Monday, April 06, 2015

Daily Crimes Reported as On 06/04/2015 at 19:30 Hrs


ಅಪಘಾತ ಪ್ರಕರಣ
  • ಕಾರ್ಕಳ ನಗರ:ದಿನಾಂಕ:05/04/2015 ರಂದು 22:30 ಗಂಟೆಗೆ ಕಾರ್ಕಳ ತಾಲೂಕಿನ ಕಸಬ ಗ್ರಾಮದ ಕಾಬೆಟ್ಟು ಕಡೆಯಿಂದ ರಾಜ್ಯ ಹೆದ್ದಾರಿ ಕಡೆಗೆ ಸತೀಶ್ ನಾಯ್ಕ್ ತಂದೆ:ತಿಮ್ಮಯ್ಯ ನಾಯ್ಕ್, ವಾಸ:ನೆಲ್ಲಿಕಟ್ಟೆ, ಹಿರ್ಗಾನ ಗ್ರಾಮ, ಕಾರ್ಕಳ ತಾಲೂಕು ಎಂಬವರು ತನ್ನ ಬಜಾಜ್ ಪಲ್ಸರ್ ಮೋಟಾರು ಸೈಕಲ್ ನಂಬ್ರ KA 20 EC 8984 ನೇದನ್ನು ಅತಿವೇಗ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು ರಸ್ತೆ ಬದಿಯ ಕೋಳಿ ಅಂಗಡಿಯ ಬಳಿ ಬಲ ಭಾಗಕ್ಕೆ ಇರುವ ತಿರುವಿನ ಸಮೀಪ ಹತೋಟಿ ತಪ್ಪಿ ನೇರವಾಗಿ ಚಲಾಯಿಸಿ ರಸ್ತೆಯ ಎಡಬದಿಯಲ್ಲಿರುವ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್ ಸವಾರನು ರಸ್ತೆಗೆ ಎಸೆಯಲ್ಪಟ್ಟು ಸವಾರನ ಕೈಗೆ, ಮುಖಕ್ಕೆ ಮತ್ತು ತಲೆಗೆ ಗಾಯವಾಗಿದ್ದು,  ಮೋಟಾರು ಸೈಕಲ್ ಜಖಂಗೊಂಡು ಎರಡು ತುಂಡಾಗಿರುತ್ತದೆ. ಈ ಬಗ್ಗೆ ಅಬ್ದುಲ್ ಸಲಾಂ (39), ತಂದೆ:ದಿವಂಗತ ಮಹಮ್ಮದ್, ವಾಸ:ಅಲೆಕ್ಸ್ ಕಂಪೌಂಡ್, ಶ್ರೀವೇಣುಗೋಪಾಲ ದೇವಸ್ಥಾನದ ಬಳಿ, ಕಾಬೆಟ್ಟು, ಕಸಬ ಗ್ರಾಮ, ಕಾರ್ಕಳ ತಾಲೂಕುರವರು ನೀಡಿದ ದೂರಿನಂತೆ ಕಾರ್ಕಳ ನಗರ ಠಾಣಾ ಅಪರಾಧ ಕ್ರಮಾಂಕ 34/2015 ಕಲಂ:279,337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಹಲ್ಲೆ ಪ್ರಕರಣ
  • ಕಾಪು:ಪಿರ್ಯಾದಿದಾರರಾದ ಕೃಷ್ಣ ಜಿ.ಕೋಟ್ಯಾನ್ (49) ತಂದೆ:ದಿವಂಗತ ಗಿರಿಯಾ ಕರ್ಕೇರಾ ವಾಸ:ರುಕ್ಕ್ಮೀಣೀಶ, ಸಂಪಿಗೆ ನಗರ, ಉದ್ಯಾವರ ಗ್ರಾಮರವರು ಪಂಡರೀನಾಥ ಭಜನ ಮಂಡಳಿಯ ಅಧ್ಯಕ್ಷರಾಗಿದ್ದು, ದಿನಾಂಕ:06/04/2015 ರಂದು 01:30 ಗಂಟೆಗೆ ಕೃಷ್ಣ ಜಿ. ಕೋಟ್ಯಾನ್‌ರವರ ಪರಿಚಯದ ಪ್ರಶಾಂತ್ ತಿಂಗಳಾಯ ಮತ್ತು ಕೇಶವ್ ಶ್ರೀಯಾನ್ ಎಂಬವರು ಉದ್ಯಾವರ ಗ್ರಾಮದ ಮಟ್ಟು ಕಾನಕೋಡ ಪಂಡರೀನಾಥ ಭಜನಾ ಮಂಡಳಿಯ ಒಳಗಡೆ ಮಲಗಿದ್ದು, ಆ ಸಮಯ ಆರೋಪಿಗಳಾದ ಪ್ರಜ್ವಲ್ ಹಾಗೂ ಚೇತನ್‌ರವರು ಮಂದಿರಕ್ಕೆ ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದು, ರೀಪಿನಿಂದ ಪ್ರಶಾಂತನ ಎಡ ಕೈಗೆ, ಕೇಶವನ ಬಲಕೈಗೆ ಹೊಡೆದು ಹಲ್ಲೆ ಮಾಡಿದ್ದು, ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿರುವುದಾಗಿದೆ. ಆರೋಪಿಗಳಿಗೆ ಮತ್ತು ಪ್ರಶಾಂತ್ ಹಾಗೂ ಕೇಶವ ಶ್ರೀಯಾನ್‌ರಿಗೆ ಇರುವ ವೈಮನಸ್ಸು ಈ ಘಟನೆಗೆ ಕಾರಣವಾಗಿರುತ್ತದೆ.ಈ ಬಗ್ಗೆ ಕೃಷ್ಣ ಜಿ.ಕೋಟ್ಯಾನ್‌ರವರು ನೀಡಿದ ದೂರಿನಂತೆ ಕಾಪು ಠಾಣಾ ಅಪರಾಧ ಕ್ರಮಾಂಕ 69/2015 ಕಲಂ:324, 323, 448, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
ಮಟ್ಕಾ ಜುಗಾರಿ ಪ್ರಕರಣ
  • ಉಡುಪಿ ನಗರ:ಈ ದಿನ ದಿನಾಂಕ:06/04/2015 ರಂದು ಪಿರ್ಯಾದಿದಾರರಾದ ಶ್ರೀಕಾಂತ್ ಕೆ. ವೃತ್ತ ನಿರೀಕ್ಷಕರು, ಉಡುಪಿ ವೃತ್ತ, ಉಡುಪಿರವರು ಕಛೇರಿಯಲ್ಲಿರುವಾಗ ಮೂಡನಿಡಂಬೂರು ಗ್ರಾಮದ ಸಾಯಿಕೃಪಾ ಬಿಲ್ಡಿಂಗ್‌ನ ಕೃಷ್ಣ ಸಾಗರ್ ಹೋಟೆಲ್ ಬದಿಯ ಮೆಟ್ಟಿಲಿನ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟ ನಡೆಸಲು ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ವೃತ್ತ ನಿರೀಕ್ಷಕರು ಸಿಬ್ಬಂದಿಯವರೊಂದಿಗೆ ಸದ್ರಿ ಸ್ಥಳಕ್ಕೆ ತಲುಪಿದಾಗ ಓರ್ವ ವ್ಯಕ್ತಿ ನಿಂತುಕೊಂಡು ಸುತ್ತಲು ಕೆಲವು ಸಾರ್ವಜನಿಕರು ನಿಂತುಕೊಂಡಿದ್ದು ಆ ವ್ಯಕ್ತಿಯು 1 ರೂಪಾಯಿಗೆ 70 ರೂಪಾಯಿ ಕೊಡುವುದಾಗಿ ಹೇಳುತ್ತಾ ಬಿಳಿ ಹಾಳೆಯಲ್ಲಿ ಏನನ್ನೋ ಬರೆಯುತ್ತಿದ್ದು ಮಟ್ಕಾ ಜೂಜಾಟ ಆಡುತ್ತಿರುವುದಾಗಿ ಖಚಿತಪಡಿಸಿಕೊಂಡು 16:20 ಗಂಟೆಗೆ ದಾಳಿ ನಡೆಸಿದ್ದು ಈ ವೇಳೆ ಹಾಜರಿದ್ದ ಸಾರ್ವಜನಿಕರು ಸ್ಥಳದಿಂದ ಪರಾರಿಯಾಗಿದ್ದು  ಮಟ್ಕಾ ಚೀಟಿ ಬರೆಯುತ್ತಿದ್ದ ವ್ಯಕ್ತಿಯನ್ನು ವಿಚಾರಿಸಲಾಗಿ ತಾನು ಸ್ವಂತ ಲಾಭಕ್ಕಾಗಿ ಹಣವನ್ನು ಪಣವಾಗಿ ಪಡೆದು ಮಟ್ಕಾ ಜುಗಾರಿ ಆಡಿ ಬಂದಂತ ಹಣವನ್ನು ಸ್ವಂತಕ್ಕೆ ಉಪಯೋಗಿಸುವುದಾಗಿ ಒಪ್ಪಿಕೊಂಡಿದ್ದು ಆತನ ಹೆಸರು ಕೇಳಲಾಗಿ ಶೌಕತ್ ಕೆ ಎಂಬುದಾಗಿ ತಿಳಿಸಿರುತ್ತಾರೆ. ಸದ್ರಿ ಆರೋಪಿ ಆಟಕ್ಕೆ ಬಳಸಿದ 920/- ರೂಪಾಯಿ, ಮಟ್ಕಾ ನಂಬ್ರ ಬರೆದ ಚೀಟಿ, ಆಟಕ್ಕೆ ಬಳಸಿದ ಬಾಲ್ ಪಾಯಿಂಟ್ ಪೆನ್ ಪಂಚರ ಸಮಕ್ಷಮ ಸ್ವಾಧೀನಪಡಿಸಿಕೊಳ್ಳಲಾಗಿದೆ.ಈ ಬಗ್ಗೆ ಉಡುಪಿ ನಗರ ಠಾಣಾ ಅಪರಾಧ ಕ್ರಮಾಂಕ 79/2015 ಕಲಂ:78(i)(iii) ಕೆ.ಪಿ ಆಕ್ಟ್‌ನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

No comments: