ಅಪಘಾತ
ಪ್ರಕರಣ
- ಕುಂದಾಪುರ: ದಿನಾಂಕ 24/03/2015 ರಂದು ಸಮಯ ಸುಮಾರು ಮಧ್ಯಾಹ್ನ 12:00 ಗಂಟೆಗೆ ಕುಂದಾಪುರ ತಾಲೂಕು ಕಾವ್ರಾಡಿ ಗ್ರಾಮದ ಮುಳ್ಳುಗುಡ್ಡೆ ಬಳಿ ತಿರುವಿನಿಂದ ಕೂಡಿದ ರಾಜ್ಯ ರಸ್ತೆಯಲ್ಲಿ, ಆಪಾದಿತ ಪರಮೇಶ ಎ.ಡಿ ಎಂಬವರು KA20-A-8388 ನೇ ದುರ್ಗಾಂಬಾ ಬಸ್ ಅನ್ನು ಸಿದ್ದಾಪುರ ಕಡೆಯಿಂದ ಕುಂದಾಪುರ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಕೊಂಡು ಬಂದು ಒಮ್ಮಲೆ ಬ್ರೇಕ್ ಹಾಕಿದ ಕಾರಣ ಪಿರ್ಯಾದಿ ಕೃಷ್ಣ ಇವರ ಪಕ್ಕದಲ್ಲಿ ಬಸ್ಸಲ್ಲಿ ಕುಳಿತ್ತಿದ್ದ ಪಿರ್ಯಾದಿಯ ತಾಯಿ ಚಂದು ನಾಯ್ಕ ರವರು ಬಸ್ಸಿಂದ ಎಸೆದು ಮುಂದಿನ ಬಾಗಿಲಿನ ಮೂಲಕ ರಸ್ತೆಯಲ್ಲಿ ಬಿದ್ದು ಚಂದು ನಾಯ್ಕ ರವರು ಗಾಯಗೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಸಂಚಾರ ಠಾಣಾ ಅಪರಾಧ ಕ್ರಮಾಂಕ 32/15 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
- ಉಡುಪಿ: ಪಿರ್ಯಾದಿ ರಮೇಶ್ ರವರು ದಿನಾಂಕ 23/03/2015 ರಂದು ತನ್ನ ಧನಿಯವರ ಬಾಬ್ತು ಕೆಎ 20 ಇಸಿ 3535 ನೇ ಮೋಟಾರು ಸೈಕಲಿನಲ್ಲಿ ಮಧ್ವ ನಗರದಿಂದ ಆದಿ ಉಡುಪಿ ಕಡೆಗೆ ಬರುತ್ತಿರುವಾಗ ರಾತ್ರಿ ಸುಮಾರು 10-15 ಗಂಟೆ ಸಮಯಕ್ಕೆ ಆದಿ ಉಡುಪಿ ಸಂತೆ ಮಾರುಕಟ್ಟೆ ಎದುರು ತಲುಪುವಾಗ ಆದಿ ಉಡುಪಿ ಮಾರುಕಟ್ಟೆ ಒಳಗಿನ ರಸ್ತೆಯಿಂದ ಕೆಎ 19 ಯು 5003 ನೇ ಟಿವಿಎಸ್ ವಿಕ್ಟರ್ ಮೋಟಾರು ಸೈಕಲ್ ನ್ನು ಅದರ ಸವಾರನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಬೈಕ್ ಸಮೇತ ರಸ್ತೆಗೆ ಬಿದ್ದು ತಲೆಯ ಹಿಂಬದಿಗೆ ಮುಖಕ್ಕೆ ಹಲ್ಲಿಗೆ ತುಟಿಗೆ ರಕ್ತಗಾಯವಾಗಿದ್ದು ಬಲ ಭುಜದ ಬಳಿ ಗುದ್ದಿದ ಒಳನೋವು ಉಂಟಾಗಿದ್ದು ಬಲಕಣ್ಣಿನ ಬಳಿ ರಕ್ತಗಾಯವಾಗಿರುತ್ತದೆ. ಅಲ್ಲಿ ಸೇರಿದವರು ಚಿಕಿತ್ಸೆ ಬಗ್ಗೆ ಆದರ್ಶ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಅಪಘಾತಕ್ಕೆ ಕೆಎ 19 ಯು 5003 ನೇ ಟಿವಿಎಸ್ ವಿಕ್ಟರ್ ಮೋಟಾರು ಸೈಕಲ್ ಸವಾರ ಪೌಲ್ ಇಮಾನ್ ರವರ ಅತೀವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಠಾಣಾ ಅಪರಾಧ ಕ್ರಮಾಂಕ 29/15 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
- ಉಡುಪಿ: ಪಿರ್ಯಾದಿ ರಾಜೇಶ್ ಪಾಟೀಲ್ ರವರು ದಿನಾಂಕ 24/03/2015 ರಂದು ತನ್ನ ಬಾಬ್ತು ಕೆಎ 20 Z 6595 ನೇ ಫೋರ್ಡ್ ಕಂಪೆನಿಯ ಕಾರಿನಲ್ಲಿ ಉಡುಪಿಯಿಂದ ಚೆರ್ಕಾಡಿ ಅವರ ಮನೆಗೆ ಚಲಾಯಿಸಿಕೊಂಡು ಹೋಗುತ್ತಿರುವಾಗ್ಗೆ ರಾತ್ರಿ ಸಮಯ ಸುಮಾರು .11-15 ಗಂಟೆಗೆ ಸಂತೆಕಟ್ಟೆ ಆಶೀರ್ವಾದ್ ಟಾಕೀಸಿನ ಎದುರು ಎನ್.ಎಚ್ 66 ರಲ್ಲಿ ಯಾವುದೇ ಪಾರ್ಕಿಂಗ್ ಲೈಟ್ ಹಾಕದೇ ಹಾಗೂ ಇತರ ನಿಲುಗಡೆ ಸೂಚಣೆಯ ದೀಪವನ್ನು ಹಾಕದೇ ರಸ್ತೆಯಲ್ಲಿ ಲಾರಿ ನಿಲ್ಲಿಸಿದ್ದು ರಸ್ತೆಯಲ್ಲಿ ಯಾವುದೇ ಬೆಳಕುಗಳು ಇಲ್ಲದೇ ಇದ್ದುದರಿಂದ ಪಿರ್ಯಾದಿದಾರರು ಚಲಾಯಿಸುತಿದ್ದ ಕಾರು ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆದುದರ ಪರಿಣಾಮ ಪಿರ್ಯಾದಿದಾರರ ವಾಹನವು ಸಂಪೂರ್ಣ ಜಖಂಗೊಂಡಿರುತ್ತದೆ. ಲಾರಿ ನಂಬ್ರ ನೋಡಲಾಗಿ ಕೆಎ 25 ಬಿ 2197 ಆಗಿರುತ್ತದೇ ಸದ್ರಿ ಅಪಘಾತಕ್ಕೆ ಲಾರಿ ಕೆಎ 25 ಬಿ 2197 ನೇ ಚಾಲಕನು ನಿರ್ಲಕ್ಷ್ಯತನದಿಂದ ರಸ್ತೆಯಲ್ಲಿ ನಿಲ್ಲಿಸಿದ್ದೇ ಕಾರಣವಾಗಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಠಾಣಾ ಅಪರಾಧ ಕ್ರಮಾಂಕ 30/15 ಕಲಂ: 279 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಸ್ವಾಭಾವಿಕ
ಮರಣ ಪ್ರಕರಣ
- ಕೋಟ: ಮಂಜು ಕುಲಾಲ್ ಪ್ರಾಯ:60 ವರ್ಷ ಎಂಬುವರು ವಿಪರಿತ ಮದ್ಯ ಸೇವನೆ ಮಾಡುವ ಚಟವನ್ನು ಹೊಂದಿದ್ದು ದಿನಾಂಕ:19/03/2015 ರಂದು ಬೆಳಿಗ್ಗೆ 10:30 ಗಂಟೆಗೆ ಉಡುಪಿ ತಾಲೂಕು ಆವರ್ಸೆ ಗ್ರಾಮದ ಬಾಳೆಗುಡ್ಡೆ ಮನೆ ಎಂಬಲ್ಲಿನ ತನ್ನ ಮನೆಯ ಬಳಿ ಅಡಿಕೆ ಮರದ ಬುಡಕ್ಕೆ ಹಾಕುವ ವಿಷದ ಅಂಶವಿರುವ ಔಷಧವನ್ನು ಕುಡಿದು ಅಸ್ವಸ್ಥ ಗೊಂಡವರನ್ನು ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಿದ್ದು.ದಿನಾಂಕ:24/03/2015 ರಂದು ಸಂಜೆ ಕೆ.ಎಂ.ಸಿ ಆಸ್ಪತ್ರೆಯ ವೈದ್ಯರು ಸದ್ರಿಯವರು ಗುಣಮುಖರಾಗುವ ಸಾಧ್ಯತೆ ಇಲ್ಲದಿರುವುದಾಗಿ ತಿಳಿಸಿ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿದವರನ್ನು ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರಕ್ಕೆ ತಂದಾಗ ಪರೀಕ್ಷಿಸಿದ ವೈದ್ಯರು ರಾತ್ರಿ 8:00 ಗಂಟೆಗೆ ಮಂಜು ಕುಲಾಲ್ ರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಕೋಟ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 14/2015 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
No comments:
Post a Comment