ಹಲ್ಲೆ ಪ್ರಕರಣ
- ಕೊಲ್ಲೂರು:ದಿನಾಂಕ:21/03/2015 ರಂದು ರಾತ್ರಿ 08:30 ಗಂಟೆಗೆ ಕುಂದಾಪುರ ತಾಲೂಕು ಕೊಲ್ಲೂರು ಠಾಣಾ ಸರಹದ್ದಿನ ವಂಡ್ಸೆ ಗ್ರಾಮದ ಹರವರಿ ಅಬ್ಬಿ ಎಂಬಲ್ಲಿನ ಪಿರ್ಯಾದಿದಾರರಾದ ಮಂಜುನಾಥ ಗಾಣಿಗ (48) ತಂದೆ:ರಾಮ ಗಾಣಿಗ, ವಾಸ:ಅಬ್ಬಿ ಹರವರಿ, ವಂಡ್ಸೆ ಅಂಚೆ ಮತ್ತು ಗ್ರಾಮರವರ ಮನೆಗೆ ದಾರಿಯ ವಿಷಯದ ತಕರಾರಿನ ಬಗ್ಗೆ ಚಂದ್ರ ಗಾಣಿಗ ಹಾಗೂ ಅವರ ಹೆಂಡತಿ ಭವಾನಿ ಎಂಬವರು ಅಕ್ರಮ ಪ್ರವೇಶ ಮಾಡಿ ಮಂಜುನಾಥ ಗಾಣಿಗರವರ ಹೆಂಡತಿಗೆ ಬೈದಿದ್ದು, ಮಂಜುನಾಥ ಗಾಣಿಗರವರು ಪ್ರಶ್ನಿಸಲು ಹೋದಾಗ ಕೈಯಿಂದ ಹೊಡೆದು, ಹಲ್ಲಿನಿಂದ ಕೈಯ ಹೆಬ್ಬೆರಳಿಗೆ ಕಚ್ಚಿ ಗಾಯಗೊಳಿಸಿ, ದಾರಿ ಬಿಡದಿದ್ದರೆ ಕೊಲ್ಲದೇ ಬಿಡುವುದಿಲ್ಲವಾಗಿ ಜೀವ ಬೆದರಿಕೆ ಹಾಕಿದ್ದಾಗಿದೆ.ಈ ಬಗ್ಗೆ ಮಂಜುನಾಥ ಗಾಣಿಗರವರು ನೀಡಿದ ದೂರಿನಂತೆ ಕೊಲ್ಲೂರು ಠಾಣಾ ಅಪರಾಧ ಕ್ರಮಾಂಕ 28/2015 ಕಲಂ:448, 323, 504, 506 ಜೊತೆಗೆ 34 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
No comments:
Post a Comment