ಹಲ್ಲೆ
ಪ್ರಕರಣ
- ಕೊಲ್ಲೂರು: ಪಿರ್ಯಾದಿ ಐತಾ ಇವರು ದಿನಾಂಕ:21/03/2015 ರಂದು ಕೆಲಸ ಮುಗಿಸಿ ರಾತ್ರಿ 08:00 ಗಂಟೆಗೆ ಕೆರಾಡಿ ಗ್ರಾಮದ ನಂದ್ರೊಳ್ಳಿ ಕೆರೆ ಮನೆ ಎಂಬಲ್ಲಿ ತೇಜ ಶೆಟ್ಟಿ ಎಂಬವರ ಮನೆಯ ಬಳಿ ತಲುಪುತ್ತಿದ್ದಂತೆ ಅವರ ಪರಿಚಯದ ಗೋವಿಂದ ಶೆಟ್ಟಿ ಎಂಬವರ ಮಗ ರಾಘವೇಂದ್ರ ಮತ್ತು ಗೋವಿಂದ ಶೆಟ್ಟಿ ಎಂಬವರ ಮಗ ರಮೇಶ ಹಾಗೂ ಪರಿಚವಿಲ್ಲದ ಇನ್ನಿಬ್ಬರು ಬಳಿಗೆ ಬಂದು ಅವಾಚ್ಯವಾಗಿ ಬೈದು ಮರದ ರೀಪಿನಿಂದ ಹೊಡೆದು ರಕ್ತಗಾಯಗೊಳಿಸಿರುತ್ತಾರೆ. ಈ ಬಗ್ಗೆ ಕೊಲ್ಲೂರು ಠಾಣಾ ಅಪರಾಧ ಕ್ರಮಾಂಕ 31/15 ಕಲಂ: 504, 324 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
- ಹೆಬ್ರಿ: ದಿನಾಂಕ 21-03-2015 ರಂದು ಸಂಜೆ ಪಿರ್ಯಾ ಸುರೇಂದ್ರ ಶೆಟ್ಟಿ ಇವರ ಸಂಬಂದಿಕರಾದ ಮಡಾಮಕ್ಕಿ ಗ್ರಾಮದ, ನಡುಬೆಟ್ಟು ಎಂಬಲ್ಲಿನ ಶ್ಯಾಮರಾಜ ಶೆಟ್ಟಿ ಎಂಬುವವರ ಮನೆಯಲ್ಲಿ ಅವರ ಹೆಂಡತಿ ಪ್ರಪುಲ್ಲಾ ಶೆಡ್ತಿಯವರು ಒಬ್ಬರೇ ಇರುವ ಸಂದರ್ಭದಲ್ಲಿ ಗಣಪ ಕುಲಾಲ ಎಂಬುವವರು ಶ್ಯಾಮರಾಜ ಶೆಟ್ಟಿಯವರ ಮನೆಯ ಹತ್ತಿರ ಬಂದು “ನಿನ್ನ ಗಂಡ ಎಲ್ಲಿದ್ದಾನೆ? ಅವನನ್ನು ಇಂದು ಕೊಂದು ಮುಗಿಸುತ್ತೇನೆ” ಎಂಬಿತ್ಯಾದಿಯಾಗಿ ಬೆದರಿಸಿ ಹೋಗಿರುವ ವಿಚಾರ ತನ್ನ ಹೆಂಡತಿಯಿಂದ ತಿಳಿದ ಶ್ಯಾಮರಾಜ ಶೆಟ್ಟಿಯವರು ರವಿರಾಜ ಶೆಟ್ಟಿ, ಜಯರಾಮ ಶೆಟ್ಟ ಹಾಗೂ ಪಿರ್ಯಾದಿದಾರರಾದ ಸುರೇಂದ್ರ ಶೆಟ್ಟಿಯವರೊಂದಿಗೆ ರಾತ್ರಿ ಸುಮಾರು 8:00 ಗಂಟೆಗೆ ನಾಡ್ಪಾಲು ಗ್ರಾಮದ, ಮುಳ್ಳುಹಕ್ಲು ಎಂಬಲ್ಲಿನ ಆರೋಪಿ ಗಣಪ ಕುಲಾಲ್ ರವರಲ್ಲಿ ಬೈದಿರುವ ವಿಚಾರವನ್ನು ಪ್ರಶ್ನಿಸುವುದಕ್ಕೆ ಅವರ ಮನೆಯ ಅಂಗಳಕ್ಕೆ ಹೋದಾಗ ಆರೋಪಿಯು ಶ್ಯಾಮರಾಜ ಶೆಟ್ಟಿ ಹಾಗೂ ರವಿರಾಜ ಶೆಟ್ಟಿ ಯವರ ತಲೆಗೆ ಕತ್ತಿಯಿಂದ ಹೊಡೆದ ಪರಿಣಾಮ ತೀವ್ರ ಗಾಯಗೊಂಡಿದ್ದಲ್ಲದೇ, ತಪ್ಪಿಸಲು ಹೋದ ಪಿರ್ಯಾದಿದಾರರಿಗೂ ಹಾಗೂ ಜಯರಾರಾಮ ಶೆಟ್ಟಿಯವರಿಗೂ ಅದೇ ಕತ್ತಿಯಿಂದ ಕಡಿದಿರುವುದಾಗಿದೆ. ಈ ಬಗ್ಗೆ ಹೆಬ್ರಿ ಠಾಣಾ ಅಪರಾಧ ಕ್ರಮಾಂಕ 19 /15 ಕಲಂ: 307, 324 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
- ಹೆಬ್ರಿ: ದಿನಾಂಕ 22-03-2015 ರಂದು ಸಂಜೆ ಸುಮಾರು 5:00 ಗಂಟೆಗೆ ಶೀನ (49) ಎಂಬುವವರು ಸೊಪ್ಪು ತರಲು ಮೇಲ್ಬೆಟ್ಟು ಹಾಡಿಗೆ ಹೋಗಿದ್ದು, ಸೊಪ್ಪು ಕಡಿಯಲು ಮರವೇರಿದ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿರುತ್ತಾರೆ. ಈ ಬಗ್ಗೆ ಹೆಬ್ರಿ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 09/2015 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
No comments:
Post a Comment