ಅಪಘಾತ ಪ್ರಕರಣ
- ಶಂಕರನಾರಾಯಣ:ದಿನಾಂಕ:24/03/15 ರಂದು ಬೆಳಿಗ್ಗೆ 08:15 ಘಂಟೆಗೆ ಕುಂದಾಪುರ ತಾಲೂಕಿನ ಶಂಕರನಾರಾಯಣ ಗ್ರಾಮದ ಶಂಕರನಾರಾಯಣ ಬಸ್ಸು ನಿಲ್ದಾಣದ ಬಳಿ ಕೆ.ಎ 17 ಎಫ್ 2692 ನೇ ನಂಬ್ರದ ಕೆ.ಎಸ್.ಆರ್.ಟಿ.ಸಿ ಬಸ್ಸನ್ನು ಅದರ ಚಾಲಕ ವಿನೋದ ಶೆಟ್ಟಿ ಇವರು ಸಿದ್ದಾಪುರ ಕಡೆಯಿಂದ ಶಂಕರನಾರಾಯಣ ಬಸ್ಸು ನಿಲ್ದಾಣದ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಅಂಪಾರು ಕಡೆಯಿಂದ ಹಾಲಾಡಿ ಕಡೆಗೆ ರಮೇಶರವರು ಚಲಾಯಿಸಿಕೊಂಡು ಹೋಗುತ್ತಿದ್ದ ಕೆ.ಎ 20 ಇ.ಸಿ 2038 ನೇ ನಂಬ್ರದ ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ರಮೇಶರವರ ತಲೆಗೆ, ಕೈಕಾಲುಗಳಿಗೆ ರಕ್ತಗಾಯವಾಗಿರುತ್ತದೆ.ಈ ಬಗ್ಗೆ ರವಿ ಕುಲಾಲ (44) ತಂದೆ:ಬಸವ ಕುಲಾಲ, ವಾಸ:ಶ್ರೀರತ್ನ ನಿಲಯ, ಶಂಕರನಾರಾಯಣ ಗ್ರಾಮ ಕುಂದಾಫುರ ತಾಲೂಕುರವರು ನೀಡಿದ ದೂರಿನಂತೆ ಶಂಕರನಾರಾಯಣ ಠಾಣಾ ಅಪರಾಧ ಕ್ರಮಾಂಕ 48/15 ಕಲಂ:279 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಹಲ್ಲೆ ಪ್ರಕರಣ
- ಗಂಗೊಳ್ಳಿ:ಆಪಾದಿತ 1)ಭಾಸ್ಕರ ಖಾರ್ವಿ, 2)ಉಮನಾಥ ದೇವಾಡಿಗ, 3)ಸುರೇಶ್ ಖಾರ್ವಿ, 4)ದಿನೇಶ್ ಖಾರ್ವಿ, 5)ರಾಮಚಂದ್ರ ಖಾರ್ವಿ, 6)ಸಂತೋಷ ಖಾರ್ವಿ, 7)ಗಣೇಶ್ ಖಾರ್ವಿ, 8)ರಾಮದಾಸ ಖಾರ್ವಿ, 9)ಭರತ್ ಖಾರ್ವಿ, 10)ಆನಂದ ಖಾರ್ವಿ, 11)ಸತೀಶ್ ಖಾರ್ವಿ, 12)ರತ್ನಾಕರ ಖಾರ್ವಿ, 13)ಲಕ್ಷ್ಮಣ ಖಾರ್ವಿ, 14)ಸಂದೀಪ ಖಾರ್ವಿ, 15)ರಂಜೀತ್ ಖಾರ್ವಿ, 16)ಚಂದ್ರ ಖಾರ್ವಿ, 17)ಆನಂದ ಹೆಗ್ಡೆ, 18)ಸಚಿನ್ ಹೆಗ್ದೆ, 19)ಜಯರಾಮ ದೇವಾಡಿಗ, 20)ಗುರುರಾಜ್ ದೇವಾಡಿಗ, 21)ರಮೇಶ್ ಖಾರ್ವಿ, 22)ರಮಾನಾಥ ಖಾರ್ವಿ, 23)ಗಣೇಶ್ ಖಾರ್ವಿ, 24)ಕಿರಣ್ ಖಾರ್ವಿ, 25)ಅರುಣ್ ಖಾರ್ವಿ, 26)ಕಿರಣ್ ಖಾರ್ವಿ, 27)ದೇವರಾಯ ಖಾರ್ವಿ, 28)ಜಗದೀಶ ಖಾರ್ವಿ, 29)ರಾಜೇಶ್ ಖಾರ್ವಿ, 30)ಹರ್ಷವರ್ಧನ ಖಾರ್ವಿ ಇವರುಗಳು ಪಿರ್ಯಾದಿದಾರರಾದ ಜಗದೀಶ್ ಖಾರ್ವಿ ತಂದೆ:ದಿವಂಗತ ರಾಮ ಖಾರ್ವಿ, ವಾಸ:ಮ್ಯಾಂಗನೀಸ್ ರಸ್ತೆ, ಗಂಗೊಳ್ಳಿ ಹಾಗೂ ದಯಾನಂದ ಎಂಬವರನ್ನು ಹಲ್ಲೆ ನಡೆಸುವ ಸಮಾನ ಉದ್ದೇಶದಿಂದ ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಹೊಡೆದು ಕಾಲಿನಿಂದ ತುಳಿದು ಹಲ್ಲೆ ನೋವುಂಟು ಮಾಡಿದ್ದಲ್ಲದೇ, ಜಗದೀಶ್ ಖಾರ್ವಿರವರು ಕೆಳಗಡೆ ಬಿದ್ದಾಗ ಆಪಾದಿತ ಭಾಸ್ಕರ ಖಾರ್ವಿ ಎಂಬವರು ಅವರ ಕಿಸೆಯಲ್ಲಿದ್ದ 9000/- ರೂಪಾಯಿ ಹಣವನ್ನು ತೆಗೆದುಕೊಂಡು ಉಳಿದ ಆಪಾದಿತರುಗಳಿಗೆ ಹಂಚಿರುತ್ತಾರೆ.ಈ ಬಗ್ಗೆ ಜಗದೀಶ್ ಖಾರ್ವಿರವರು ನೀಡಿದ ದೂರಿನಂತೆ ಗಂಗೊಳ್ಳಿ ಠಾಣಾ ಅಪರಾಧ ಕ್ರಮಾಂಕ 40/2015 ಕಲಂ:143,147,504,341,323,384,506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಸ್ವಾಭಾವಿಕ
ಮರಣ ಪ್ರಕರಣ
- ಕೊಲ್ಲೂರು:ಈ ದಿನ ದಿನಾಂಕ:24/03/2015 ರಂದು ಪಿರ್ಯಾದಿದಾರರಾದ ಹೆಚ್.ಜಯಪ್ರಕಾಶ ಶೆಟ್ಟಿ (44) ತಂದೆ:ವಿ.ಕೆ. ಶೇಷ ಶೆಟ್ಟಿ ವಾಸ:ಮಾವಿನಕಾರು, ಕೊಲ್ಲೂರು ಗ್ರಾಮ, ಕುಂದಾಪುರ ತಾಲೂಕುರವರು ಮನೆಯಿಂದ ಕೊಲ್ಲೂರು ಕಡೆಗೆ ಬರುತ್ತಿರುವಾಗ ಬೆಳಿಗ್ಗೆ 10:30 ಗಂಟೆಗೆ ಕೊಲ್ಲೂರು ಗ್ರಾಮದ ಮಯೂರ ಬಾರ್ ಎದುರು ಇರುವ ಸರಕಾರಿ ಹಾಡಿಯಲ್ಲಿ ಸುಮಾರು 50 ರಿಂದ 60 ವರ್ಷ ಪ್ರಾಯದ ಹೆಸರು, ವಿಳಾಸ ಹಾಗೂ ವಾರಿಸುದಾರರು ತಿಳಿಯದ ಗಂಡಸಿನ ಮೃತ ಶರೀರ ಸರಕಾರಿ ಹಾಡಿಯ ಮರದ ರೆಂಬೆಗೆ ನೈಲಾನ್ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಇರುವುದಾಗಿ ಕಂಡುಬಂದಿದ್ದು ಮೃತರು ಸುಮಾರು 4 ದಿನದ ಹಿಂದೆ ಯಾವುದೋ ಕಾರಣಕ್ಕೆ ಜೀವನದಲ್ಲಿ ಜಿಗುಪ್ಸೆಗೊಂಡು ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಹೆಚ್.ಜಯಪ್ರಕಾಶ ಶೆಟ್ಟಿರವರು ನೀಡಿದ ದೂರಿನಂತೆ ಕೊಲ್ಲೂರು ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 04/15 ಕಲಂ 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
No comments:
Post a Comment