ಬೆಟ್ಟಿಂಗ್ ಪ್ರಕರಣ
- ಹೆಬ್ರಿ:ದಿನಾಂಕ 21/03/2015 ರಂದು ಬೆಳಿಗ್ಗೆ 11:20 ಗಂಟೆಗೆ ಪಿರ್ಯಾದಿದಾರರಾದ ಟಿ.ಆರ್.ಜೈಶಂಕರ್, ಪೊಲೀಸ್ ನಿರೀಕ್ಷಕರು, ಡಿ.ಸಿ.ಐ.ಬಿ ಉಡುಪಿರವರು ಸಿಬ್ಬಂದಿಗಳೊಂದಿಗೆ ಕಾರ್ಕಳ ತಾಲೂಕು, ಹೆಬ್ರಿ ಗ್ರಾಮದ ಪರಿಶ್ರಮ ಚಿಕನ್ ಸ್ಟಾಲ್ ಹತ್ತಿರ ಸ್ವಂತ ಲಾಭಕ್ಕೊಸ್ಕರ 5 ಸಾವಿರದಿಂದ 10 ಸಾವಿರದವರೆಗೆ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಸುಂದರ್ ಕಾಮತ್, ರಾಜೇಶ್, ಬಾಬು ಸೀತಾನದಿ, ಪ್ರತಾಪ ಹೆಗ್ಡೆ ಇವರುಗಳ ಮೇಲೆ ದಾಳಿ ನಡೆಸಿ ಸುಂದರ್ ಕಾಮತ್ (38), ತಂದೆ:ಸುಬ್ರಾಯ ಕಾಮತ್, ವಾಸ:ಹೆಬ್ರಿ ಗ್ರಾಮ, ಕಾರ್ಕಳ ತಾಲೂಕು ಎಂಬವರನ್ನು ದಸ್ತಗಿರಿ ಮಾಡಿ ,ಆತನಲ್ಲಿದ್ದ 17,010/- ರೂಪಾಯಿ, 2 ರಾಯಲ್ ನೋಟ್ ಬುಕ್, ಮೈಕ್ರೊ ಮ್ಯಾಕ್ಸ್ ಕಂಪನಿಯ-1, ಲಾವಾ ಕಂಪನಿಯ-1 ಮೊಬೈಲ್, ಒಟ್ಟು 2 ಮೊಬೈಲ್ ಸೆಟ್ ಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.ಈ ಬಗ್ಗೆ ಹೆಬ್ರಿ ಠಾಣಾ ಅಪರಾಧ ಕ್ರಮಾಂಕ 18/15 ಕಲಂ:78(i), 78(vi) ಕೆ.ಪಿ ಆಕ್ಟ್‌ನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
No comments:
Post a Comment