Tuesday, March 24, 2015

Daily Crimes Reported as On 24/03/15 at 07:00 Hrs


ಹಲ್ಲೆ ಪ್ರಕರಣ
  • ಉಡುಪಿ ನಗರ:ಪಿರ್ಯಾದಿದಾರರಾದ ಶ್ರೀ ಭಾಸ್ಕರ ಪೂಜಾರಿ (52) ತಂದೆ ಕೊರಗ ಪೂಜಾರಿ ವಾಸ: ಶ್ರೀ ಶಾರದಾ ನಿವಾಸ ಮನೆ ನಂಬ್ರ 2-146 ಕೇದಾರ ಉದ್ಯಾವರ ಗ್ರಾಮ ಉಡುಪಿರವರು ಶ್ರೀ ರಾಮ ಬಸ್ಸ್‌‌ ಕೆಎ 19 ಡಿ 9522 ರಲ್ಲಿ ಚಾಲಕನಾಗಿದ್ದು ದಿನಾಂಕ:22/03/2015ರಂದು ಸಂಜೆ ಸುಮಾರು 6:45 ಗಂಟೆಗೆ ಮಣಿಪಾಲದಿಂದ ಕಡಿಯಾಳಿ ಬಸ್ಸ್‌ ನಿಲ್ದಾಣದಕ್ಕೆ ತಲುಪಿ ಜನರನ್ನು ಬಸ್ಸಿಗೆ ಹತ್ತಿಸಿಕೊಳ್ಳುವ ಸಮಯದಲ್ಲಿ ಗಣೇಶ ಸಿಟಿ ಬಸ್ಸ್‌ನ ಚಾಲಕ ಪ್ರದೀಪ್‌ ಹಾಗೂ ಕಂಡಕ್ಟರ್‌ ಅಭಿ ಎಂಬವರು ಬಸ್ಸಿನೊಳಗೆ ಬಂದು ಬಸ್ಸಿನ ಸಮಯದ ವಿಚಾರದಲ್ಲಿ ಬಾಯಿಗೆ ಬಂದಂತೆ ಬೈದು, ಕೈಯಿಂದ ಹೊಡೆದು ಹಲ್ಲೆ ಮಾಡಿರುತ್ತಾರೆ. ಈ ಬಗ್ಗೆ ಶ್ರೀ ಭಾಸ್ಕರ ಪೂಜಾರಿರವರು ನೀಡಿದ ದೂರಿನಂತೆ ಉಡುಪಿ ನಗರ ಠಾಣಾ ಅಪರಾಧ ಕ್ರಮಾಂಕ 63/2015 ಕಲಂ 232,504,34 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ
  • ಹೆಬ್ರಿ:ದಿನಾಂಕ:23/03/2015 ರಂದು ಬೆಳಿಗ್ಗೆ ಸುಮಾರು 11:00 ಗಂಟೆಗೆ ಪಿರ್ಯಾದಿದಾರರಾದ ಉಮೇಶ (43), ತಂದೆ:ರಾಮಣ್ಣ ಪೂಜಾರಿ, ವಾಸ:ರಾಮ ಪ್ರಸಾದ ನಿಲಯ, ಕನ್ಯಾನ ಹೆಬ್ರಿ ಗ್ರಾಮ, ಕಾರ್ಕಳ ತಾಲೂಕುರವರ ಚಿಕ್ಕಪ್ಪ ಸಾಧು ಪೂಜಾರಿ (74) ಎಂಬವರು ಕೃಷಿಯ ಬಗ್ಗೆ ಮುದ್ರಾಡಿ ಗ್ರಾಮದ ಉಪ್ಪಳ ಚಂದ್ರಶೇಖರ ಕಲ್ಕೂರವರ ಮನೆ ಬಳಿ ಇರುವ ಹಾಡಿಯಲ್ಲಿನ ಮಾವಿನ ಮರದಿಂದ ಸೊಪ್ಪನ್ನು ತೆಗೆಯಲು ಮರ ಹತ್ತುವಾಗ ಆಕಸ್ಮಿಕವಾಗಿ ಕಾಲು ಜಾರಿ ಮರದಿಂದ ಕೆಳಗೆ ಬಿದ್ದ ಪರಿಣಾಮ ತಲೆಯ ಹಿಂಭಾಗಕ್ಕೆ ಗುದ್ದಿದ ಪೆಟ್ಟಾಗಿ ಮೃತಪಟ್ಟಿರುತ್ತಾರೆ. ಈ ಬಗ್ಗೆ ಉಮೇಶರವರು ನೀಡಿದ ದೂರಿನಂತೆ ಹೆಬ್ರಿ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 10/15 ಕಲಂ:174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: