Sunday, March 22, 2015

Daily Crime Reports As on 22/03/2015 at 19:30 Hrs

ಜುಗಾರಿ ದಾಳಿ ಪ್ರಕರಣ
  • ಹಿರಿಯಡ್ಕ: ದಿನಾಂಕ 22/03/2015 ರಂದು ಶ್ರೀ ರಫಿಕ್ ಎಂ. ಪೋಲೀಸ್ ಉಪನಿರೀಕ್ಷಕರು, ಹಿರಿಯಡ್ಕ ಪೊಲೀಸ್ ಠಾಣೆರವರು ಆತ್ರಾಡಿ ಗ್ರಾಮದ ಬಾರ್ ನ ಹಿಂಬದಿಯಲ್ಲಿ ಅಂದರ್ ಬಾಹರ್ ಎಂಬ ಇಸ್ಪೀಟು ಎಲೆಯ ಜುಗಾರಿ ಆಟ ಆಡುತ್ತಿರುವ ಖಚಿತ ಮಾಹಿತಿ ದೊರೆತಂತೆ 15:15 ಗಂಟೆಗೆ ಸಿಬ್ಬಂದಿಯವರೊಂದಿಗೆ ಹಾಗೂ ಪಂಚಾಯತುದಾರರೊಂದಿಗೆ ದಾಳಿ ನಡೆಸಿ ಜುಗಾರಿ ಆಟ ಆಡುತ್ತಿದ್ದ ಆರೋಪಿತರಾದ 1. ಬಸವರಾಜ್, 2, ಪ್ರವೀಣ್ ಕುಮಾರ್, 3. ಅಕ್ಬರ್ ಅಲಿ, 4, ರಮೇಶ್ ನಾಯ್ಕ ಎಂಬವರನ್ನು ದಸ್ತಗಿರಿ ಮಾಡಿ, ಆರೋಪಿತರಿಂದ ಜೂಜಾಟಕ್ಕೆ ಬಳಸಿದ ನಗದು ರೂಪಾಯಿ 1320/-, ಹಳೆಯ ದಿನಪತ್ರಿಕೆ-1 ಹಾಗೂ ಇಸ್ಪೀಟು ಎಲೆ- 52 ನ್ನು ಮುಂದಿನ ಕ್ರಮದ ಬಗ್ಗೆ ವಶಪಡಿಸಿಕೊಂಡಿರುವುದಾಗಿದೆ. ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 17/2015 ಕಲಂ 87 ಕರ್ನಾಟಕ ಪೊಲೀಸ್ ಕಾಯ್ದೆಯಂತೆ ಪ್ರಕರಣ ದಾಖಲಿಸಲಾಗಿದೆ.

