Saturday, April 04, 2015

Daily Crime Reports As on 04/04/2015 at 07:00 Hrs

ಮಟ್ಕಾ ಜುಗಾರಿ ಪ್ರಕರಣ
  • ಉಡುಪಿ:  ದಿನಾಂಕ: 03.04.2015 ರಂದು ಶ್ರೀ ಮಧು ಟಿ ಎಸ್‌, ಪೊಲೀಸ್‌ ಉಪ ನಿರೀಕ್ಷಕರು, ಉಡುಪಿ ನಗರ ಪೊಲೀಸ್‌ ಠಾಣೆ ಇವರು  ಖಚಿತ ಮಾಹಿತಿ ಮೇರೆಗೆ ಠಾಣಾ ಸಿಬ್ಬಂದಿಯವರೊಂದಿಗೆ ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಸರ್ವೀಸ್‌ ಬಸ್‌ನಿಲ್ದಾನದ ಸಾರ್ವಜನಿಕ ಶೌಚಾಲಯ ಬಳಿ ಇರುವ ಓಂ ಶಕ್ತಿ ಕಮ್ಯೂನಿಕೇಶನ್‌ ಅಂಗಡಿಯಲ್ಲಿ 14-30 ಗಂಟೆಗೆ ದಾಳಿ ನಡೆಸಿ, ಸಾರ್ವಜನಿಕರನ್ನು ಕೂಗಿ ಕರೆದು 1 ರೂಪಾಯಿಗೆ 70 ರೂಪಾಯಿ ಹಣ ನೀಡುವುದಾಗಿ ಹೇಳಿ ಸಾರ್ವಜನಿಕರಿಂದ ಮಟ್ಕಾ ಜುಗಾರಿ ಆಟಕ್ಕೆ ಹಣ ಸಂಗ್ರಹ ಮಾಡುತ್ತಿದ್ದ ಆಪಾದಿತರಾದ ಪ್ರಸಾದ ಹಾಗೂ ಜಗದೀಶ ಸಾಲಿಯನ್‌ ಎಂಬವರನ್ನು ದಸ್ತಗಿರಿ ಮಾಡಿ ವಿಚಾರಿಸಲಾಗಿ ಲಿಯೋ ಕರ್ನೆಲಿಯೋರವರ ಆದೇಶದಂತೆ ಹಣ ಸಂಗ್ರಹಿಸುತ್ತಿರುವುದಾಗಿ ತಿಳಿಸಿರುತ್ತಾರೆ.   ಆರೋಪಿತರ ವಶದಲ್ಲಿದ್ದ ನಗದು ರೂ. 892/-, ಮಟ್ಕಾ ನಂಬ್ರ ಬರೆದ ಚೀಟಿ ಹಾಗೂ ಒಂದು ಬಾಲ್‌ ಪೆನ್‌ನ್ನು ಸ್ವಾಧೀನಪಡಿಸಿಕೊಂಡು, ಈ ಬಗ್ಗೆ ಉಡುಪಿ ನಗರ  ಠಾಣಾ ಅಪರಾಧ ಕ್ರಮಾಂಕ 75/2015 ಕಲಂ 78(1)(3) ಕೆಪಿ ಆಕ್ಟ್ ನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
ಹಲ್ಲೆ ಪ್ರಕರಣ
  • ಉಡುಪಿ: ಪಿರ್ಯಾದಿ ಮೀರಾ ಇವರು ದಿನಾಂಕ 03/04/2015 ರಂದು 10:00 ಗಂಟೆಗೆ ಮನೆಯಲ್ಲಿರುವಾಗ ಪಿರ್ಯಾದಿದಾರರ ತಮ್ಮನ ಹೆಂಡತಿ ಜಯಂತಿ  ಮತ್ತು ವನಜಾಕ್ಷಿ ಎಂಬವರು  ಫಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು  ಕೈಯಿಂದ ಹೊಡೆದಿರುತ್ತಾರೆ. ಈ ಬಗ್ಗೆ ಉಡುಪಿ ನಗರ  ಠಾಣಾ ಅಪರಾಧ ಕ್ರಮಾಂಕ 76/2015 ಕಲಂ 323,504, ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
  • ಉಡುಪಿ: ಪಿರ್ಯಾದಿ ವನಜಾಕ್ಷಿ ಇವರು ದಿನಾಂಕ 03/04/2015 ರಂದು 10:00 ಗಂಟೆಗೆ ಫಿರ್ಯಾದಿದಾರರ ಸಂಬಂಧಿ ಶಂಕರ ಪೂಜಾರಿಯವರ  ಮನೆಗೆ ಕೆಎ 20 ಇ.ಡಿ 7891 ಆ್ಯಕ್ಟೀವ್‌ ಹೊಂಡದಲ್ಲಿ ಬಂದು ಹೊರಗೆ ನಿಲ್ಲಿಸಿ ಶಂಕರ ಪೂಜಾರಿಯವರ ಮನೆಯಲ್ಲಿರುವಾಗ  ಗ್ಲಾಸ್‌ ಒಡೆದ ಶಬ್ದ ಕೇಳಿ ಹೊರಗೆ ಓಡಿ ಬಂದು ನೋಡಿದಾಗ ಆರೋಪಿತೆ ಮೀರಾರ ಕೈಯಲ್ಲಿದ್ದ ಸೊಂಟೆಯಿಂದ ಬೈಕ್‌ನ ಗ್ಲಾಸನ್ನು ಒಡೆಯುತ್ತಾ ಕಾಲಿನಲ್ಲಿ ತುಳಿದು ಅಡ್ಡ ಹಾಕಿದಾಗ ಈ ಬಗ್ಗೆ ವಿಚಾರಿಸಿದಾಗ  ಫಿರ್ಯಾದಿದಾರರನ್ನು ಉದ್ದೇಶಿಸಿ  ಅವಾಚ್ಯವಾಗಿ ಬೈದಿದ್ದು  ಈ ಬಗ್ಗೆ ಉಡುಪಿ ನಗರ ಠಾಣಾ ಅಪರಾಧ ಕ್ರಮಾಂಕ 77/2015 ಕಲಂ 323,504, ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
ಅಪಘಾತ ಪ್ರಕರಣ
  • ಕುಂದಾಪುರ: ದಿನಾಂಕ 03/04/2015  ರಂದು ಸಮಯ  ಸುಮಾರು  ರಾತ್ರಿ 8:45 ಗಂಟೆಗೆ ಕುಂದಾಪುರ ತಾಲೂಕು  ತಲ್ಲೂರು  ಗ್ರಾಮದ  ತಲ್ಲೂರು ಜಂಕ್ಷನ್  ಬಳಿ ರಾ.ಹೆ 66 ರಸ್ತೆಯಲ್ಲಿ ಆಪಾದಿತ ಶ್ರೀಧರ   ಶೆಟ್ಟಿ ಎಂಬವರು KA20-EC-5948 ನೇ ಬೈಕ್‌ನ್ನು ಕುಂದಾಪುರ ಕಡೆಯಿಂದ ಹೆಮ್ಮಾಡಿ ಕಡೆಗೆ  ಅತೀವೇಗ ಹಾಗೂ ಅಜಾಗರುಕತೆಯಿಂದ ಸವಾರಿ ಮಾಡಿಕೊಂಡು ಯಾವುದೇ ಸೂಚನೆ ನೀಡದೇ ರಸ್ತೆಯ ಬಲಬದಿಗೆ ಬಂದು ಪಿರ್ಯಾದಿ ಅಜಿತ್‌ ಹೆಚ್‌.ಎಮ್‌  ಇವರು  ಸಹ ಸವಾರರಾಗಿ, ಸುಕೇಶ ಪೂಜಾರಿ  ಎಂಬವರು  ಹೆಮ್ಮಾಡಿ  ಕಡೆಯಿಂದ ಕುಂದಾಪುರ ಕಡೆಗೆ ಸವಾರಿ ಮಾಡಿಕೊಂಡು  ಹೋಗುತ್ತಿದ್ದ KA20-X-6187ನೇ ಬೈಕಿಗೆ ಎದುರುಗಡೆಯಿಂದ ಡಿಕ್ಕಿ  ಹೊಡೆದ ಪರಿಣಾಮ  ಪಿರ್ಯಾದಿದಾರರು, ಬೈಕ್  ಸವಾರ ಸುಕೇಶ ಪೂಜಾರಿ  ಹಾಗೂ ಆಪಾದಿತ ಬೈಕ್  ಸವಾರ ಶ್ರೀಧರ  ಶೆಟ್ಟಿ  ಎಂಬವರು  ಗಾಯಗೊಂಡು  ಚಿಕಿತ್ಸೆ  ಬಗ್ಗೆ  ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಠಾಣಾ ಅಪರಾಧ ಕ್ರಮಾಂಕ 34/15 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
  • ಉಡುಪಿ: ಪಿರ್ಯಾದುದಾರರಾದ ಸುನಂದಾ ರವರು ದಿನಾಂಕ: 03/04/2015 ರಂದು ಸಂಜೆ 07:20 ಗಂಟೆ ಸಮಯದಲ್ಲಿ ಉಡುಪಿ ಪುತ್ತೂರು ಗ್ರಾಮದ ನಿಟ್ಟೂರು ಬಳಿ ಇರುವ ಆಭರಣ ಮೋಟಾರ್ಸ್ ಎದುರು ರಾ.ಹೆ.-66 ರ ಬದಿಯಲ್ಲಿರುವ ಅಂಗಡಿಗೆ ಹೋಗಿ ವಾಪಾಸು ಮನೆಗೆ ಹೋಗುವರೇ ರಸ್ತೆಯನ್ನು ದಾಟಿ ಅಂಚಿನಲ್ಲಿರುವಾಗ ಉಡುಪಿ ಸಂತೆಕಟ್ಟೆ ಕಡೆಯಿಂದ ಕೆಎ-21 ಎನ್-1214 ನೇ ನಂಬ್ರದ ಕಾರು ಚಾಲಕ ತನ್ನ ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಬಲಬದಿಗೆ ಬಂದು ಪಿರ್ಯಾದುದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರ ಹಣೆಗೆ ರಕ್ತಗಾಯ, ಮತ್ತು ಗುದ್ದಿದ ಒಳನೋವು ಆಗಿದ್ದು ಕೂಡಲೇ ಡಿಕ್ಕಿ ಪಡಿಸಿದ ಕಾರಿನ ಚಾಲಕ ಹಾಗೂ ಪ್ರಶಾಂತ್ ಮತ್ತು ಅಲ್ಲಿ ಸೇರಿದವರು ಪಿರ್ಯಾದುದಾರರನ್ನು ಮೇಲಕ್ಕೆತ್ತಿ ಉಪಚರಿಸಿ ಒಂದು ಆಟೋರಿಕ್ಷಾದಲ್ಲಿ ಚಿಕಿತ್ಸೆ ಬಗ್ಗೆ ಉಡುಪಿ ಹೈಟೆಕ್ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಠಾಣಾ ಅಪರಾಧ ಕ್ರಮಾಂಕ 31/15 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

No comments: