Friday, March 20, 2015

Daily Crimes Reported as On 20/03/2015 at 19:30 Hrs



ಅಪಘಾತ ಪ್ರಕರಣಗಳು
  • ಅಮಾಸೆಬೈಲು:ದಿನಾಂಕ:20/03/2015 ರಂದು 12:30 ಗಂಟೆಗೆ ಹೊಸಂಗಡಿ ಕಡೆಯಿಂದ ಕೆ.ಎ 40 1532ನೇ ಲಾರಿ ಚಾಲಕನು ತನ್ನ ಲಾರಿಯಲ್ಲಿ ಸಿಮೆಂಟ್‌ ಮಿಶ್ರ ಮಾಡುವ ಸಾಧನವನ್ನು ತುಂಬಿಸಿಕೊಂಡು ಲಾರಿಯನ್ನು ವೇಗವಾಗಿ ಚಾಲಾಯಿಸಿಕೊಂಡು ಬಂದು ಹುಣ್ಸೆಯಾಡಿ ನಾಗಯ್ಯ ಶೆಟ್ಟಿಯವರ ಮನೆಯ ಎದುರು ರಸ್ತೆಯ ಬದಿಯಲ್ಲಿರುವ ವಿದ್ಯುತ್ ತಂತಿಗೆ ತಗುಲಿದ ಪರಿಣಾಮ ವಿದ್ಯುತ್ ತಂತಿ ತುಂಡಾಗಿ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಲಕ್ಷ್ಮಣ ಗಾಣಿಗ ಎಂಬವರಿಗೆ ತಾಗಿ  ಪೆಟ್ಟಾಗಿರುತ್ತದೆ. ಈ ಬಗ್ಗೆ ಜಿ.ಜಗನ್ನಾಥ (59) ತಂದೆ:ದಿವಂಗತ ಜಿ. ನಾರಾಯಣ ಶೇರುಗಾರ, ವಾಸ:ಶಾಖಾಧಿಕಾರಿ, ಮೆಸ್ಕಾಂ, ಹೊಸಂಗಡಿ, ಕುಂದಾಪುರರವರು ನೀಡಿದ ದೂರಿನಂತೆ ಅಮಾಸೆಬೈಲು ಠಾಣಾ ಅಪರಾಧ ಕ್ರಮಾಂಕ 07/2015 ಕಲಂ:279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಮಲ್ಪೆ: ದಿನಾಂಕ 20/03/2015 ರಂದು ಪಿರ್ಯಾದಿದಾರರಾದ ಗಂಗಾಧರ ಆಚಾರಿ (39) ತಂದೆ: ಪದ್ಮನಾಭ ವಾಸ: ಅಂಬಡಪಾಡಿ ಮನೆ, ಕುಂಜಾಲು ಗಿರಿ ಅಂಚೆ, ಕುರ್ಕಾಲು ಗ್ರಾಮ ಉಡುಪಿ ತಾಲೂಕು ರವರ ತಮ್ಮನಾದ ಗಣಪತಿ ಆಚಾರಿಯವರು ಬೆಳಿಗ್ಗೆ 8:30 ಗಂಟೆಗೆ ತನ್ನ ನಂಬ್ರ KA-20-W-4754 ನೇ ಮೋಟಾರ್‌ ಸೈಕಲನ್ನು ಚಲಾಯಿಸಿಕೊಂಡು ಉಡುಪಿಯಿಂದ ಮಲ್ಪೆ ಕಡೆಗೆ ಹೋಗುವಾಗ ಕೊಡವೂರು ಗ್ರಾಮದ ಕಲ್ಮಾಡಿ ಬಳಿ ಬರುವಾಗ KA-20-EA-4804 ನೇ ಮೋಟಾರ್‌ ಸೈಕಲ್‌ ಸವಾರನು ತನ್ನ ಮೋಟಾರ್‌ ಸೈಕಲನ್ನು ಅತೀ ವೇಗ, ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಚಲಾಯಿಸುತ್ತಾ ಬಂದು ಪಿರ್ಯಾದಿದಾರರ ತಮ್ಮನ ಮೋಟಾರ್‌ ಸೈಕಲಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದು, ಪಿರ್ಯಾದಿದಾರರ ತಮ್ಮನಾದ ಗಣಪತಿ ಆಚಾರಿಯವರು ಮೋಟಾರು ಸೈಕಲ್‌ ಸಮೇತ ರಸ್ತೆಗೆ ಬಿದ್ದ ಪರಿಣಾಮ ತಲೆಗೆ ತೀವ್ರ ಸ್ವರೂಪದ ಗಾಯವಾಗಿದ್ದು ಪುಷ್ಪ ಶಶಿಧರ ಎಂಬವರು ಉಡುಪಿ ಹೈಟೆಕ್‌ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ದಾಖಲಿಸಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ ಎಂಬುದಾಗಿ ಗಂಗಾಧರ ಆಚಾರಿ ರವರು ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 39/2015 ಕಲಂ 279,338, ಐ.ಪಿ.ಸಿ & 134 ಎ & ಬಿ ಮೋಟಾರು ವಾಹನ ಕಾಯ್ದೆಯಂತೆ ಪ್ರಕರಣ ದಾಖಲಿಸಲಾಗಿದೆ.
