ಕಳವು ಪ್ರಕರಣ
- ಉಡುಪಿ: ಪಿರ್ಯಾದಿದಾರರಾದ ಪ್ರಭಾಕರ ಕಲ್ಮಾಡಿ ತಂದೆ ದಿ ತೇಜಪ್ಪ ತಿಂಗಳಾಯ ವಾಸ: ಗುರುಕೃಪಾ ಕಲ್ಮಾಡಿ ಕೊಡಂಕೂರು ಗ್ರಾಮ ರವರು ಕಿನ್ನಿಮೂಲ್ಕಿಯಲ್ಲಿರುವ ಸಿತಾರ್ ಎಂಟರ್‌ಪ್ರಸೆಸ್ ಸಂಸ್ಧೆಯ ಪಾಲುದಾರರಾಗಿದ್ದು ದಿನಾಂಕ: 21/03/2015 ರಂದು ರಾತ್ರಿ ಸುಮಾರು 7:30 ಗಂಟೆ ಸಮಯಕ್ಕೆ ಸದ್ರಿ ಸಂಸ್ಧೆಗೆ ಬೀಗ ಹಾಕಿ ಮನೆಗೆ ಹೋಗಿದ್ದು ದಿನಾಂಕ: 23/03/2015 ರಂದು ಬೆಳಿಗ್ಗೆ ಸುಮಾರು 7:30 ಗಂಟೆ ಸಮಯಕ್ಕೆ ಪೇಪರ್ ಹಾಕುವ ಹುಡುಗ ತಿಳಿಸಿದಂತೆ ಬಂದು ನೋಡಲಾಗಿ ಎದುರಿನ ಶೆಟರ್‌ಗೆ ಹಾಕಿದ ಬೀಗನ್ನು ತುಂಡರಿಸಿದ ಹಾಗೆ ಕಂಡು ಬಂದಿದ್ದು ಫಿರ್ಯಾದಿದಾರರು ಬಂದು ನೋಡುವಾಗ ಸದ್ರಿ ಸಂಸ್ಧೆಯ ಬೀಗವನ್ನು ಯಾರೋ ಕಳ್ಳರು ದಿನಾಂಕ 21-03-2015 ರಂದು ರಾತ್ರಿ 7:30 ರಿಂದ ದಿನಾಂಕ: 23/03/2015 ಬೆಳಿಗ್ಗೆ 7:30 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಸದ್ರಿ ಸಂಸ್ಧೆಯ ಶೆಟರ್‌ಗೆ ಹಾಕಿದ ಬೀಗವನ್ನು ತುಂಡರಿಸಿ ಅಲ್ಲಿದ್ದ ಮೂರು ಏಒಸಿ ಕಂಪನಿಯ ಕಂಪ್ಯೂಟರ ಮಾನಿಟರ್ ಇದರ ಬೆಲೆ 6,000 ರೂಪಾಯಿ ಹಾಗೂ ಗೋಡಾನ್‌ನಲ್ಲಿದ್ದ ಹಾವೆಲ್ಸ್ ಕಂಪನಿಯ ಐರನ್ ಬಾಕ್ಸ್ ಸುಮಾರು 200 ಇದರ ಅಂದಾಜು ಬೆಲೆ 1,20,000/- ಹಾಗೂ ಬಜಾಜ್ ಕಂಪನಿಯ ಐರನ್ ಬಾಕ್ಸ್ 500 ಇದರ ಅಂದಾಜು ಬೆಲೆ 3,00,000/- Clix ಕಂಪನಿಯ ಗ್ಯಾಸ್ ಸ್ಟಾವ್ 10 ಇದರ ಅಂದಾಜು ಬೆಲೆ ರೂಪಾಯಿ 50,000/- ಪ್ಲಾಟಿನ್ ಕಂಪನಿಯ ಇಂಡೆಕ್ಷನ್ 13 ಇದರ ಅಂದಾಜು ಬೆಲೆ ರೂಪಾಯಿ 30,000/- ಹಾಗೂ ನೋಕಿಯ ಕಂಪನಿಯ ಮೊಬೈಲ್ ಹಾಗೂ ಡೆಲ್ ಕಂಪನಿಯ ಲ್ಯಾಪ್ ಟಾಪ್ ಇದರ ಬೆಲೆ ರೂಪಾಯಿ 20,000/-, ಮುಂತಾದವುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾನೆ. ಕಳವಾದ ಸ್ವತ್ತಿನ ಒಟ್ಟು ಅಂದಾಜು ಮೌಲ್ಯ ರೂಪಾಯಿ 5,26,000/- ಆಗಿರುತ್ತದೆ ಎಂಬುದಾಗಿ ಪ್ರಭಾಕರ ಕಲ್ಮಾಡಿ ರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 60/15 ಕಲಂ 454, 457,380 ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment