ಜುಗಾರಿ
ಪ್ರಕರಣ
- ಕುಂದಾಪುರ: ದಿನಾಂಕ 19/03/15 ರಂದು ಎಂ ಮಂಜುನಾಥ ಶೆಟ್ಟಿ, ಮಾನ್ಯ ಪೊಲೀಸ್ ಉಪಾಧೀಕ್ಷಕರು, ಕುಂದಾಪುರ ಉಪ ವಿಭಾಗ ಇವರಿಗೆ ದೊರೆತ ಖಚಿತ ವರ್ತಮಾನದಂತೆ ಸಿಬ್ಬಂದಿಯವರೊಂದಿಗೆ ಕುಂದಾಪುರ ತಾಲೂಕು ಕಂಡ್ಲೂರು ಪೇಟೆ ತಲುಪಿ ಶ್ರೀ ಅಯ್ಯಪ್ಪ ಡ್ರೆಸ್ ಸೆಂಟರ್ ಎಡಬದಿಯಲ್ಲಿರುವ ಪಾನ್ ಸ್ಟಾಲ್ ನ ಸಾರ್ವಜನಿಕ ಸ್ಥಳದಲ್ಲಿ, ಓರ್ವ ವ್ಯಕ್ತಿಯು ಸಾರ್ವಜನಿಕರಿಗೆ 1 ರೂಪಾಯಿಗೆ 70 ರೂಪಾಯಿ ಕೊಡುವುದಾಗಿ ಹೇಳುತ್ತಿರುವುದನ್ನು ಖಚಿತ ಪಡಿಸಿಕೊಂಡು ಮಟ್ಕಾ-ಜುಗಾರಿ ಆಟ ನಡೆಸುತ್ತಿದ್ದ ಆರೋಪಿ ನರಸಿಂಹ ಮೊಗವೀರ ಎಂಬಾತನನ್ನು ದಸ್ತಗಿರಿ ಮಾಡಿದ್ದು, ಆರೋಪಿಯು ಮಟ್ಕಾ-ಜುಗಾರಿ ಆಟದಿಂದ ಸಂಗ್ರಹಿಸಿದ ಹಣವನ್ನು ಶೇಷಗಿರಿ ನಾಯಕ್ ಎಂಬುವನಿಗೆ ನೀಡುತ್ತಿರುವುದಾಗಿ ತಿಳಿಸಿದ್ದು, ಆರೋಪಿಯನ್ನು ದಸ್ತಗಿರಿ ಮಾಡಿ ಮಟ್ಕಾ-ಜುಗಾರಿ ಆಟಕ್ಕೆ ಬಳುಸುತ್ತಿದ್ದ ಮಟ್ಕಾ ಚೀಟಿ-1, ಬಾಲ್ ಪೆನ್ನು-1, ನಗದು ರೂ 750 /- ನ್ನು ಸ್ವಾಧೀನಪಡಿಸಿಕೊಂಡದ್ದಾಗಿದೆ. ಈ ಬಗ್ಗೆ ಕುಂದಾಪುರ ಠಾಣಾ ಅಪರಾಧ ಕ್ರಮಾಂಕ 88/2015 ಕಲಂ 78(1) (3) ಕರ್ನಾಟಕ ಪೊಲೀಸ್ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಸ್ವಾಭಾವಿಕ
ಮರಣ ಪ್ರಕರಣ
- ಕೋಟ: ದಿನಾಂಕ:19/03/2015 ರಂದು ರಾಜೇಶ ನಾಯ್ಕ್ ಪ್ರಾಯ:24 ವರ್ಷ ಎಂಬುವರು ಸಾಂಸಾರಿಕ ಜೀವನದ ವಿಚಾರದಲ್ಲಿ ಬೇಸರಗೊಂಡು ಉಡುಪಿ ತಾಲೂಕು ನಂಚಾರು ಗ್ರಾಮದ ಹೆಬ್ಬಾರ್ ಬೆಟ್ಟು ಎಂಬಲ್ಲಿನ ತನ್ನ ಮನೆಯಲ್ಲಿ ಬೆಳಿಗ್ಗೆ 09:00 ಗಂಟೆಯಿಂದ 12:30 ಗಂಟೆಯ ಮಧ್ಯಾವಧಿಯಲ್ಲಿ ಯಾವುದೋ ವಿಷ ಪದಾರ್ಥ ಮಿಶ್ರಣ ಮಾಡಿ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕೋಟ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 12/2015 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಪಘಾತ
ಪ್ರಕರಣ
- ಉಡುಪಿ: ಪಿರ್ಯಾದುದಾರರಾದ ಐವನ್ ಪೂಟಾರ್ಡ್(60) ರವರು ದಿನಾಂಕ:19/03/2015 ರಂದು ಅವರ ಬಾಬ್ತು ಕೆಎ-20 ಇಇ-3797 ನೇ ಸ್ಕೂಟರ್‌ನಲ್ಲಿ ಹೈಟೆಕ್ ಆಸ್ಪತ್ರೆಗೆ ಹೋಗುವರೇ ಮನೆಯಿಂದ ಹೊರಟು ಕಲ್ಸಂಕ ಮಾರ್ಗವಾಗಿ ಹೋಗುತ್ತಾ ಬನ್ನಂಜೆ ಬಳಿ ತಲುಪುವಾಗ್ಗೆ ಸಮಯ ಸುಮಾರು ಸಂಜೆ 05:45 ಗಂಟೆಗೆ ಪಿರ್ಯಾದುದಾರರ ಮುಂದುಗಡೆಯಿಂದ ಹೋಗುತ್ತಿದ್ದ ಕೆಎ-20 ಬಿ-6365 ನೇ ಓಮ್ನಿ ಕಾರು ಚಾಲಕ ತನ್ನ ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಯಾವುದೇ ಸೂಚನೆ ನೀಡದೇ ಒಮ್ಮೆಲೆ ಬಲಕ್ಕೆ ತಿರುಗಿಸಿ ಪಿರ್ಯಾದುದಾರರ ಸ್ಕೂಟರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಗಾಯಗೊಂಡಿರುತ್ತಾರೆ. ಈ ಅಪಘಾತಕ್ಕೆ ಕೆಎ-20 ಬಿ-6365 ನೇ ಓಮ್ನಿ ಕಾರು ಚಾಲಕ ವಿಠಲನಾಯ್ಕ್‌ರವರ ಅತೀವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿದ್ದು ಈ ಬಗ್ಗೆ ಉಡುಪಿ ಸಂಚಾರ ಠಾಣಾ ಅಪರಾಧ ಕ್ರಮಾಂಕ 28/2015 ಕಲಂ. 279,337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಹಲ್ಲೆ
ಪ್ರಕರಣ
- ಶಿರ್ವಾ: ಪಿರ್ಯಾದಿ ಶ್ರೀ ಸಿಲ್ವೆಸ್ಟರ್ ಲೋಬೋ ಇವರು ದಿನಾಂಕ: 19.03.2015 ರಂದು ಮಧ್ಯಾಹ್ನ 1.15 ಗಂಟೆ ಸಮಯಕ್ಕೆ ತನ್ನ ಮನೆಯಿಂದ ತಂಕರಪಲ್ಕೆಯಿಂದ ಚೆಕ್ ಪಾದೆಗೆ ಹೋಗುವ ರಸ್ತೆಗೆ ಬಂದು ಅಲ್ಲಿ ನೀರಿನ ಟ್ಯಾಂಕಿನ ಚಾಲಕರಲ್ಲಿ ಮರಳು ಹಾಗೂ ಜಲ್ಲಿ ಬಗ್ಗೆ ವಿಚಾರಿಸಿದ್ದಲ್ಲಿ ತಾನು ಫಿಲಿಫ್‌ರವರಿಗೆ ರೂಪಾಯಿ 50/- ಕ್ಕೆ ನೀಡಿದ್ದಾಗಿ ಹೇಳಿದಾಗ ಪಿರ್ಯದಿದಾರರು ಆಕ್ಷೇಪಿಸಿದ್ದಕ್ಕೆ ಆರೋಪಿತ ಫಿಲಿಫ್ ಡಿಸೋಜ ಮರದ ಸ್ಟಿಕ್‌ನಿಂದ ಎರಡು ಕಾಲುಗಳಿಗೆ ಹಾಗೂ ಸೊಂಟಕ್ಕೆ ಹೊಡೆದು ರಕ್ತ ಗಾಯಗೊಳಿಸಿದ್ದಲ್ಲದೆ ಆರೋಪಿತನ ಹೆಂಡತಿ ಹಾಗೂ ಮಗ ಈತನ ಕೃತ್ಯಕ್ಕೆ ಸಹಕರಿಸಿದ್ದಾಗಿದೆ. ಈ ಬಗ್ಗೆ ಶಿರ್ವಾ ಠಾಣಾ ಅಪರಾಧ ಕ್ರಮಾಂಕ 15/2015 ಕಲಂ 341,324,504 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
No comments:
Post a Comment