Tuesday, March 24, 2015

Daily Crimes Reported as On 24/03/15 at 17:00 Hrs


ಹಲ್ಲೆ ಪ್ರಕರಣ

  • ಅಮಾಸೆಬೈಲು:ದಿನಾಂಕ:18/03/2015  ರಂದು ಬೆಳಿಗ್ಗೆ ಪಿರ್ಯಾದಿದಾರರಾದ ದೇವಾನಂದ ಗಾಣಿಗ (45) ತಂದೆ:ದಿವಂಗತ ಶಂಕರ ಗಾಣಿಗ, ಕೆಪ್ಪೆಹೊಂಡ ಹೊಸಂಗಡಿ ಗ್ರಾಮ ಕುಂದಾಪುರರವರು ಹೊಸಂಗಡಿ ಪೇಟೆಗೆ ಹೋಗಿ ಸುಮಾರು 12:45 ಗಂಟೆಗೆ ಮನೆಗೆ ಬರುತ್ತಿರುವಾಗ ಪಾದಿತ 1)ನರಸಿಂಹ ಗೊಲ್ಲ, 2)ಪೂರ್ಣಿಮ ಗಂಡ ನರಸಿಂಹ ಗೊಲ್ಲ, 3)ಅರುಣ ಗೊಲ್ಲ ತಂದೆ:ಮಹಾಬಲ ಗೊಲ್ಲ, 4)ಗಣೇಶ ಗೊಲ್ಲ ಎಲ್ಲರೂ ಭದ್ರಪುರ ಹೊಸಂಗಡಿ ವಾಸಿಗಳು, ಸಮಾನ ಉದ್ದೇಶದಿಂದ ಏಕಾಕಿ ಹಲ್ಲೆ ಮಾಡಿದ್ದಾಗಿದೆ.  ಈ ಬಗ್ಗೆ  ದೇವಾನಂದ ಗಾಣಿಗರವರು ನೀಡಿದ ದೂರಿನಂತೆ ಅಮಾಸೆಬೈಲು ಠಾಣಾ ಅಪರಾಧ ಕ್ರಮಾಂಕ 09/2015 ಕಲಂ:323, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.  

ಕಳವು ಪ್ರಕರಣ

  • ಕಾರ್ಕಳ ಗ್ರಾಮಾಂತರ:ದಿನಾಂಕ:22/03/2015 ರಂದು ಸಂಜೆ 19:00 ಗಂಟೆಯಿಂದ ದಿನಾಂಕ:23/03/2015 ರಂದು ಬೆಳಿಗ್ಗೆ 08:30 ಗಂಟೆಯ ನಡುವಿನ ಅವಧಿಯಲ್ಲಿ ಕಾರ್ಕಳ ತಾಲೂಕು ಕಲ್ಯಾ ಗ್ರಾಮದ ನೆಲ್ಲಿಗುಡ್ಡೆ ಕೆ.ಸಿ ಕಾಮತ್ ಎಂಬವರಿಗೆ ಸೇರಿದ ಪಿರ್ಯಾದಿದಾರರಾದ ದೀಪಕ್ ಕಾಮತ್ (37), ತಂದೆ:ದಿವಂಗತ ಪದ್ಮನಾಭ ಕಾಮತ್, ವಾಸ:ಕಾಮತ್ ಬಿಲ್ಡಿಂಗ್, ಕಾಮಜರಕಟ್ಟೆ, ಸಾಂತೂರು, ಉಡುಪಿ ಜಿಲ್ಲೆರವರು ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿರುವ ಕಪ್ಪು ಕಲ್ಲಿನ ಕೋರೆಯಲ್ಲಿ ನೀರೆತ್ತಲು ಅಳವಡಿಸಿದ 5 ಹೆಚ್.ಪಿ ಫೀಲ್ಡ್ ಮಾರ್ಷಲ್ ಕಂಪೆನಿಯ ಡೀಸೆಲ್ ಚಾಲಿತ ಪಂಪ್‌ಸೆಟ್ (ಅಂದಾಜು ಮೌಲ್ಯ 20,000 ರೂಪಾಯಿ) ಮತ್ತು ನವಯುಗ ಕಂಪನಿಯವರು ನೀರೆತ್ತಲು ಅಳವಡಿಸಿದ 5 ಹೆಚ್.ಪಿ ಯ Creuvees Company ಯ ಪಂಪ್‌ಸೆಟ್ಟನ್ನು (ಅಂದಾಜು ಮೌಲ್ಯ 21, 000 ರೂಪಾಯಿ) ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ದೀಪಕ್ ಕಾಮತ್‌ರವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಠಾಣಾ ಅಪರಾಧ ಕ್ರಮಾಂಕ 45/2015 ಕಲಂ:379 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಶಿರ್ವಾ: ದಿನಾಂಕ: 23.03.2015    ಸಮಯ  10:45  ಗಂಟೆಗೆ  ದೇವೆಂದ್ರ   ಜೋಗಿ  ದೇವು  ಜೋಗಿ   ಪ್ರಾಯ   60 ವರ್ಷ  ತಂದೆ:  ದಿ ಬಾಬು   ಜೋಗಿ  ವಾಸ:   ತುಪ್ಪೆ  ಪಾದೆ, ಶಿರ್ವ  ಗ್ರಾಮ  ಮತ್ತು ಅಂಚೆಎಂಬವರು ಮಾವಿನ  ಮರದ  ಮಾವಿನ  ಕಾಯಿಗಳನ್ನು   ಕೀಳುವ   ಸಮಯ  ಆಕಸ್ಮಿಕವಾಗಿ  ಮಾವಿನ  ಮರದ  ಗೆಲ್ಲು  ತುಂಡಾಗಿ   ಆಯ ತಪ್ಪಿ  ಮರದಿಂದ  ಕೆಳಗೆ   ಬಿದ್ದು  ಮೃತ  ಪಟ್ಟಿರುವುದಾಗಿದೆ. ಈ ಬಗ್ಗೆ ಶಿರ್ವಾ ಠಾಣಾ ಅಸ್ವಾಭಾವಿಕ ಮರಣ ಪ್ರಕರಣ ಕ್ರಮಾಂಕ: 05/2015 ಕಲಂ:  174 ಸಿಅರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: