ಅಪಘಾತ
ಪ್ರಕರಣ
- ಕುಂದಾಪುರ: ದಿನಾಂಕ 25/03/2015 ರಂದು ಸಮಯ ಸುಮಾರು ಬೆಳಿಗ್ಗೆ 09:45 ಗಂಟೆಗೆ ಕುಂದಾಪುರ ತಾಲೂಕು ಹೆಮ್ಮಾಡಿ ಗ್ರಾಮದ ಹೆಮ್ಮಾಡಿ ಬಸ್ ಸ್ಟಾಪ್ ಬಳಿ ರಾ.ಹೆ 66 ರಸ್ತೆಯಲ್ಲಿ ಆಪಾದಿತ ಆನಂದ ಶೆಟ್ಟಿ ಎಂಬವರು KA-20-C-8544 ನೇ ಮಿನಿ ಟಿಪ್ಪರ್ ಲಾರಿಯನ್ನು ಕುಂದಾಪುರ ಕಡೆಯಿಂದ ತ್ರಾಸಿ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿ ಮಂಜುನಾಥ ಗಾಣಿಗ ಇವರು ತನ್ನ ಬಾಬ್ತು KA-20-EH-3594 ನೇ ಬೈಕ್ ನಲ್ಲಿ ಸಹ ಸವಾರರಾಗಿ ಗೋಪಾಲ ಗಾಣಿಗರವರನ್ನು ಕುಳ್ಳಿರಿಸಿಕೊಂಡು ತ್ರಾಸಿ ಕಡೆಗೆ ಹೋಗಲು ಬೈಕ್ ನ್ನು ಸ್ಟಾರ್ಟ್ ಮಾಡುವಾಗಲೇ ಹಿಂದುಗಡೆಯಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಹಾಗೂ ಸಹ ಸವಾರ ಬೈಕ್ ಸಮೇತ ರಸ್ತೆಯಲ್ಲಿ ಬಿದ್ದು ಸಹ ಸವಾರನಿಗೆ ಗಾಯವುಂಟಾಗಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಠಾಣಾ ಅಪರಾಧ ಕ್ರಮಾಂಕ 33/15 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಸ್ವಾಭಾವಿಕ
ಮರಣ ಪ್ರಕರಣ
- ಕೊಲ್ಲೂರು : ದಿನಾಂಕ: 25/03/2015 ರಂದು ಹಳ್ಳಿಬೇರು, ಕೊಲ್ಲೂರು ಗ್ರಾಮ ಎಂಬಲ್ಲಿ 12.30 ಗಂಟೆಗೆ ಸಂಗೀತಾ ಪ್ರಾಯ:4ವರ್ಷ ಮನೆಯ ಸಮೀಪದ ನುಗ್ಗೆ ಮರದ ಕೆಳಗೆ ಆಟವಾಡುತ್ತಿದ್ದು ಆಗ ಜೋರಾಗಿ ಸುಂಟರ ಗಾಳಿ ಬೀಸಿದ್ದು ನುಗ್ಗೆ ಮರವು ಬುಡ ಸಮೇತ ಅದರ ಅಡಿ ಆಟವಾಡುತ್ತಿದ್ದ ಸಂಗೀತಳ ಮೇಲೆ ಬಿದ್ದು ಪರಿಣಾಮ ಆಕೆಯ ಕಾಲು ಮತ್ತು ಮೈಗೆ ತೀವ್ರ ಸ್ವರೂಪದ ಏಟಾಗಿದ್ದು ಆಕೆಯನ್ನು 108 ಅಂಬುಲೆನ್ಸನಲ್ಲಿ ಚಿಕಿತ್ಸೆಗೆ ಕುಂದಾಪುರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಆಸ್ಪತ್ರೆಯಲ್ಲಿ ಮದ್ಯಾಹ್ನ 2.00 ಗಂಟೆಗೆ ವೈದ್ಯಾಧಿಕಾರಿಗಳು ಪರೀಕ್ಷಿಸಿದ್ದು ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಕೊಲ್ಲೂರು ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 05/2015 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
No comments:
Post a Comment