Tuesday, March 31, 2015

Daily Crime Reports As on 31/03/2015 at 19:30 Hrs

ಗಂಡಸು ಕಾಣೆ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಸುಕನ್ಯ ಜಗದೀಶ್‌ (31) ವಾಸ: ಇಟ್ಟಣಿಗೆ ಮನೆ ಪೆರ್ಡೂರು ಗ್ರಾಮ ಉಡುಪಿ ತಾಲೂಕು ಎಂಬವರ ಗಂಡ ಜಗದೀಶ್ ಸೇರಿಗಾರ್ (38) ರವರು ಪೋಟೋ ಗ್ರಾಫ್‌ರ್‌ ಕೆಲಸ ಮಾಡಿಕೊಂಡಿದ್ದು ಸದ್ರಿ ಕೆಲಸದಲ್ಲಿ ನಷ್ಟವಾದ ಕಾರಣ ಅದೇ ಚಿಂತೆಯಲ್ಲಿದ್ದು ಅವರು ಇತ್ತೀಚಿಗೆ ಮಾನಸಿಕ ಖಿನ್ನತೆಯಿಂದ ಬಳಳುತ್ತಿದ್ದರು ಈ ಬಗ್ಗೆ ಉಡುಪಿ ಬಾಳಿಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಲಾಗುತ್ತಿತ್ತು ದಿನಾಂಕ 05-03-2015 ರಿಂದ ಫಿರ್ಯಾದಿದಾರರ ಗಂಡ ಅವರ ಮನೆಗೂ ಬಾರದೇ ಫಿರ್ಯಾದಿದಾರರ ತಾಯಿ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ ಈ ಬಗ್ಗೆ ಸಂಬಂಧಿಕರ ಮನೆಯಲ್ಲಿ ಸ್ನೇಹಿತರಲ್ಲಿ ವಿಚಾರಿಸಿದಲ್ಲಿ ಈ ವರೆಗೆ ಪತ್ತೆಯಾಗಿರುವುದಿಲ್ಲ  ಎಂಬುದಾಗಿ ಸುಕನ್ಯ ಜಗದೀಶ್‌ ರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 66/2015 ಕಲಂ ಗಂಡಸು ಕಾಣೆಯಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ
  • ಕುಂದಾಪುರ: ದಿನಾಂಕ 31.03.2015 ರಂದು ಬೆಳಿಗ್ಗೆ 11:30 ಗಂಟೆಗೆ ಕುಂದಾಪುರ ತಾಲೂಕು ಕಂದಾವರ ಗ್ರಾಮದ ಸಾಂತಾವರ ಎಂಬಲ್ಲಿ ಕೊಂಕಣ ರೈಲ್ವೆಗೆ ಸಂಬಂಧಪಟ್ಟ ಜಾಗದಲ್ಲಿ ಸುಮಾರು 53 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತ ದೇಹ ಇರುವುದಾಗಿ ಮಾಹಿತಿ ಬಂದಿದ್ದು, ಸದ್ರಿ ಮೃತ ದೇಹದ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ರಾಜೇಶ ಶೆಟ್ಟಿ ಸೀನಿಯರ್‌ ಸ್ಟೇಶನ್‌ ಮಾಸ್ಟರ್‌, ಕೊಂಕಣ ರೈಲ್ವೆ ಸ್ಟೇಶನ್‌, ಕುಂದಾಪುರ ರವರು ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 10/2015 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಪಘಾತ ಪ್ರಕರಣ
  • ಬೈಂದೂರು: ದಿನಾಂಕ 31/03/2015 ರಂದು ಬೆಳಿಗ್ಗೆ 10:45 ಗಂಟೆಗೆ ಕೆಎ 20 ಡಿ 1030 ನೇ ನಂಬ್ರದ ರಿಕ್ಷಾವನ್ನು ಅದರ ಚಾಲಕನು ರಾ.ಹೆ 66 ರಲ್ಲಿ ಶಿರೂರು ಪೇಟೆಯಿಂದ ಮಾರ್ಕೇಟ್ ಕಡೆಗೆ ಮಿತವಾದ ವೇಗದಲ್ಲಿ ಚಲಾಯಿಸಿಕೊಂಡು ಹೋಗುತ್ತಿದ್ದು, ಶಿರೂರು ಗ್ರಾಮದ ಶಿರೂರು ಕೆಳಪೇಟೆ ಬ್ರಿಡ್ಜ್ ಬಳಿ ತಲುಪುವಾಭಟ್ಕಳ ಕಡೆಯಿಂದ ಬೈಂದೂರು ಕಡೆಗೆ ಕೆಎ 30 ಎ 0854 ನೇ ನಂಬ್ರದ ಟವೇರಾ ಕಾರನ್ನು ಅದರ ಚಾಲಕನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಎದುರಿನಿಂದ ಬರುತ್ತಿದ್ದ ಕೆಎ 20 ಡಿ 1030 ನೇ ನಂಬ್ರದ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಚಾಲಕನ ತಲೆ, ಮೂಗಿಗೆ ರಕ್ತಗಾಯವಾಗಿದ್ದು ಕುತ್ತಿಗೆಗೆ ಗುದ್ದಿದ ನೋವುಂಟಾಗಿರುತ್ತದೆ ಎಂಬುದಾಗಿ ಎಸ್.ಎಮ್ ಗೌಸ್ (72) ತಂದೆ: ದಿ.ಶಂಶುದ್ದಿನ್  ವಾಸ: ನೂರ್ ಮಂಜಿಲ್ ಬುಕಾರಿ ಕಾಲೋನಿ ಶಿರೂರು ಗ್ರಾಮ ಕುಂದಾಪುರ ತಾಲುಕು ರವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 75/2015 ಕಲಂ 279, 337 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

No comments: