Monday, April 13, 2015

Daily Crime Reports As on 13/04/2015 at 19:30 Hrs

ಅಪಘಾತ ಪ್ರಕರಣಗಳು
  • ಅಮಾಸೆಬೈಲು: ದಿನಾಂಕ 13-04-2015 ರಂದು ಬೆಳಿಗ್ಗೆ 08:15 ಗಂಟೆಗೆ ಹೊಸಂಗಡಿ ಕೆಪಿಸಿ ವಾಹನ ನಂಬ್ರ ಕೆಎ 20 8774 ನೇ ಮಿನಿ ಬಸ್ ನಲ್ಲಿ ಫಿರ್ಯಾದಿದಾರರಾದ ಸುನಿಲ್ ಎನ್ ಎ (33) ತಂದೆ: ಅಪ್ಪು ವಾಸ: ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು ಕೆಪಿಸಿ ಹೊಸಂಗಡಿ ಕುಂದಾಪುರ ತಾಲೂಕು ರವರು ಹಾಗೂ ಇತರರನ್ನು ಪವರ್ ಹೌಸ್ ಗೆ ಕರೆದುಕೊಂಡು ಹೋಗುತ್ತಿರುವಾಗ ಚಾಲಕ ಲಿಂಗಪ್ಪ ಗೌಡರ ಅತೀ ವೇಗ ಮತ್ತು ಅಜಾಗರೂಕತೆಯಿಂದ ಪವರ್ ಹೌಸ್ ಗೆ ಹೋಗುವ ರಸ್ತೆಯ ಬಾಗೀ ಮನೆ ಮೆಟ್ಕಲ್ ಗುಡ್ಡೆ ಎಂಬಲ್ಲಿ ವಾಹನವು ಚರಂಡಿಗೆ ಹೋಗಿ ಅಡ್ಡ ಬಿದ್ದು ಬಸ್ಸಿನಲ್ಲಿದ್ದ  ಶಿವಲಿಂಗಪ್ಪ, ಮತ್ತು ಶ್ರೀಮತಿ  ರಾಧಿಕಾ ಎಂಬವರಿಗೆ ರಕ್ತಗಾಯವಾಗಿರುತ್ತದೆ ಎಂಬುದಾಗಿ ಸುನಿಲ್ ಎನ್ ಎ ರವರು ನೀಡಿದ ದೂರಿನಂತೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 14/2015 ಕಲಂ 279, 337 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಪಡುಬಿದ್ರಿ: ದಿನಾಂಕ 13/04/2015 ರಂದು ಬೆಳಿಗ್ಗೆ 10:30 ಗಂಟೆಗೆ ಪಿರ್ಯಾದಿದಾರರಾದ ರಾಜೇಶ್‌ ಗೌಡ, 32 ವರ್ಷ, ತಂದೆ: ರಾಮಣ್ಣ ಗೌಡ, ವಾಸ: ಅಂಗಾರಗುಡ್ಡೆ ಹೌಸ್‌, ಪಟ್ರಮೆ ಅಂಚೆ ಮತ್ತು ಗ್ರಾಮ, ಬೆಳ್ತಂಗಡಿ ತಾಲೂಕು, ದ.ಕ. ಜಿಲ್ಲೆ ರವರು ತನ್ನ ಲಾರಿ ನಂಬ್ರ ಕೆಎ 19 ಡಿ 8827 ನೇದರಲ್ಲಿ ಮೀನು ಲೋಡು ಮಾಡಿಕೊಂಡು ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದಾಗ ಹೆಜಮಾಡಿಯ ಬಸ್ತಿ ಪಡ್ಪು ಎಂಬಲ್ಲಿ ರಾ.ಹೆ.66 ರಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿರುವ ರಸ್ತೆ ವಿಭಜಕದ ಎಡಭಾಗದಲ್ಲಿ ಹೋಗುವರೇ ನಿಧಾನವಾಗಿ ಲಾರಿಯನ್ನು ತಿರುಗಿಸುತ್ತಿದ್ದಾಗ ಮಂಗಳೂರಿನಿಂದ ಉಡುಪಿ ಕಡೆಗೆ ಲಾರಿ ನಂಬ್ರ ಕೆಎ 01 ಬಿ 1569 ನೇದರ ಚಾಲಕನು ತನ್ನ ಲಾರಿಯನ್ನು ಅತೀ ವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದುದಾರರ ಲಾರಿಗೆ ಢಿಕ್ಕಿ ಹೊಡೆದ ಪರಿಣಾಮ ಎರಡೂ ಲಾರಿಗಳು ಜಖಂಗೊಂಡಿದ್ದು, ಫಿರ್ಯಾದುದಾರರಿಗೆ ಮತ್ತು ಸಹಚಾಲಕ ನಾಗಭೂಷಣ್‌ರವರಿಗೆ ತಲೆಗೆ ಹಾಗೂ ಮೈಗೆ ರಕ್ತಗಾಯವಾಗಿದ್ದು, ಆರೋಪಿ ಚಾಲಕನಿಗೆ ತಲೆ ಹಾಗೂ ಇತರ ಕಡೆಗೆ ತೀವ್ರ ಸ್ವರೂಪದ ಗಾಯವಾಗಿರುತ್ತದೆ. ಸದ್ರಿ ಅಪಘಾತಕ್ಕೆ ಲಾರಿ ನಂಬ್ರ ಕೆಎ 01 ಬಿ 1569 ನೇದರ ಚಾಲಕನ ಅತೀ ವೇಗ ಹಾಗೂ ಅಜಾಗರುಕತೆಯ ಚಾಲನೆಯೇ ಕಾರಣವಾಗಿರುತ್ತದೆ ಎಂಬುದಾಗಿ ರಾಜೇಶ್‌ ಗೌಡ ರವರು ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 48/2015 ಕಲಂ 279, 338 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
ವಂಚನೆ ಪ್ರಕರಣ

  • ಕಾಪು: ಪಿರ್ಯಾದಿದಾರರಾದ ಎಂ. ಜಾಫರ್ ಸಾಧಿಕ್ (34) ತಂದೆ: ಮೊಹಮ್ಮದ್ ಹನೀಫ್ ವಾಸ ಸತ್ಯದುರ್ಗ ಕಾಂಪ್ಲೆಕ್ಸ್ ಕಟಪಾಡಿ ಮೂಡಬೆಟ್ಟು ಗ್ರಾಮ ರವರು ಹುಂಡೈ ಗ್ರ್ಯಾಂಡ್ ಐ-10  ಕಾರ್ ನಂಬ್ರ ಕೆಎ 20 ಝುಡ್  9341 ಇದರ ಆರ್.ಸಿ ಮಾಲಿಕರಾಗಿದ್ದು ದಿನಾಂಕ 29.10.2014 ರಂದು 11.00 ಗಂಟೆಗೆ ಆರೋಪಿ ರಜಾಕ್ ಎಂಬವರು ಪಿರ್ಯಾದುದಾರರ ಮನೆಗೆ ಬಂದು  ತನ್ನ ತಂಗಿಯ ಮದುವೆಯ ಕಾರ್ಯಕ್ರಮವಿದ್ದು ಸ್ವಲ್ಪ ದಿನಗಳ ಕಾಲ ಕಾರನ್ನು ನೀಡಬೆಕೆಂದು ಪಿರ್ಯಾದುದಾರರಲ್ಲಿ ಕೇಳಿ ಕಾರನ್ನು ಪಡೆದುಕೊಂಡು ಹೊಗಿರುತ್ತಾರೆ ನಂತರದ ದಿನಗಳಲ್ಲಿ ಪಿರ್ಯಾದಿದಾರರು ಕಾರನ್ನು ವಾಪಾಸ್ಸು ಕೇಳಿದಾಗ ಆರೋಪಿಗಳಾದ ರಜಾಕ್ ಮತ್ತು ಅಷ್ಪಕ್ ರವರುಗಳು ನಾವು ಕಾರು ಕೊಡುವುದಿಲ್ಲ ಎಂದು ಹೇಳಿ ಅವಾಚ್ಯ ಶಬ್ದಗಳಿಂದ ಬೈದು, ನೀನು ಇನ್ನು ಕಾರು ಕೇಳಿದರೆ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಒಡ್ಡಿರುತ್ತಾರೆ. ಆರೋಪಿಗಳು ಪಿರ್ಯಾದುದಾರರನ್ನು ನಂಬಿಸಿ ಕಾರನ್ನು ಪಡೆದುಕೊಂಡು ನಂಬಿಕೆ ದ್ರೋಹ ಮಾಡಿ ಮೋಸ ಮಾಡಿರುವುದಾಗಿದೆ ಎಂಬುದಾಗಿ ಎಂ. ಜಾಫರ್ ಸಾಧಿಕ್ ರವರು ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 73/2015 ಕಲಂ 420, 417, 504, 506 ಜೊತೆಗೆ 34 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

No comments: