ತನ್ನ ಸ್ವಂತ ಮನೆಯಾದ ಹೆಬ್ರಿ ಬೈಲು ಮನೆಯಲ್ಲಿ  ನೇಣು ಬಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ.  ಈ ಬಗ್ಗೆ ಹೆಬ್ರಿ  ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 13/2015 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
  • ಶಂಕರನಾರಾಯಣ : ಕುಶಲ್ಶೆಟ್ಟಿಯು ವಿಪರೀತ ಮದ್ಯಪಾನ ಮಾಡುತ್ತಿದ್ದು ಸರಿಯಾಗಿ ಕೆಲಸ ಮಾಡದೇ ಇದ್ದು ಆತನು ತನ್ನ ತಾಯಿ ಮುತ್ತಮ್ಮ ಶೆಡ್ತಿ ರವರಿಗೆ ದಿನಾಂಕ 13-04-2015 ರಂದು ಕತ್ತಿಯಿಂದ  ಕಡಿದಿರುತ್ತಾನೆ. ವಿಚಾರದಲ್ಲಿ ಆತ ಮನನೊಂದು ಅಥವಾ ಹೆದರಿ ದಿನಾಂಕ 13-04-2015 ರಂದು ಮದ್ಯಾಹ್ನಾ 12:00 ಗಂಟೆಯಿಂದ ರಾತ್ರಿ 9:00 ಗಂಟೆಯ ನಡುವಿನ ಅವದಿಯಲ್ಲಿ ತನ್ನ ಮನೆಯಾದ ಕುಂದಾಪುರ ತಾಲೂಕು ಕೊಡ್ಲಾಡಿ ಗ್ರಾಮದ ಕೊಡ್ಲಾಡಿ ಎಂಬಲ್ಲಿ ಯಾವುದೋ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿದೆ. ಈ ಬಗ್ಗೆ ಶಂಕರನಾರಾಯಣ  ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 04/2015 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: