Tuesday, April 07, 2015

Daily Crimes Reported as On 07/04/2015 at 17:00 Hrs

ಅಪಘಾತ ಪ್ರಕರಣ
  • ಕೋಟ:  ಪಿರ್ಯಾದಿ ಸೀತಾರಾಮ ಆಚಾರಿ ಇವರು ದಿನಾಂಕ: 05/04/2015 ರಂದು ಆರೋಪಿ ರಮೇಶ ರವರ ಬಾಬ್ತು ಮೋಟಾರು ಸೈಕಲ್ ನಂಬ್ರ ಕೆಎ20 ಇಇ 4395 ನೇದರಲ್ಲಿ ಸಹಸವಾರರಾಗಿ ಅಂಕದಕಟ್ಟೆಯಿಂದ ಗಾವಳಿ ಕಡೆಗೆ ಹೋಗುತ್ತಾ ಬಿದ್ಕಲ್ ಕಟ್ಟೆ-ಬಾರ್ಕೂರು ರಸ್ತೆಯಲ್ಲಿ ಗಾವಳಿಗೆ ಹತ್ತಿರದ ಗೋಳಿಮರದ ಬಳಿ ತಲುಪುವಾಗ್ಯೆ ಆರೋಪಿ ಮೋಟಾರ್ ಸೈಕಲನ್ನು ಸವಾರನಾದ ರಮೇಶರವರು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಒಮ್ಮೇಲೆ ಬ್ರೇಕ್ ಹಾಕಿದ ಪರಿಣಾಮ ಪಿರ್ಯಾದಿ ದಾರರು ರಸ್ತೆಗೆ ಬಿದ್ದು ತಲೆಗೆ ಸಾದಾ ಸ್ವರೂಪಗಾಯಗೊಂಡು ಮಣಿಪಾಲ ಕೆ.ಎಮ್.ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿರುವುದಾಗಿದೆ. ಈ ಬಗ್ಗೆ ಕೋಟ ಠಾಣಾ ಅಪರಾಧ ಕ್ರಮಾಂಕ 63/2015 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
ಅಸ್ವಾಭಾವಿಕ ಮರಣ ಪ್ರಕರಣ
  • ಉಡುಪಿ:  ರಂಗಪ್ಪ(45) ವರ್ಷದವರು ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆಯಲ್ಲಿ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಯಾವುದೋ ಕೆಲಸದ ನಿಮಿತ್ತ ದಿನಾಂಕ: 06/04/2015ರಂದು ಉಡುಪಿಗೆ ಬಂದವರು ಉಡುಪಿಯ ಸಿಟಿಬಸ್ಸ್‌ ನಿಲ್ದಾಣದಲ್ಲಿ ಅಸ್ವಸ್ಧಗೊಂಡವರನ್ನು 108 ನಲ್ಲಿ ಚಿಕಿತ್ಸೆಯ ಬಗ್ಗೆ ಸಮಯ ಸುಮಾರು  15:00 ಗಂಟೆಗೆ ಉಡುಪಿ ಸರಕಾರಿ ಆಸ್ಪತ್ರೆಗೆ ಕರೆದು ಕೊಂಡು ಹೋದಲ್ಲಿ ವೈದ್ಯರು ಪರೀಕ್ಷಿಸಿ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 14/2015 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

No comments: