ಕ್ರಿಕೆಟ್ ಬೆಟ್ಟಿಂಗ್ - ಆರೋಪಿಗಳ ಬಂಧನ 
- ಉಡುಪಿ: ದಿನಾಂಕ 19/03/2015 ರಂದು ಉಡುಪಿ ಪೊಲೀಸ್ ವೃತ್ತ ನಿರೀಕ್ಷಕರಾದ ಶ್ರೀಕಾಂತ್.ಕೆ. ರವರಿಗೆ ಬಂದ ಖಚಿತ ಮಾಹಿತಿಯಂತೆ ಉಡುಪಿ ಕೊಳಂಬೆ ಬಳಿ ಇರುವ ಸಾಯಿ ಆಶ್ರಮ್ ಅಪಾರ್ಟ್ ಮೆಂಟ್ ನ ಪ್ಲಾಟ್ ನಂ 104 ರಲ್ಲಿ ಈ ದಿನ ನಡೆಯುತ್ತಿದ್ದ ಭಾರತ ಮತ್ತು ಬಾಂಗ್ಲದೇಶ ನಡುವಿನ ಕ್ರಿಕೆಟ್ ಮ್ಯಾಚ್ ನ ಬೆಟ್ಟಿಂಗ್ ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ಮಾನ್ಯ ಪೊಲೀಸ್ ಅಧೀಕ್ಷಕರು ಉಡುಪಿರವರ ನಿರ್ದೇಶನದಂತೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಉಡಪಿರವರ ಹಾಗೂ ಪೊಲೀಸ್ ಉಪಾಧೀಕ್ಷಕರವರ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕರು ಉಡುಪಿ ವೃತ್ತ ಹಾಗೂ ಪೊಲೀಸ್ ಉಪ ನಿರೀಕ್ಷಕರು ಉಡುಪಿ ನಗರ ಠಾಣೆ ಮತ್ತು ಸಿಬ್ಬಂದಿಯವರೊಂದಿಗೆ ಪ್ಲಾಟ್ ನಂ 104 ಕ್ಕೆ ದಾಳಿ ನಡೆಸಿ ಸದ್ರಿ ಫ್ಲಾಟ್ ನಲ್ಲಿದ್ದ ಸುಖೇಶ್ ರಾವ್, ತಂದೆ: ಚಂದ್ರಕಾಂತ್ ರಾವ್ ರವರನ್ನು ವಶಪಡಿಸಿಕೊಂಡು ಅವರಿಂದ ಬೆಟ್ಟಿಂಗ್‌ಗಾಗಿ ಉಪಯೋಗಿಸಿದ 1 ಟಿವಿ, 4 ಮೊಬೈಲ್ ಫೊನ್ ಗಳು ಹಾಗೂ 1 ಟ್ಯಾಬ್, 1 ಡೈರಿಯನ್ನು ಮತ್ತು ಬೆಟ್ಟಿಂಗ್ ನಲ್ಲಿ ತೊಡಗಿಸಿದ 3,88,000 ರೂಪಾಯಿ ಮೊತ್ತವನ್ನು ವಶಪಡಿಸಿಕೊಳ್ಳಲಾಯಿತು.
 
          ಆರೋಪಿತ ಸುಖೇಶ್ ರಾವ್ ನ ಮಾಹಿತಿ ಆಧರಿಸಿ
ಇನ್ನುಳಿದ ಆರೋಪಿತರಾದ ಆನಂದ ಪೂಜಾರಿ ಪ್ರಾಯ: 56 ವರ್ಷ ತಂದೆ: ದಿ. ಕೃಷ್ಣ ಪೂಜಾರಿ ವಾಸ:
ಬೈಲೂರು, 76 ಬಡಗುಬೆಟ್ಟು ಗ್ರಾಮ ಉಡುಪಿ ತಾಲೂಕು ಮತ್ತು ರಮೇಶ ಪೂಜಾರಿ ಪ್ರಾಯ: 52 ವರ್ಷ ತಂದೆ: ದಿ. ಅಂಗಾರ
ಪೂಜಾರಿ ವಾಸ: ಮೂಡನಿಡಂಬೂರು ಗ್ರಾಮ ಉಡುಪಿ ತಾಲೂಕುರವರುಗಳನ್ನು ವಶಕ್ಕೆ ಪಡೆದು ಮಾನ್ಯ
ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

No comments:
Post a Comment