ಅಪಘಾತ ಪ್ರಕರಣಗಳು  
  • ಶಂಕರನಾರಾಯಣ: ದಿನಾಂಕ 21/03/2015 ರಂದು 19.30 ಗಂಟೆಗೆ ಕುಂದಾಪುರ ತಾಲೂಕಿನ ಹಾಲಾಡಿ 76 ಗ್ರಾಮದ ಬತ್ಗೋಳಿ ಎಂಬಲ್ಲಿ ಕೆಎ 20 ಸಿ 7744 ನೇ ನಂಬ್ರದ ಟಿಪ್ಪರ್ ಚಾಲಕ ಶೇಖರ ರವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಟಿಪ್ಪರಿನ ಬಲಬದಿ ಹಿಂದಿನ ಚಕ್ರ ಚರಂಡಿಗೆ ಹೋಗಿದ್ದು, ಆಗ ಅಲ್ಲಿ ಇದ್ದ ನಿತಿನ್ ಶೆಟ್ಟಿ ಎಂಬವರಲ್ಲಿ ಚಾಲಕನು ಲಾರಿಯ ಹಿಂದಿನ ಚಕ್ರಕ್ಕೆ ಕಲ್ಲು ಕೊಡುವಂತೆ ಹೇಳಿದ್ದು ಆಗ ನಿತಿನ್ ಶೆಟ್ಟಿಯವರು ಟಿಪ್ಪರ್‌ನ ಹಿಂದಿನ ಚಕ್ರಕ್ಕೆ ಕಲ್ಲು ಕೊಡುತ್ತಿರುವಾಗ ಚಾಲಕನು ಯಾವುದೇ ಮುನ್ಸೂಚನೆ ನೀಡದೆ ಒಮ್ಮೆಲೆ ಅಜಾಗರೂಕತೆಯಿಂದ ಹಿಂದಕ್ಕೆ ಚಲಾಯಿಸಿದ ಪರಿಣಾಮ ಲಾರಿಯ ಚಕ್ರ ನಿತಿನ್ ಶೆಟ್ಟಿಯವರ ಬಲಕೈಯ ಅಂಗೈ ಮೇಲೆ ಹತ್ತಿದ್ದು ಇದರ ಪರಿಣಾಮ ಅವರ ಬಲಕೈಯ ಅಂಗೈ ಮೇಲುಗಡೆ ಹಾಗೂ ಕೈ ಬೆರಳುಗಳಿಗೆ ರಕ್ತಗಾಯವಾಗಿರುತ್ತದೆ ಎಂಬುದಾಗಿ ಕರುಣಾಕರ ಕುಲಾಲ (29) ತಂದೆ: ಬಸವ ಕುಲಾಲ ವಾಸ: ಆವರ್ಸೆ ಗುಡಾರಬೆಟ್ಟು ಆವರ್ಸೆ ಗ್ರಾಮ ಉಡುಪಿ ತಾಲೂಕು ರವರು ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 47/2015 ಕಲಂ 279, 337 ಐ.ಪಿ.ಸಿ ಯಂತೆ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಮಲ್ಪೆ: ಪಿರ್ಯಾದಿದಾರರಾದ ಕೆ. ಮಹಮ್ಮದ್ ಬುರಾಹನ್ (21) ತಂದೆ: ಕೆ.ಎಮ್. ಶರೀಫ್ ವಾಸ: ಕೆಇಬಿ ಬಳಿ, ವಡಬಾಂಡೇಶ್ವರ, ಮಲ್ಪೆ ಕೊಡವೂರು ಗ್ರಾಮ ಎಂಬವರ ಅಣ್ಣಂದಿರಾದ ಮೊಹಮ್ಮದ್ ಆಲಿ ಅಫ್ತಾಬ್ ಮತ್ತು ಕೆ. ಮಹಮ್ಮದ್ ಬಿಲಾಲ್ ರವರು ತನ್ನ ಸಂಬಂಧಿಕರ ಮೋಟಾರು ಸೈಕಲ್ ನಂಬ್ರ ಕೆಎ 20 ಇಎಫ್‌ 5033 ನೇ ಯದನ್ನು ಸವಾರಿ ಮಾಡಿಕೊಂಡು ಬರುವಾಗ ಕೆ. ಮೊಹಮ್ಮದ್ ಬಿಲಾಲ್ ನು ಬೈಕ್ ಸವಾರಿ ಮಾಡುತ್ತಿದ್ದು ಮಹಮ್ಮದ್ ಆಲಿ ಅಫ್ತಾಬ್ ನು ಸಹಸವಾರನಾಗಿ ಕುಳಿತಿದ್ದು, ದಿನಾಂಕ 22/03/2015 ರಂದು ಬೆಳಿಗ್ಗೆ 03:00 ಗಂಟೆಗೆ ಕೊಡವೂರು ಗ್ರಾಮದ  ಮಲ್ಪೆಯ ಅಂಬಾ ಸಲೂನ್ ಬಳಿ ಸದ್ರಿ ಮೋಟಾರು ಸೈಕಲ್ ಸವಾರನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ನಾಯಿ ಎದುರು ಬಂದಾಗ ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯ ಆವರಣಕ್ಕೆ ಡಿಕ್ಕಿ ಹೊಡೆಸಿದ್ದರಿಂದ ಮೋಟಾರು ಸೈಕಲ್ ಸವಾರ ಹಾಗೂ ಸಹಸವಾರನಾದ ಮೊಹಮ್ಮದ್ ಆಲಿ ಅಫ್ತಾಬ್ ಬಿದ್ದು ಸಹಸವಾರನಿಗೆ ಮುಖಕ್ಕೆ ಹಣೆಗೆ ತುಟಿಗೆ ಎದೆಭಾಗಕ್ಕೆ ಪಟ್ಟಾಗಿದ್ದು ಚಿಕಿತ್ಸೆ ಬಗ್ಗೆ ಆದರ್ಶ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ ಎಂಬುದಾಗಿ ಕೆ. ಮಹಮ್ಮದ್ ಬುರಾಹನ್ ತಾಲೂಕು ರವರು ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 40/2015 ಕಲಂ 279, 337 ಐ.ಪಿ.ಸಿ ಯಂತೆ ಯಂತೆ ಪ್ರಕರಣ ದಾಖಲಿಸಲಾಗಿದೆ.

No comments: