Tuesday, April 07, 2015

Daily Crimes Reported as On 07/04/2015 at 07:00 Hrs


ಅಪಘಾತ ಪ್ರಕರಣಗಳು
  • ಕಾರ್ಕಳ ನಗರ:ದಿನಾಂಕ:06/04/2015 ರಂದು 10:15 ಗಂಟೆಗೆ ಕಾರ್ಕಳ ತಾಲೂಕಿನ ಕಸಬ ಗ್ರಾಮದ ಕಾರ್ಕಳ ಪೇಟೆಯಲ್ಲಿರುವ ಅನಂತಶಯನ ದೇವಸ್ಥಾನ ಕಡೆಯಿಂದ ಬಸ್ಸು ನಿಲ್ದಾಣ ಕಡೆಗೆ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಮಾರುತಿ ಝೆನ್ ಕಾರು ನಂಬ್ರ KA 05 MH 8944 ನೇದರ ಚಾಲಕ ಜಗದೀಶ್ ಹೆಗ್ಡೆ ಎಂಬವರು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು, ಬಸ್ಸು ನಿಲ್ದಾಣದ ಬಳಿ ಇರುವ ಉಡುಪಿ ಹೋಟೆಲ್‌ಗೆ ಪಿರ್ಯಾದಿದಾರರಾದ .ನಾರಾಯಣ ಪೈ (65), ತಂದೆ:ದಿವಂಗತ ಐ.ಶ್ರೀನಿವಾಸ ಪೈ, ವಾಸ:ಭುವನೇಂದ್ರ ಕಾಲೇಜು ಬಳಿ, ಕಸಬ ಗ್ರಾಮ, ಕಾರ್ಕಳ ತಾಲೂಕುರವರು ಕಾಫಿ ಕುಡಿಯಲು ತೆರಳುತ್ತಿದ್ದಾಗ, ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ .ನಾರಾಯಣ ಪೈರವರು ರಸ್ತೆಗೆ ಬಿದ್ದು ಎಡ ಕಾಲಿಗೆ ಜಖಂ ಹಾಗೂ ಎಡಕೈ ಮುಂಗೈಗೆ ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ .ನಾರಾಯಣ ಪೈರವರು ನೀಡಿದ ದೂರಿನಂತೆ ಕಾರ್ಕಳ ನಗರ ಠಾಣಾ ಅಪರಾಧ ಕ್ರಮಾಂಕ 35/2015 ಕಲಂ 279, 337 338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.  
  • ಹಿರಿಯಡ್ಕ:ದಿನಾಂಕ:06/04/2015 ರಂದು ಶಂಕರ (32) ಎಂಬವರು ತನ್ನ ಮೋಟಾರು ಸೈಕಲ್ ನಂಬ್ರ ಕೆಎ 20 ಡಬ್ಲೂ 3891 ನೇದರಲ್ಲಿ ಹಿರಿಯಡ್ಕ ಕಡೆಯಿಂದ ಕಾರ್ಕಳ ಕಡೆಗೆ ಹೋಗುತ್ತಾ ಉಡುಪಿ ತಾಲೂಕು ಬೊಮ್ಮರಬೆಟ್ಟು ಗ್ರಾಮದ ಪಂಚನಬೆಟ್ಟು ಕಣಜಾರು ಕ್ರಾಸ್ ಮಧ್ಯದಲ್ಲಿ ತಲುಪುವಾಗ ಕಾರ್ಕಳ ಕಡೆಯಿಂದ ಉಡುಪಿ ಕಡೆಗೆ ಕೆಂಪು ಬಣ್ಣದ ಮಾರುತಿ ರಿಟ್ಜ್‌ ಕಾರು ನಂಬ್ರ ಕೆಎ 20 ಪಿ 1991 ನೇದರ ಚಾಲಕನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಶಂಕರ್‌ರವರು ಚಲಾಯಿಸಿಕೊಂಡು ಹೋಗುತ್ತಿದ್ದ ಮೋಟಾರು ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಶಂಕರ್‌ರವರು ರಸ್ತೆಗೆ ಬಿದ್ದು ತೀವ್ರ ಗಾಯಗೊಂಡು ಸ್ಥಳದಲ್ಲಿ ಮೃತಪಟ್ಟಿದ್ದು, ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯವಾಗಿರುತ್ತದೆ. ಕಾರು ಮತ್ತು ಮೋಟಾರು ಸೈಕಲ್ ಜಖಂಗೊಂಡಿರುತ್ತದೆ. ಈ ಬಗ್ಗೆ ಶ್ರೀ ದಯಾನಂದ ನಾಯಕ್ (51) ತಂದೆ:ದಿವಂಗತ ಸಂಜೀವ ನಾಯಕ್ ವಾಸ:ಕಂಬಳ್ ಪಲ್ಕೆ ಮನೆ ಹಿರ್ಗಾನ ಅಂಚೆ ಮತ್ತು ಗ್ರಾಮ ಕಾರ್ಕಳ ತಾಲೂಕು ಉಡುಪಿ ಜಿಲ್ಲೆರವರು ನೀಡಿದ ದೂರಿನಂತೆ ಹಿರಿಯಡ್ಕ ಠಾಣಾ ಅಪರಾಧ ಕ್ರಮಾಂಕ 24/15 ಕಲಂ 279, 337, 304() ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಮಟ್ಕಾ ಜುಗಾರಿ ಪ್ರಕರಣಗಳು
  • ಕುಂದಾಪುರ:ದಿನಾಂಕ:06/04/2015 ರಂದು 15:30 ಗಂಟೆಗೆ ಪಿರ್ಯಾದಿದಾರರಾದ ಎಂ.ಮಂಜುನಾಥ ಶೆಟ್ಟಿ, ಪೊಲೀಸ್‌ ಉಪಾಧೀಕ್ಷಕರು, ಕುಂದಾಪುರ ಉಪ ವಿಭಾಗರವರಿಗೆ ದೊರೆತ ಖಚಿತ ಮಾಹಿತಿಯಂತೆ ಸಿಬ್ಬಂದಿಗಳೊಂದಿಗೆ ಕುಂದಾಪುರ ತಾಲೂಕು ಕಸಬಾ ಗ್ರಾಮದ ಆದರ್ಶ ಆಸ್ಪತ್ರೆ ಬಳಿ ಮೀನು ಮಾರ್ಕೇಟ್ರಸ್ತೆ ನೇತ್ರಾ ಆರ್ಟ್ಸ್ ಪಕ್ಕದಲ್ಲಿರುವ ಬೆಂಚ್ನಲ್ಲಿ ಕುಳಿತುಕೊಂಡಿದ್ದ ವ್ಯಕ್ತಿ  ಸಾರ್ವಜನಿಕರಲ್ಲಿ 1 ರೂಪಾಯಿಗೆ 70 ರೂಪಾಯಿ ಕೊಡುವುದಾಗಿ ಹೇಳಿಕೊಂಡು ಸಾರ್ವಜನಿಕರಿಂದ ಹಣವನ್ನು ಪಣವಾಗಿ ಸ್ವೀಕರಿಸಿ ಮಟ್ಕಾ-ಜುಗಾರಿ ಆಟ ನಡೆಸುತ್ತಿದ್ದುದನ್ನು ಖಚಿತಪಡಿಸಿಕೊಂಡು 15:45 ಗಂಟೆಗೆ ದಾಳಿ ನಡೆಸಿ, ಆರೋಪಿ ಉದಯ ಪೂಜಾರಿ (42) ತಂದೆ: ಪಂಜು ಪೂಜಾರಿ ವಾಸ: ಬದಿಮನೆ, ಫಿಶ್ಮಾರ್ಕೇಟ್ರಸ್ತೆ, ಕುಂದಾಪುರ ಎಂಬಾತನನ್ನು ದಸ್ತಗಿರಿ ಮಾಡಿದ್ದು, ಆರೋಪಿಯು ಮಟ್ಕಾ-ಜುಗಾರಿ ಆಟದಿಂದ ಸಂಗ್ರಹಿಸಿದ ಹಣವನ್ನು ಮಟ್ಕಾ ಬಿಡ್ಡರ್ಆದ ಕೋಣಿ ಸುರೇಶ ಎಂಬವರಿಗೆ ನೀಡಿ ಕಮಿಷನ್ ಪಡೆಯುತ್ತಿರುವುದಾಗಿ ತಿಳಿಸಿದ್ದು, ಮಟ್ಕಾ-ಜುಗಾರಿ ಆಟಕ್ಕೆ ಬಳಸುತ್ತಿದ್ದ ಮಟ್ಕಾ ಚೀಟಿ-1, ನಗದು ರೂಪಾಯಿ 1,100/-, ಬಾಲ್ ಪೆನ್ನು-1 ನ್ನು ಸ್ವಾಧೀನಪಡಿಸಿಕೊಂಡಿದ್ದಾಗಿದೆ.ಈ ಬಗ್ಗೆ ಕುಂದಾಪುರ ಠಾಣಾ ಅಪರಾಧ ಕ್ರಮಾಂಕ 103/2015 ಕಲಂ:78 (i) (iii) ಕೆ.ಪಿ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಉಡುಪಿ ನಗರ:ದಿನಾಂಕ:06/04/2015 ರಂದು ಪಿರ್ಯಾದಿದಾರರಾದ ಮಧು ಟಿ.ಎಸ್‌, ಪೊಲೀಸ್ ಉಪನಿರೀಕ್ಷಕರು, ಉಡುಪಿ ನಗರ ಪೊಲೀಸ್ ಠಾಣೆ, ಉಡುಪಿರವರು ಠಾಣೆಯಲ್ಲಿ ಕರ್ತವ್ಯದಲ್ಲಿರುವಾಗ ಸಂಜೆ ಸುಮಾರು 5:45 ಗಂಟೆಗೆ ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಸಿಟಿ ಬಸ್ನಿಲ್ದಾಣದ ಬಳಿ ಇಬ್ಬರು ವ್ಯಕ್ತಿಗಳು ಸಾರ್ವಜನಿಕರಿಂದ ತನ್ನ ಸ್ವಂತ ಲಾಭಕೋಸ್ಕರ ಹಣ ಸಂಗ್ರಹ ಮಾಡುತ್ತಿದ್ದಾರೆ ಎಂಬುದಾಗಿ ದೊರೆತ ಖಚಿತ ವರ್ತಮಾನದ ಮೇರೆಗೆ ಸಿಬ್ಬಂದಿಗಳೊಂದಿಗೆ ಸದ್ರಿ ಸ್ಥಳಕ್ಕೆ 18:00 ಗಂಟೆಗೆ ದಾಳಿ ನಡೆಸಿದಾಗ ಓರ್ವ ವ್ಯಕ್ತಿಯು ಸಾರ್ವಜನಿಕರನ್ನು ಕೂಗಿ ಕರೆದು ರೂಪಾಯಿ 1 ಕ್ಕೆ ರೂಪಾಯಿ 70 ನೀಡುವುದಾಗಿ ಹೇಳಿ, ಸಾರ್ವಜನಿಕರಿಂದ ಮಟ್ಕಾ ಜುಗಾರಿಗೆ ಹಣ ಸಂಗ್ರಹಿಸುತ್ತಿದ್ದು, ಇನ್ನೋರ್ವ ವ್ಯಕ್ತಿಯು ಸಾರ್ವಜನಿಕರು ನೀಡಿದ ಹಣವನ್ನು ಪಡೆದು ಅವರು ಹೇಳಿದ ನಂಬ್ರವನ್ನು ಒಂದು ಚೀಟಿಯಲ್ಲಿ ಬರೆಯುತ್ತಿರುವುದು ಕಂಡು ಬಂದಿದ್ದು, ಸಾರ್ವಜನಿಕರಿಂದ ಹಣ ಸಂಗ್ರಹ ಮಾಡುತ್ತಿದ್ದ ವ್ಯಕ್ತಿಗಳನ್ನು ಸುತ್ತುವರಿದು ಹಿಡಿದುಕೊಂಡಿದ್ದು, ಸಮಯ ಅಲ್ಲಿದ್ದ ಸಾರ್ವಜನಿಕರು ಓಡಿ ಪರಾರಿಯಾಗಿರುತ್ತಾರೆ. ಮಟ್ಕಾ ಜುಗಾರಿ ಆಟದ ಬಗ್ಗೆ ಕೂಗಿ ಕರೆದು ಹಣ ಸಂಗ್ರಹಿಸುತ್ತಿದ್ದ ವ್ಯಕ್ತಿಯ ಹೆಸರು ಕೇಳಲಾಗಿ, ತನ್ನ ಹೆಸರು ಉಮೇಶ್ಕತ್ತಿ‌ (35), ಎಂಬುದಾಗಿಯೂ, ಸಾರ್ವಜನಿಕರಿಂದ ಹಣ ಪಡೆದು ಮಟ್ಕಾ ಚೀಟಿ ಬರೆಯುತ್ತಿದ್ದ ವ್ಯಕ್ತಿಯ ಹೆಸರು ಕೇಳಲಾಗಿ, ತನ್ನ ಹೆಸರು ಸಂತೋಷ್‌‌ (37), ಎಂಬುದಾಗಿ ತಿಳಿಸಿದ್ದು, ತಾವುಗಳು ತಮ್ಮ ಸ್ವಂತ ಲಾಭಕೋಸ್ಕರ ಸಾರ್ವಜನಿಕರಿಂದ ಮಟ್ಕಾ ಜುಗಾರಿಗೆ ಹಣ ಸಂಗ್ರಹಿಸುವುದಾಗಿ ಒಪ್ಪಿಕೊಂಡಿರುತ್ತಾರೆ. ಸಾರ್ವಜನಿಕರಿಂದ ಮಟ್ಕಾ ಜುಗಾರಿಗೆ ಸಂಗ್ರಹಿಸಿದ ನಗದು ರೂಪಾಯಿ 785/-, ಮಟ್ಕಾ ನಂಬ್ರ ಬರೆದ ಚೀಟಿ-1 ಹಾಗೂ ಬರೆಯಲು ಬಳಸಿದ ಬಾಲ್ಪೆನ್‌-1 ನ್ನು ಮಹಜರು ಮುಖಾಂತರ ಸ್ವಾಧೀನಪಡಿಸಿಕೊಂಡಿದ್ದಾಗಿದೆ. ಈ ಬಗ್ಗೆ ಉಡುಪಿ ನಗರ ಠಾಣಾ ಅಪರಾಧ ಕ್ರಮಾಂಕ 80/2015 ಕಲಂ 78(i)(iii) ಕೆ.ಪಿ ಆಕ್ಟ್‌ನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: