Tuesday, April 14, 2015

Press Note-ಆರೋಪಿ ಪತ್ತೆಗಾಗಿ ಶೋಧ

ಆರೋಪಿ ಶೇಖರಪ್ಪ

ದಿನಾಂಕ 12/04/2015 ರಂದು ಬೆಳಿಗ್ಗೆ 10:00 ಗಂಟೆಗೆ ಧರಣೇಂದ್ರ ಕುಮಾರ್‌, ಪ್ರಾಯ: 55 ವರ್ಷ, ತಂದೆ:ಕೆ.ಆರ್‌, ಬಂಗೇರ, ವಾಸ:ಸುದರ್ಶನ ಐಸ್‌ ಪ್ಲ್ಯಾಂಟ್‌ ಹತ್ತಿರ, ಮಲ್ಪೆ, ಕೊಡವೂರು ಗ್ರಾಮ, ಉಡುಪಿ ಇವರು ಠಾಣೆಗೆ ಬಂದು ನೀಡಿದ ಪಿರ್ಯಾದಿಯ  ಸಾರಾಂಶವೆನೆಂದರೆ ಪಿರ್ಯಾದಿದಾರರು ಮೀನುಗಾರಿಕೆ ಇಲಾಖೆಗೆ ಸೇರಿದ ಕೊಡವೂರು ಗ್ರಾಮದ ಮಲ್ಪೆಯಲ್ಲಿ ಮೀನು ಒಣಗಿಸುವ ಒಂದು ಜಾಗ ಹೊಂದಿದ್ದು ಕಳೆದ 2-3 ತಿಂಗಳಿನಿಂದ ಒಬ್ಬ ಗಂಡಸು ಮತ್ತು ಅವನೊಂದಿಗೆ ಅವನಿಗೆ ಪರಿಚಿತನಾದ ಶೇಖರಪ್ಪ ರಾತ್ರಿ ವೇಳೆಯಲ್ಲಿ ಉಳಿದುಕೊಳ್ಳುತ್ತಿದ್ದರು ದಿನಾಂಕ 12/04/2015 ರಂದು ಪಿರ್ಯಾದಿದಾರರಿಗೆ ಪರಿಚಯದ  ಸುಲೇಮಾನ್ ಎಂಬುವವರು ಪೋನ್ ಮಾಡಿ  ಅವರ ಶೆಡ್ ಮುಂದೆ ಒಬ್ಬ ಗಂಡಸಿನ ಮೃತ ದೇಹವು ಇರುತ್ತದೆ ಎಂದು ತಿಳಿಸಿದ್ದು  ಪಿರ್ಯಾದುದಾರರು ಹೋಗಿ ನೋಡಿದಾಗ ಮೃತನ ದೇಹದ ತಲೆಯಲ್ಲಿ ರಕ್ತ ಗಾಯವಾಗಿದ್ದು ಕಂಡು ಬಂದಿರುತ್ತದೆ.  ಮೃತ ದೇಹದ ಕಾಲಿನ  ಸಮೀಪ ಒಂದು ಸುತ್ತಿಗೆ ಬಿದ್ದಿದ್ದು ಅದರಲ್ಲಿ ರಕ್ತ ಒಣಗಿದ್ದು ಕಂಡು ಬಂದಿರುತ್ತದೆ. ಮೃತ ದೇಹ ಹಾಗೂ ಶೇಖರಪ್ಪ ಎಂಬುವರು ನಿನ್ನೆ ದಿನ ಒಟ್ಟಿಗೆ ಇದ್ದವರು ರಾತ್ರಿ ವೇಳೆಯಲ್ಲಿ ಗಲಾಟೆ ಮಾಡಿಕೊಂಡಿದ್ದು, ಸದ್ರಿ ಅಪರಿಚಿತ ವ್ಯಕ್ತಿಗೆ ಶೇಖರಪ್ಪ ಎಂಬವರು ತಲೆಗೆ ಹೊಡೆದು ಪೆಟ್ಟಾದದುನ್ನು ಕಂಡು ಅವನನ್ನು ಅಲ್ಲಿಯೇ ಬಿಟ್ಟು ಹೋಗಿರಬಹುದಾಗಿದೆ ಎಂಬಿತ್ಯಾದಿಯಾಗಿ ಪಿರ್ಯಾದಿ ನೀಡಿದ್ದು ಈ ಬಗ್ಗೆ ಮಲ್ಪೆ ಠಾಣಾ ಅಕ್ರ 56/2015 ಕಲಂ 302 ಐಪಿಸಿ ಯಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿ ಇರುತ್ತದೆ.

ಆರೋಪಿತನ ಚಹರೆ
ಆರೋಪಿ ಹೆಸರು
ಶೇಖರಪ್ಪ
ಪ್ರಾಯ
ಸುಮಾರು 65 ವರ್ಷ
ಚಹರೆ
ತುರುಚಲು ಬಿಳಿ ಗಡ್ಡ
ಬಟ್ಟೆ
ಹೆಚ್ಚಾಗಿ ಖಾಕಿ ಅಂಗಿ ಧರಿಸುತ್ತಾನೆ
ಕೆಲಸ
ಗುಜರಿ ಹೆಕ್ಕುವುದು, ಪೇಪರ್‌ ಸಂಗ್ರಹಿಸುವುದು.

                 ಸದ್ರಿ ಪ್ರಕರಣದ ಆರೋಪಿತನ ಬಗ್ಗೆ ಮಾಹಿತಿ ತಿಳಿದುಬಂದಲ್ಲಿ ಮಲ್ಪೆ ಠಾಣಾ ಪಿ.ಎಸ್.. ದೂರವಾಣಿ 0820-2537999 ಅಥವಾ ಉಡುಪಿ ವೃತ್ತ ನಿರೀಕ್ಷಕರ ದೂರವಾಣಿ 0820-2520329 ಮುಖೇನಾ ಮಾಹಿತಿ ನೀಡಬೇಕು, ಮಾಹಿತಿ ನೀಡಿದವರಿಗೆ ಸೂಕ್ತ ಬಹುಮಾನ ನೀಡಲಾಗುವುದು.
                             

No comments: