ಅಪಘಾತ 
ಪ್ರಕರಣ
- ಗಂಗೊಳ್ಳಿ: ದಿನಾಂಕ 18/03/2015 ರಂದು ಪಿರ್ಯಾದುದಾರರಾದ ಶ್ರೀನಿವಾಸ ಸಹ ಸವಾರರಾಗಿ ಸ್ನೇಹಿತ ವಾಸುದೇವರವರ ಬಾಬ್ತು ಅವರೇ ಸವಾರರಾಗಿರುವ ಮೋಟಾರು ಸೈಕಲ್ ನಂಬ್ರ ಕೆಎ-20-ಇಎ-3520 ನೇದರಲ್ಲಿ ಉಪ್ಪುಂದದಿಂದ ಗಂಗೊಳ್ಳಿಗೆ ಹೋಗುವರೇ ರಾಹೆ-66 ರಲ್ಲಿ ಬರುತ್ತಿರುವಾಗ ಬೆಳಿಗ್ಗೆ 9.20 ಗಂಟೆಗೆ ತ್ರಾಸಿ ಗ್ರಾಮದ ತ್ರಾಸಿ ಗ್ರಾಮದ ತ್ರಾಸಿ ಚರ್ಚ್ ರೋಡ್ ಬಳಿ ತಲುಪಿದಾಗ ಕುಂದಾಪುರ ಕಡೆಯಿಂದ ಕೆಎ-47-3366 ನೇ ಟಾಟಾ ಎಸಿ ವಾಹನವನ್ನು ಅದರ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಯಾವುದೇ ಸೂಚನೆ ಕೊಡದೆ ರಸ್ತೆಯ ಬಲಕ್ಕೆ ಚರ್ಚ್ ರೋಡ್ ಕಡೆಗೆ ತಿರುಗಿಸಿ ಪಿರ್ಯಾದುದಾರರಿದ್ದ ಮೋಟಾರು ಸೈಕಲ್‌ಗೆ ಡಿಕ್ಕಿ ಹೊಡೆದಿದ್ದು, ಇದರ ಪರಿಣಾಮ ಮೋಟರು ಸೈಕಲ್ ಸಮೇತ ಕೆಳಗೆ ಬಿದ್ದು ಪಿರ್ಯಾದುದಾರರಿಗೆ ತರಚಿದ ಗಾಯ ಹಾಗೂ ಸವಾರ ವಾಸುದೇವರವರಿಗೆ ತಲೆ, ಮುಖ, ಎಡಕಾಲಿನ ಪಾದಕ್ಕೆ ರಕ್ತ ಗಾಯವಾಗಿರುತ್ತದೆ. ಈ ಬಗ್ಗೆ ಗಂಗೊಳ್ಳಿ ಠಾಣಾ ಅಪರಾಧ ಕ್ರಮಾಂಕ 36/2015 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
 - ಬ್ರಹ್ಮಾವರ: ದಿನಾಂಕ: 19/03/2015 ರಂದು ಬೆಳಿಗ್ಗೆ 08:45 ಗಂಟೆಗೆ ಉಡುಪಿ ತಾಲೂಕು, 52ನೇ ಹೇರೂರು ಗ್ರಾಮದ, ಮಂಜುನಾಥ ಪೆಟ್ರೋಲ್ ಬಂಕ್ನ ಎದುರು ಆರೋಪಿ ತನ್ನ ಬಾಬ್ತು ಕೆಎ-20-ಸಿ-9831 ನೇ ಲಾರಿಯನ್ನು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಮಂಜುನಾಥ ಪೆಟ್ರೋಲ್ ಬಂಕ್ನಿಂದ ಉಡುಪಿ ಕಡೆಗೆ ರಸ್ತೆಯ ತೀರಾ ಬಲ ಬದಿಗೆ ಚಲಾಯಿಸಿ ಬ್ರಹ್ಮಾವರದಿಂದ ಉಡುಪಿ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಪಿರ್ಯಾದಿ ಕೆ. ಮೋಹನ ಉಡುಪ ಇವರ ಬಾಬ್ತು ಕೆಎ-20-ಇಎಫ್-9577 ನೇ ಆಕ್ಟಿವ್ ಹೊಂಡಾ ಮೊಟಾರ್ ಸೈಕಲ್ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು ಎಡಕಾಲಿನ ಕೋಲುಕಾಲಿಗೆ ತೀವ್ರ ತರಹದ ಗಾಯ ಹಾಗೂ ತಲೆಯ ಹಿಂಭಾಗಕ್ಕೆ ಗಾಯ ಮತ್ತು ಎರಡೂ ಕೈಗಳಿಗೆ ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಠಾಣಾ ಅಪರಾಧ ಕ್ರಮಾಂಕ 50/15 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
 - ಕುಂದಾಪುರ: ದಿನಾಂಕ 19/03/2015 ರಂದು ಸಮಯ ಸುಮಾರು ಬೆಳಿಗ್ಗೆ 10:15 ಗಂಟೆಗೆ ಕುಂದಾಪುರ ತಾಲೂಕು ಕಾಳಾವರ ಗ್ರಾಮದ ಸಳ್ವಾಡಿ ಶಂಕರ ಆಚಾರಿ ಎಂಬವರ ಮನೆಯ ಬಳಿ ರಸ್ತೆಯಲ್ಲಿ, ಆಪಾದಿತ ಭೋಜರಾಜ್ ಎಂಬಾತನು KA20-X-921 ನೇ ಬೈಕ್ ನ್ನು ಕೊಟೇಶ್ವರ ಕಡೆಯಿಂದ ಹಾಲಾಡಿಯ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ರಸ್ತೆಯ ಎಡಬದಿಗೆ ಬಂದು ಮೀನಾಕ್ಷಿ ಶೆಟ್ಟಿಗೆ ಎದುರುಗಡೆಯಿಂದ ಡಿಕ್ಕಿ ಹೊಡೆದಿದ್ದು ಪರಿಣಾಮ ಮೀನಾಕ್ಷಿ ಶೆಟ್ಟಿಯವರು ಗಾಯಗೊಂಡಿರುತ್ತಾರೆ ಮತ್ತು ಬೈಕ್  ಸವಾರ ಭೋಜರಾಜ್ ಕೂಡಾ ಗಾಯಗೊಂಡಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಠಾಣಾ ಅಪರಾಧ ಕ್ರಮಾಂಕ 30/15 ಕಲಂ: 279,337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
 
No comments:
Post a Comment