Monday, April 13, 2015

Daily Crimes Reported as On 13/04/2015 at 17:00 Hrs

ಅಪಘಾತ ಪ್ರಕರಣ
  • ಗಂಗೊಳ್ಳಿ: ದಿನಾಂಕ 11/04/2015 ರಂದು ಪಿರ್ಯಾದಿ ರಾಜೇಶ ಯಾನೆ ರಾಜಾ ಖಾರ್ವಿ ಇವರು ಮೀನುಗಾರಿಕೆ ಕೆಲಸ ಮುಗಿಸಿ ತನ್ನ ಭಾವನವರ ಬಾಬ್ತು ಮೋಟಾರು ಸೈಕಲ್ ನಂಬ್ರ  ಕೆಎ-20-ಇಡಿ-5530 ನೆದರಲ್ಲಿ  ಸವಾರಿ ಮಾಡಿಕೊಂಡು ಮೇಲ್ ಗಂಗೊಳ್ಳಿಯಿಂದ ಗಂಗೊಳ್ಳಿ ಬಂದರು ಕಡೆಗೆ ಬರುತ್ತಿರುವಾಗ ರಾತ್ರಿ ಸುಮಾರು 9.15 ಗಂಟೆಗೆ ನಡುಪಳ್ಳಿ ಬಳಿ ತಲುಪಿದ್ದು, ಅದೇ ಸಮಯಕ್ಕೆ ನಡುಪಳ್ಳಿ ಒಳ ರಸ್ತೆಯಿಂದ ಮೋಟಾರು ಸೈಕಲ್ ನಂಬ್ರ ಕೆಎ-20-ವಿ-8958 ನೇದನ್ನು ಅದರ ಸವಾರ ಅತೀವೇಗ ಹಾಗೂ ನಿರ್ಲಕ್ಷತನದಿಂದ   ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು ಗಾಯಗೊಂಡು ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಅಪಘಾತಕ್ಕೆ ಮೋಟಾರು ಸೈಕಲ್ ನಂಬ್ರ ಕೆಎ-20-ವಿ-8958 ನೇದರ ಸವಾರನ ಅತೀ ವೇಗ ಹಾಗೂ ನಿರ್ಲಕ್ಷತನದ ಚಾಲನೆಯೇ ಕಾರಣವಾಗಿರುತ್ತದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ ಅಪರಾಧ ಪ್ರಕರಣ  48/15 ಕಲಂ: ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹಲ್ಲೆ ಪ್ರಕರಣ   
  • ಉಡುಪಿ:ದಿನಾಂಕ 12/04/2015 ರಂದು ಪಿರ್ಯಾದಿ ಸಂತೋಷ್ ಇವರು ಮತ್ತು ಅವರ ಸ್ನೇಹಿತರು ಉದ್ಯಾವರದಲ್ಲಿನ ಕ್ರಿಕೆಟ್ ಮ್ಯಾಚ್ ನೋಡಿಕೊಂಡು ಮನೆಗೆ ಹೋಗಲು ಬಾಡಿಗೆ ರಿಕ್ಷಾ ಮಾಡಿಕೊಂಡು ಉಡುಪಿಗೆ ರಾತ್ರಿ 01:00 ಗಂಟೆಗೆ ಬಂದಿದ್ದು ರಾತ್ರಿ ಸುಮಾರು 01:30 ಗಂಟೆ ಸಮಯಕ್ಕೆ ಪಿರ್ಯಾದಾರರು ಮೈತ್ರಿ ಕಾಂಪ್ಲೆಕ್ಸ್ ಎದುರು ರಿಕ್ಷಾ ಪಾರ್ಕಿಂಗ್ ನಲ್ಲಿ ನಿಂತಿರುವಾಗ ಕೆಎ 20 ಡಿ 1453 ನೇ ರಿಕ್ಷಾ ಚಾಲಕನು ತನ್ನ ಬಾಬ್ತು ರಿಕ್ಷಾವನ್ನು ಪಿರ್ಯಾದಿದಾರರಿಗೆ ತಾಗುವ ರೀತಿಯಲ್ಲಿ  ಚಲಾಯಿಸಿಕೊಂಡು ಬಂದಿದ್ದು ಆ ಸಮಯ ಈ ಬಗ್ಗೆ  ಕೇಳಿದಾಗ ಆರೋಪಿತನು ಪಿರ್ಯಾದಿದಾರರನ್ನು ಉದ್ದೇಶಿಸಿ  ಅವಾಚ್ಯ ಶಬ್ದಗಳಿಂದ ಬೈದು ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಕೈಯಿಂದ ಎದೆಗೆ ಗುದ್ದಿದ್ದು ಅಲ್ಲದೆ ಕಾಲಿನಿಂದ ಸೊಂಟಕ್ಕೆ ತುಳಿದು ನಿನ್ನನ್ನು ಮುಂದೆ ನೋಡಿಕೊಳ್ಳುತ್ತೇನೆ ಎಂಬುದಾಗಿ ಜೀವ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಪ್ರಕರಣ  87/2015  ಕಲಂ 504, 323, 341, 506 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಬ್ರಹ್ಮಾವರ: ದಿನಾಂಕ: 12/04/2015 ರಂದು ಸಂಜೆ ಸುಮಾರು 6:00 ಗಂಟೆಯ ಸಮಯಕ್ಕೆ ಉಡುಪಿ ತಾಲೂಕು, ಯಡ್ತಾಡಿ ಗ್ರಾಮ, ಅಲ್ತಾರು ಹಾಡಿಮನೆ ಎಂಬಲ್ಲಿ ಪಿರ್ಯಾದಿ ಜಯಲಕ್ಷ್ಮೀ ಶೆಡ್ತಿ  ಇವರು ತನ್ನ ಮನೆಯ ಪಕ್ಕದ ಹಾಡಿಗೆ ಹೋಗಿ ದನವನ್ನು ಹುಡುಕಿ ಕರೆಯುತ್ತಿರುವಾಗ ಆರೋಪಿಗಳಾದ ಭವಾನಿ ಶೆಡ್ತಿ, ಆಶಾ ಶೆಡ್ತಿ, ಸರೋಜಿನಿ ಶೆಡ್ತಿ ಹಾಗೂ ಲಕ್ಷ್ಮೀ ಶೆಡ್ತಿ ಎಂಬವರು ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು  ಪಿರ್ಯಾದಿದಾರರಿಗೆ ಹಲ್ಲೆ ನಡೆಸಿ ಜೀವ ಬೆದರಿಕೆ  ಹಾಕಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಪ್ರಕರಣ  59/15 ಕಲಂ 341, 447, 323, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ
  • ಮಣಿಪಾಲ: ದಿನಾಂಕ 13.04.15ರಂದು ಬೆಳಿಗ್ಗೆ 01:15ಗಂಟೆಯ ಸಮಯಕ್ಕೆ ಪೆರಂಪಳ್ಳಿ ರೈಲ್ವೆ ಸೇತುವೆಯ ಕೆಳಗೆ ರೈಲ್ವೆ ಹಳಿಯ ಬದಿಯಲ್ಲಿ 687/6-7ನೇ ಕಿ.ಮೀ ಕಂಬದ ಬಳಿ ಸುಮಾರು 50 ರಿಂದ 55 ಪ್ರಾಯದ ಗಂಡಸಿನ ಮೃತದೇಹ ಇರುವುದಾಗಿ ಉಡುಪಿ ಕೊಂಕಣ ರೈಲ್ವೆ ಸ್ಟೇಷನ್‌ ಮಾಸ್ಟರ್‌ ಪಿರ್ಯಾದಿ ನೀಡಿದ್ದಾಗಿರುತ್ತದೆ. ಈ ಬಗ್ಗೆ ಮಣಿಪಾಲ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 12/2015 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಕಾರ್ಕಳ: ದಿನಾಂಕ 12/04/2015 ರಂದು ಬೆಳಿಗ್ಗೆ 10;30 ಗಂಟೆಯಿಂದ  ರಾತ್ರಿ 9;15 ಗಂಟೆಯ ಮಧ್ಯಾವಧಿಯಲ್ಲಿ ಕಾರ್ಕಳ ತಾಲೂಕು ಕಸಬಾ ಗ್ರಾಮದ  ಅರಬೀ ಬಿಲ್ಡಿಂಗ್ 1 ನೇ ಮಹಡಿ ಲೋಯ್ ಆಯುರ್ವೇದಿಕ್ಸ್ ಕ್ಲಿನಿಕ್ ನಲ್ಲಿ  ಡಾ.ಲಿಗೋರಿ ಡಿ ಮೆಲ್ಲೋ ಎಂಬುವವರು ಜೀವನದಲ್ಲಿ ಜಿಗುಪ್ಸೆಗೊಂಡು ಕ್ಲಿನಿಕ್ ನಲ್ಲಿರುವ ಪಕ್ಕದ ಕೋಣೆಯಲ್ಲಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 14/2015 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: