ಅಪಘಾತ ಪ್ರಕರಣ
- ಕುಂದಾಪುರ: ದಿನಾಂಕ 21/03/2015 ರಂದು ಸಮಯ ಸುಮಾರು ಮಧ್ಯಾಹ್ನ 1:20 ಗಂಟೆಗೆ ಕುಂದಾಪುರ ತಾಲೂಕು ಕಸಬಾ ಗ್ರಾಮದ ಸಂತೆ ಮಾರ್ಕೆಟ್ ಬಳಿ ರಾ.ಹೆ ರಸ್ತೆಯಲ್ಲಿ, ಆಪಾದಿತ ರಾಮಕೃಷ್ಣ ಆಚಾರ್ ಎಂಬವರು KA33-N-245ನೇ ಬೋಲೇರೋ ಜೀಪ್ ನ್ನು ಸಂತೆ ಮಾರ್ಕೆಟ್ ಕಡೆಯಿಂದ ರಾ.ಹೆ 66 ರಸ್ತೆಗೆ ಅತೀ ವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಾದ ಪ್ರಕಾಶ್ ಶೆಟ್ಟಿ (19) ತಂದೆ: ಶಿವರಾಮ ಶೆಟ್ಟಿ ವಾಸ: ಹಳೇ ಪಂಚಾಯತ್ ಕಟ್ಟಡದ ಬಳಿ, ವಂಡ್ಸೆ ಗ್ರಾಮ, ಕುಂದಾಪುರ ತಾಲೂಕು ಎಂಬವರು ಕುಂದಾಪುರ ಕಡೆಯಿಂದ ವಂಡ್ಸೆ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದ KA20-EH-5796 ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರ ಎಡಕಾಲಿನ ಮುಂಗಾಲು ಗಂಟಿನ ಕೆಳಗೆ ರಕ್ತಗಾಯ ಹಾಗೂ ಒಳ ನೋವು ಆಗಿ ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ ಎಂಬುದಾಗಿ ಪ್ರಕಾಶ್ ಶೆಟ್ಟಿ ರವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 31/2015 ಕಲಂ 279, 337 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ
- ಬೈಂದೂರು: ದಿನಾಂಕ 20.03.2015 ರ ರಾತ್ರಿ 7:00 ಗಂಟೆಯಿಂದ ದಿನಾಂಕ 21.03.2015 ರ ಬೆಳಿಗ್ಗೆ 08:00 ಗಂಟೆಯ ಮಧ್ಯ ಸಮಯದಲ್ಲಿ ಫಿರ್ಯಾದಿದಾರರಾದ ನಾಗ (47) ತಂದೆ: ಮುಡೂರ ಕೊರಗ ವಾಸ: ಹೊಸಮನೆ ಬಳಿ, ಕೋಣ್ಕಿ ಬಡಾಕೆರೆ ಗ್ರಾಮ ಕುಂದಾಪುರ ತಾಲುಕು ಎಂಬವರ ತಮ್ಮ ತೇಜ (45) ರವರು ಕೆಲಸಕ್ಕೆ ಹೋದವರು ವಾಪಾಸ್ಸು ಮನೆ ಕಡೆ ಬರುತ್ತಿರುವಾಗ ಕುಂದಾಪುರ ತಾಲೂಕು ಬಡಾಕೆರೆ ಗ್ರಾಮದ ಚಪ್ಪಳಿಕಟ್ಟೆಯ ಹತ್ತಿರ ನಡೆದುಕೊಂಡು ರೈಲ್ವೆ ಟ್ರಾಕ್ ಬಳಿ ಬರುತ್ತಿರುವಾಗ ಆಕಸ್ಮಿಕವಾಗಿ ರೈಲು ಡಿಕ್ಕಿಯಾದ ಪರಿಣಾಮ ತೀವೃ ಸ್ವರೂಪದ ರಕ್ತಗಾಯವಾಗಿ ಮೃತಪಟ್ಟಿರುವುದಾಗಿದೆ ಎಂಬುದಾಗಿ ನಾಗ ರವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 10/2015 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment