ಅಪಘಾತ ಪ್ರಕರಣ
- ಕಾರ್ಕಳ ನಗರ:ದಿನಾಂಕ:20/03/2015 ರಂದು ಮಧ್ಯಾಹ್ನ 11:10 ಗಂಟೆಗೆ ಪಿರ್ಯಾದಿದಾರರಾದ ಮಹಮ್ಮದ್ ಶರಾಫತ್, (27) ತಂದೆ:ದಿವಂಗತ ಖಾದರ್ ಅಹಮ್ಮದ್, ವಾಸ:ಅಹಮ್ಮದ್ ಮಂಜಿಲ್, ಶಾಂತಿಪಲ್ಕೆ, ಜಾರ್ಕಳ, ಎರ್ಲಪ್ಪಾಡಿ ಗ್ರಾಮ, ಕಾರ್ಕಳ ತಾಲೂಕುರವರು ಮಾರುತಿ ಆಲ್ಟೋ ಕಾರು ನಂಬ್ರ KA 20 P 9852 ನೇದನ್ನು ಕಾರ್ಕಳ ತಾಲೂಕಿನ ಬೈಲೂರು ಗ್ರಾಮದ ಬೈಲೂರು ಹೈಸ್ಕೂಲು ಸಮೀಪ ಕಾರ್ಕಳ-ಉಡುಪಿ ಜಿಲ್ಲಾ ಮುಖ್ಯ ರಸ್ತೆಯಲ್ಲಿ ಜಾರ್ಕಳ ಕಡೆಯಿಂದ ಬೈಲೂರು ಕಡೆಗೆ ಚಲಾಯಿಸಿಕೊಂಡು ಬಂದು ಬೈಲೂರು ಮಸೀದಿ ಕಡೆ ಹೋಗುವರೇ ಸೂಚನೆಯನ್ನು ನೀಡಿ ಕಾರನ್ನು ತನ್ನ ಬಲಗಡೆಗೆ ಚಲಾಯಿಸುತ್ತಿರುವಾಗ ಅದೇ ದಿಕ್ಕಿನಲ್ಲಿ ಕಾರ್ಕಳ ಕಡೆಯಿಂದ ಉಡುಪಿ ಕಡೆಗೆ ಸುನೀಲ್ ಎನ್. ಶೆಟ್ಟಿ ಎಂಬವರು ಬೊಲೆರೋ ಜೀಪ್ ನಂಬ್ರ KA 03 MK 8254 ನೇದನ್ನು ಅತಿವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು, ಮಹಮ್ಮದ್ ಶರಾಫತ್‌ರವರ ಕಾರಿನ ಹಿಂಭಾಗದ ಬಲಬದಿಗೆ ಢಿಕ್ಕಿ ಹೊಡೆದು ಜಖಂಗೊಳಿಸಿ, ಮುಂದೆ ಸಾಗಿ ರಸ್ತೆಯಲ್ಲಿ ಕವುಚಿ ಬಿದ್ದಿದ್ದು, ಎರಡೂ ವಾಹನಗಳು ಜಖಂಗೊಂಡಿರುತ್ತವೆ. ಅಪಘಾತದಿಂದ ಯಾರಿಗೂ ಯಾವುದೇ ರೀತಿಯ ಗಾಯಗಳಾಗಿರುವುದಿಲ್ಲ. ಈ ಬಗ್ಗೆ ಮಹಮ್ಮದ್ ಶರಾಫತ್‌ವರು ನೀಡಿದ ದೂರಿನಂತೆ ಕಾರ್ಕಳ ನಗರ ಠಾಣಾ ಅಪರಾಧ ಕ್ರಮಾಂಕ 26/2015 ಕಲಂ 279 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
No comments:
Post a Comment