ಉಡುಪಿ ಜಿಲ್ಲೆಯ ಹಿರಿಯಡ್ಕ ಪೊಲೀಸ್ ಠಾಣಾ ಸರಹದ್ದಿನ ಪೆರ್ಣಂಕಿಲ ಗ್ರಾಮದ ವರ್ವಾಡಿ ಶಂಕರ
ಕುಲಾಲರ ಮಗ ಪ್ರವೀಣ್ ಕುಲಾಲ್ (30) ಎಂಬವನು ಹಿರಿಯಡ್ಕ ಠಾಣೆಯ ರೌಡಿ ಅಸಾಮಿಯಾಗಿದ್ದು, ಉಡುಪಿ
ಜಿಲ್ಲೆಯ ವಿವಿಧ ಠಾಣಾ ಸರಹದ್ದುಗಳಲ್ಲಿ ಗೂಂಡಾ ಪ್ರವೃತ್ತಿಯನ್ನು ಬೆಳೆಸಿಕೊಂಡು ಮುಗ್ದ
ಸಾರ್ವಜನಿಕರಲ್ಲಿ ಭಯದ ವಾತಾವರಣವನ್ನು ಸೃಷ್ಠಿ ಮಾಡುತ್ತಿರುವ ಸಾರ್ವಜನಿಕ ನೆಮ್ಮದಿಗೆ
ಕಂಟಕಪ್ರಾಯನಾಗಿ ಮುಂದುವರೆಯುವ ಎಲ್ಲಾ ಸಾಧ್ಯತೆಯಿದ್ದು, ಸಾರ್ವಜನಿಕರ ಪ್ರಾಣ ಹಾನಿ ಹಾಗೂ ಆಸ್ತಿ
ಪಾಸ್ತಿ ನಷ್ಟವನ್ನು ತಪ್ಪಿಸುವ ಸಲುವಾಗಿ ಆರೋಪಿತ ಮೇಲೆ ಗೂಂಡಾ ಕಾಯ್ದೆ ಹಾಕುವಂತೆ ಬ್ರಹ್ಮಾವರ
ವೃತ್ತ ನಿರೀಕ್ಷಕರಾದ ಶ್ರೀ ಅರುಣ್ ಬಿ ನಾಯಕ್ ರವರು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ವಿವರವಾದ
ವರದಿಯನ್ನು ನೀಡಿದ್ದು, ಇದನ್ನು ಪರಿಗಣಿಸಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಅಣ್ಣಾಮಲೈ ಕೆ. ಐ.ಪಿ.ಎಸ್
ರವರು ಮಾನ್ಯ ಜಿಲ್ಲಾಧಿಕಾರಿಯವರಿಗೆ ವರದಿಯನ್ನು ನಿವೇದಿಸಿದ್ದು ದಿನಾಂಕ 23/03/2015 ರಂದು
ಮಾನ್ಯ ಉಡುಪಿ ಜಿಲ್ಲಾ ದಂಡಾಧಿಕಾರಿ ಹಾಗೂ ಮಾನ್ಯ ಜಿಲ್ಲಾಧಿಕಾರಿವರಾದ ಶ್ರೀ ಪಿ. ವಿಶಾಲ್,
ಐ.ಎ.ಎಸ್ ರವರು ಗೂಂಡಾ ಕಾಯ್ದೆ 1985 ರಂತೆ ಬಂಧನದ ಆಜ್ಞೆಯ ಆದೇಶ ಹೊರಡಿಸಿದ್ದು, ಆರೋಪಿ
ಪ್ರವೀಣ್ ಕುಲಾಲ್ ರನ್ನು ಇಂದು ದಸ್ತಗಿರಿ ಮಾಡಿ ಕಲ್ಬುರ್ಗಿ ಕೇಂದ್ರ ಕಾರಾಗೃಹಕ್ಕೆ ಹಾಕಲಾಗಿದೆ.
Tuesday, March 24, 2015
Subscribe to:
Post Comments (Atom)
No comments:
Post a Comment