ಹಲ್ಲೆ ಪ್ರಕರಣ
- ಗಂಗೊಳ್ಳಿ:ದಿನಾಂಕ:22/03/2015 ರಂದು ರಾತ್ರಿ 08:45 ಗಂಟೆಗೆ ಗಂಗೊಳ್ಳಿ ಗ್ರಾಮ ಮ್ಯಾಂಗನೀಸ್ ರಸ್ತೆಯ ಮಂಜುಳಾ ವೈನ್ ಶಾಪ್ ಎದುರುಗಡೆ ಸಾರ್ವಜನಿಕ ರಸ್ತೆಯಲ್ಲಿ ಆಪಾದಿತರಾದ 1)ಜಗದೀಶ 2)ದಯಾನಂದ 3)ರಮೇಶ ಖಾರ್ವಿ 4)ಗಣಪತಿ ಖಾರ್ವಿ 5)ಸತೀಶ್ ಖಾರ್ವಿರವರು ಸ್ಟೀಲ್ ಬೋಟ್ ಎಳೆಯುವ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಪಿರ್ಯಾದಿದಾರರಾದ ಸುರೇಶ್ ಖಾರ್ವಿ (38) ತಂದೆ:ಗಣಪತಿ ಖಾರ್ವಿ, ಉಪ್ಪಿನಕುದ್ರು ಕಳುವಿನ ಬಾಗಿಲು, ಕಾಲೇಜ್ ರಸ್ತೆ, ಗಂಗೊಳ್ಳಿ ಗ್ರಾಮ, ಕುಂದಾಪುರ ತಾಲೂಕುರವರಿಗೆ ಹಲ್ಲೆ ನಡೆಸುವ ಸಮಾನ ಉದ್ದೇಶದಿಂದ ಸೋಡಾ ಬಾಟಲಿಗಳನ್ನು ಕೈಯಲ್ಲಿ ಹಿಡಿದುಕೊಂಡು ಬಂದು ತಡೆದು ನಿಲ್ಲಿಸಿ ಎಂದು ಅವಾಚ್ಯ ಶಬ್ದಗಳಿಂದ ಬೈಯ್ದು ಸೋಡಾ ಬಾಟಲಿ ಮತ್ತು ಕೈಗಳಿಂದ ಹಲ್ಲೆ ನಡೆಸಿ, ನಿನ್ನನ್ನು ಮುಂದಕ್ಕೆ ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುತ್ತಾರೆ.ಈ ಬಗ್ಗೆ ಗಂಗೊಳ್ಳಿ ಠಾಣಾ ಅಪರಾಧ ಕ್ರಮಾಂಕ 39/2015 ಕಲಂ:143,147,148,341,504,323,324,506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ
- ಬ್ರಹ್ಮಾವರ:ದಿನಾಂಕ:23/03/2015 ರಂದು ಮಧ್ಯಾಹ್ನ ಸುಮಾರು 12:00 ಗಂಟೆಗೆ ಉಡುಪಿ ತಾಲೂಕು ಹನೇಹಳ್ಳಿ ಗ್ರಾಮದ, ಕೂರಾಡಿ ಚಾರ್ಲಿ ಕಡವು ಎಂಬಲ್ಲಿ ಬಾವಲಿ ಕುದ್ರು ಕಡೆಯಿಂದ ಕೂಲಿ ಕೆಲಸ ಮುಗಿಸಿ ತನ್ನ ಮನೆಗೆ ಹೋಗಲು ಸೀತಾನದಿಯನ್ನು ಈಜಿ ದಾಟುತ್ತಿದ್ದ ಸುಮಾರು 65 ವರ್ಷದ ಚಾರ್ಲಿ ಡಿ’ಸೋಜಾರವರು ಹೊಳೆಯ ಮಧ್ಯಕ್ಕೆ ತಲುಪಿದಾಗ ನಿಶ್ಯಕ್ತಿಗೊಂಡು ಈಜಲು ಆಗದೇ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿದೆ.ಈ ಬಗ್ಗೆ ಸುರೇಶ್ ಅಲಿಯಾಸ್ ಕರಿಯಾ (40), ತಂದೆ:ಕಾಳಿಂಗ, ವಾಸ:ಕೂರಾಡಿ ಅಂಚೆ, ಹನೇಹಳ್ಳಿ ಗ್ರಾಮ, ಉಡುಪಿ ತಾಲೂಕುರವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 15/2015 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
No comments:
Post a Comment