ಹಲ್ಲೆ
ಪ್ರಕರಣ
- ಕೋಟ: ದಿನಾಂಕ 25/03/2015 ರಂದು ಪಿರ್ಯಾದಿದಾರರಾದ ಶ್ರೀಮತಿ ಲಕ್ಷ್ಮಿ ಕುಲಾಲ್ತಿ (39) ಗಂಡ: ಸಂಜೀವ ಕುಲಾಲ್ ವಾಸ: ನಂದಿಕೇಶ್ವರ ನಿಲಯ ಕಕ್ಕುಂಜೆ ಗ್ರಾಮ ಉಡುಪಿ ತಾಲೂಕು ರವರು ಬೆಳಿಗ್ಗೆ 08:00 ಗಂಟೆಗೆ ದನವನ್ನು ಬಯಲಿಗೆ ಮೇಯಲು ಕಟ್ಟಲು ಹೋಗುತ್ತಿದ್ದಾಗ ಉಡುಪಿ ತಾಲೂಕು ಕಕ್ಕುಂಜೆ ಗ್ರಾಮದ ಸಸಿಗೋಳಿ ದೇವಸ್ಥಾನದ ಬಳಿ ಸಂತೋಷ ಶೆಟ್ಟಿಯವರ ಮನೆಯ ಕಾಲುದಾರಿಯಲ್ಲಿ ಗಿರಿಜಾ ಮತ್ತು ಆಕೆಯ ಮಗನಾದ ವಿಜಯ ಎಂಬವರು ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು, ಗಿರಿಜಾಳು ಆಕೆಯ ಕೈಯಲ್ಲಿದ್ದ ದೊಣ್ಣೆಯಿಂದ ಬಲಭುಜಕ್ಕೆ ಹೊಡೆದುದಲ್ಲದೇ ವಿಜಯನು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುವುದಾಗಿದೆ ಹಲ್ಲೆಯ ಪರಿಣಾಮ ಪಿರ್ಯಾದಿದಾರರು ಚಿಕಿತ್ಸೆ ಬಗ್ಗೆ ಕೋಟೇಶ್ವರದ ಎನ್. ಆರ್ ಆಚಾರ್ಯ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ ಎಂಬುದಾಗಿ ಶ್ರೀಮತಿ ಲಕ್ಷ್ಮಿ ಕುಲಾಲ್ತಿ ರವರು ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 55/15 ಕಲಂ 341,504,324,506,34 ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣಗಳು
- ಮಣಿಪಾಲ: ದಿನಾಂಕ 25.03.15 ರಂದು ಪಿರ್ಯಾದಿದಾರರಾದ ಮಲ್ಲಪ್ಪ, ತಂದೆ: ಎಲ್ಲಪ್ಪ, ವಾಸ:ಮನೆ ನಂ 10-74, ಶಿರೂರು, ಬಾಗಲಕೋಟೆ ರವರು ತನ್ನ ಅಕ್ಕ ಮಲ್ಲಮ್ಮಳೊಂದಿಗೆ ಬೆಳಿಗ್ಗೆ 10:00 ಗಂಟೆಗೆ ಲಕ್ಷ್ಮಿಂದ್ರ ನಗರದಿಂದ ಇಂದ್ರಾಳಿ ಕಡೆಗೆ ನಡೆದುಕೊಂಡು ಹೋಗುತ್ತಾ ಕಾಮಾಕ್ಷಿ ದೇವಸ್ಥಾನಕ್ಕೆ ಹೋಗುವ ರಸ್ತೆಯ ಡಿವೈಡರ್ ಬಳಿ ರಸ್ತೆ ದಾಟಲು ನಿಂತಿದ್ದಾಗ ಕೆಎ 20 ಈಸಿ 833ನೇದರ ಮೋಟಾರ್ ಸೈಕಲ್ ಸವಾರನು ತಾನು ಸವಾರಿ ಮಾಡಿಕೊಂಡು ಬಂದ ಬೈಕನ್ನು ಅತೀ ವೇಗ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರ ಅಕ್ಕ ಮಲ್ಲಮ್ಮಳಿಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಅಕ್ಕ ನೆಲಕ್ಕೆ ಬಿದ್ದು ಅವರ ಕೈ ಕಾಲು, ಬೆನ್ನಿಗೆ ರಕ್ತಗಾಯವಾಗಿರುತ್ತದೆ. ಅವಳನ್ನು ಪಿರ್ಯಾದಿದಾರರು ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ.ಎಮ್.ಸಿ ಆಸ್ಪತ್ರೆಗೆ ದಾಖಲಿಸಿದ್ದಾಗಿದೆ ಎಂಬುದಾಗಿ ಮಲ್ಲಪ್ಪ ರವರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 39/15 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.
- ಪಡುಬಿದ್ರಿ: ದಿನಾಂಕ 25/03/2015 ರಂದು ಬೆಳಿಗ್ಗೆ 08:00 ಗಂಟೆಗೆ ಸಾಂತೂರು ಗ್ರಾಮದ ಸುಬ್ರಮಣ್ಯ ದೇವಸ್ಥಾನದ ದ್ವಾರದ ಸ್ವಲ್ಪ ಮುಂದೆ ತಿರುವು ರಸ್ತೆಯಲ್ಲಿ ಪಡುಬಿದ್ರಿಯಿಂದ ಕಾರ್ಕಳಕ್ಕೆ ಹೋಗುವ ರಾಜ್ಯ ರಸ್ತೆಯ 1 ರಲ್ಲಿ ಕೆಎ-20-9925 ನೇ ಟೆಂಪೋವನ್ನು ಚಾಲಕರಾದ ಲೀಲಾಧರವರು ಬೆಳ್ಮಣ್ ಕಡೆಯಿಂದ ಪಡುಬಿದ್ರಿ ಕಡೆಗೆ ಅತೀ ವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿ ಒಂದು ವಾಹನವನ್ನು ಹಿಂದುಕ್ಕುವ ಸಮಯ ಟೆಂಪೋದ ಹತೋಟಿ ತಪ್ಪಿ ಸ್ಕಿಡ್ ಆಗಿ ಬಿದ್ದು ಜಾರುತ್ತಾ ಹೋಗಿ ರಸ್ತೆಗೆ ಮಗುಚಿ ಬಿದ್ದ ಪರಿಣಾಮ ಪಿರ್ಯಾದಿದಾರರಾದ ಜಯ 32 ವರ್ಷ, ತಂದೆ ಬಿರ್ಕಿಲ, ವಾಸ ದರ್ಕಾಸ ಮನೆ, ನಂದಿಕೂರು ಅಂಚೆ, ಪಲಿಮಾರು ಗ್ರಾಮ, ಉಡುಪಿ ತಾಲೂಕು ಎಂಬವರಿಗೆ ಬಲಕೈಯ ಕೋಲು ಕೈಯ ಬಳಿ, ತಲೆಯ ಎಡಭಾಗದಲ್ಲಿ ಗಾಯವಾಗಿರುತ್ತದೆ. ಟೆಂಪೋ ಚಾಲಕರಾದ ಆರೋಪಿ ಲೀಲಾಧರ ರವರ ಎಡಕಾಲಿಗೆ ಮತ್ತು ಎಡಕೈಗೆ ಗಾಯವಾಗಿರುತ್ತದೆ. ಹಾಗೂ ಟೆಂಪೋದಲ್ಲಿದ್ದ ಸುಕುಮಾರ್ ಎಂಬವರಿಗೆ ತಲೆಗೆ ಹಾಗೂ ಎಡಕೈಗೆ ಗಾಯವಾಗಿ ಉಡುಪಿ ಸಿಟಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಟೆಂಪೋ ಜಖಂ ಗೊಂಡಿರುತ್ತದೆ. ಈ ಬಗ್ಗೆ ಜಯ ರವರು ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 43/15 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.
ಅಸ್ವಾಭಾವಿಕ
ಮರಣ ಪ್ರಕರಣ
- ಪಡುಬಿದ್ರಿ: ದಿನಾಂಕ 24.03.2015 ರಂದು ಪಿರ್ಯಾದಿದಾರರಾದ ಕವಿತಾ ಶೆಟ್ಟಿಗಾರ್ 27 ವರ್ಷ, ಗಂಡ ನಾಗರಾಜ ಶೆಟ್ಟಿಗಾರ್ ವಾಸ ಕೂಸು ನಿಲಯ, ಗುಡ್ಡೆ ಮನೆ, ಪಾದೆಬೆಟ್ಟು ಗ್ರಾಮ, ಉಡುಪಿ ತಾಲೂಕು ಎಂಬವರ ತಂದೆಯವರಾದ ಶಾಂತರಾಮ ಶೆಟ್ಟಿಗಾರ್ ಪ್ರಾಯ 60 ವರ್ಷ ಎಂಬವರಿಗೆ ಮನೆಯಲ್ಲಿ ಎದೆಯ ಎಡಬದಿ ನೋವು ಕಂಡು ಬಂದಾಗ ಪಿರ್ಯಾದಿದಾರರು ಉಡುಪಿ ಸರಕಾರಿ ಆಸ್ಪತ್ರೆಗೆ ಕರೆದು ಕೊಂಡು ಹೋದಾಗ 11:30 ಗಂಟೆಗೆ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಕವಿತಾ ಶೆಟ್ಟಿಗಾರ್ ರವರು ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 5/15 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ
No comments:
Post a Comment