  • ಶಿರ್ವಾ: ದಿನಾಂಕ 20.03.2015 ರಂದು  ಸಮಯ  10:45 ಗಂಟೆಗೆ  ಪಿರ್ಯಾದಿದಾರರಾದ ಜೆಟ್ಟೋಜಿ ರಾವ್‌ @ ಜಗದೀಶ   ಪ್ರಾಯ 35 ವರ್ಷ ತಂದೆ: ದಿ. ಗುಂಡಪ್ಪ ವಾಸ: ಆಶ್ರಯ ಹೌಸ್‌, ತೋಕೋಳಿ, ಮೂಡುಬೆಳ್ಳೆ ಅಂಚೆ, ಬೆಳ್ಳೆ ಗ್ರಾಮ ಉಡುಪಿ ತಾಲೂಕು ರವರು ತೋಕೊಳಿ ಬಸ್ಸು ನಿಲ್ದಾಣದ  ಬಳಿ ಇರುವಾಗ ಉಡುಪಿ ಕಡೆಯಿಂದ ಮೂಡುಬೆಳ್ಳೆ ಕಡೆಗೆ ಎಪಿ 25 ಡಬ್ಲ್ಯೂ 5359 ನೇದರ ಲಾರಿ ಚಾಲಕ ಶತ್ರುಘ್ನ ಎಪಿ ಎಂಬಾತನು ತನ್ನ ಲಾರಿಯನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು  ಬಂದು ಮೂಡುಬೆಳ್ಳೆ ಕಡೆಯಿಂದ ಉಡುಪಿ ಕಡೆಗೆ ಸಾರ್ವಜನಿಕ ರಸ್ತೆಯಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಕೆಎ 20 ಡಬ್ಲ್ಯೂ 8910  ನೇದರ  ಸವಾರ ರಾಜೇಶ  ಆಚಾರ್ಯ ಎಂಬವರಿಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್‌ ಸೈಕಲ್‌ ಸವಾರ ರಸ್ತೆಗೆ ಬಿದ್ದು ಎರಡು ಕಾಲುಗಳು ಜಖಂಗೊಂಡಿದ್ದು ಎದೆಗೆ, ಎರಡು ಕೈಗಳಿಗೆ ರಕ್ತಗಾಯವಾಗಿರುತ್ತದೆ. ಈ ಅಫಘಾತಕ್ಕೆ ಲಾರಿ  ಚಾಲಕನ ಅತೀ ವೇಗ ಮತ್ತು ಅಜಾಗರೂಕತೆಯೇ  ಕಾರಣವಾಗಿರುತ್ತದೆ. ಅಲ್ಲದೆ    ಲಾರಿಯು  ನವಯುಗ  ಕಂಪೆನಿಯದ್ದಾಗಿದ್ದು ಮೂಡುಬೆಳ್ಳೆಯಿಂದ ಉಡುಪಿಗೆ ಮಣ್ಣು  ಸಾಗಿಸುವ ಲಾರಿ ಆಗಿದ್ದು ಲಾರಿ ಚಾಲಕನಿಗೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಕಂಪೆನಿಯ ಮೆಕ್ಯಾನಿಕಲ್‌ ಮ್ಯಾನೇಜರ್‌ ಶಿವರಾಮಯ್ಯ ಮತ್ತು ವೆಂಕಟೇಶ್ವರಲು ಸರಿಯಾದ ಸೂಚನೆಯನ್ನು ನೀಡದೇ ಇರುವುದರಿಂದ ಸದ್ರಿಯವರ ವಿರುದ್ದ ಹಾಗೂ ಲಾರಿ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರಗಿಸಬೇಕಾಗಿ ಜೆಟ್ಟೋಜಿ ರಾವ್‌ @ ಜಗದೀಶ ರವರು ನೀಡಿದ ದೂರಿನಂತೆ ಶಿರ್ವಾ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 16/2015 ಕಲಂ 279,338,283 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ
  • ಬೈಂದೂರು:ಪಿರ್ಯಾದಿದಾರರಾದ ರಾಘವ (35) ತಂದೆ:ನಾರಾಯಣ ಆಚಾರ್‌, ವಾಸ:ಹಳ್ಳಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹತ್ತಿರ, ಹಳ್ಳಾಡಿ ಹಕ್ರಾಡಿ ಕುಂದಾಪುರ ತಾಲೂಕುರವರ ತಮ್ಮನಾದ ಶ್ರೀಧರ (35) ಎಂಬವರು ಯಾವುದೋ ಮಾನಸಿಕ ವೇದನೆಯಿಂದ ಜೀವನದಲ್ಲಿ ನೊಂದು ದಿನಾಂಕ:20/03/2015 ರಂದು ಮದ್ಯಾಹ್ನ 01:30 ಗಂಟೆಯ ಮೊದಲು  ಕುಂದಾಪುರ ತಾಲೂಕು ಕಾಲ್ತೋಡು ಗ್ರಾಮದ ನಂಜನಗುಡ್ಡೆ ಎಂಬಲ್ಲಿರುವ ರಸ್ತೆಯ ಪಕ್ಕದಲ್ಲಿರುವ ಕಾಡು ಪ್ರದೇಶದಲ್ಲಿ ಯಾವುದೋ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ರಾಘವರವರು ನೀಡಿದ ದೂರಿನಂತೆ ಬೈಂದೂರು ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 09/2015 ಕಲಂ:174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: