Wednesday, April 01, 2015

Daily Crime Reports As on 01/04/2015 at 07:00 Hrs

ಜುಗಾರಿ ಪ್ರಕರಣ
  • ಹಿರಿಯಡ್ಕ : ದಿನಾಂಕ: 31/03/2015 ರಂದು ಅಂಜಾರು ಗ್ರಾಮದ ಬಜೆ ಡ್ಯಾಂ ಬಳಿಯ ಸಾರ್ವಜನಿಕ ಹಾಡಿಯಲ್ಲಿ ಇಸ್ಪೀಟು ಎಲೆಗಳ ಮೇಲೆ ಹಣವನ್ನು ಪಣವಾಗಿಟ್ಟು ಜೂಜಾಟ ಆಡುತ್ತಿರುವುದಾಗಿ ಖಚಿತ ಮಾಹಿತಿ ದೊರೆತಂತೆ ಶ್ರೀ ಅರುಣ್ ಬಿ ನಾಯಕ್, ಪೊಲೀಸ್ ವೃತ್ತ ನಿರೀಕ್ಷಕರು, ಬ್ರಹ್ಮಾವರ  ವೃತ್ತ ಇವರು ಹಿರಿಯಡ್ಕ ಠಾಣಾ ಪಿ,ಎಸ್, ಹಾಗೂ ಸಿಬ್ಬಂದಿಯವರೊಂದಿಗೆ ಹಾಗೂ ಪಂಚಾಯತುದಾರರೊಂದಿಗೆ 13:15 ಗಂಟೆಗೆ ದಾಳಿ ನಡೆಸಿ ಅಂದರ್ ಬಾಹರ್ ಎಂಬ ಜೂಟಾಜ ಆಡುತ್ತಿದ್ದ ಆರೋಪಿತ 1) ವಸಂತ ಶೆಟ್ಟಿ 2) ಶೀನ ಶೇರಿಗಾರ 3) ವಸಂತ 4) ಸುಧಾಕರ ಸೇರಿಗಾರ ಇವರನ್ನು ದಸ್ತಗಿರಿ ಮಾಡಿ ಆರೋಪಿತರಿಂದ ಜೂಜಾಟಕ್ಕೆ ಬಳಸಿದ ನಗದು ರೂಪಾಯಿ 1820/-, ಹಳೆಯ  ದಿನಪತ್ರಿಕೆ-1 ಹಾಗೂ ಇಸ್ಪೀಟು ಎಲೆ- 52 ನ್ನು ಮುಂದಿನ ಕ್ರಮದ ಬಗ್ಗೆ ಸ್ವಾಧೀನಪಡಿಸಿಕೊಂಡು ಹಿರಿಯಡ್ಕ ಠಾಣಾ ಅಪರಾಧ ಕ್ರಮಾಂಕ 19/2015 U/s 87 KP Act ನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
  • ಗಂಗೊಳ್ಳಿ: ದಿನಾಂಕ 31/03/2015  ರಂದು ಗಂಗೊಳ್ಳಿ ಪೊಲೀಸ್ ಠಾಣೆಯ ಉಪ ನಿರೀಕ್ಷಕನಾದ ಸುಬ್ಬಣ್ಣ  ಬಿ. ಪಿ.ಎಸ್.ಐ  ಇವರು ಠಾಣಾ  ಸರಹದ್ದಿನಲ್ಲಿ  ರೌಂಡ್ಸ್ ನಲ್ಲಿ  ಇರುವಾಗ  ಹೊಸಾಡು ಗ್ರಾಮದ ಭಗತ್‌ ನಗರ ಎಂಬಲ್ಲಿ ರಾಘವೇಂದ್ರ ದೇವಾಡಿಗರವರ ಗೂಡಾಂಗಡಿ  ಬಳಿ ಮಟ್ಕಾ ಜುಗಾರಿ ಆಟ ನಡೆಯುತ್ತಿರುವುದಾಗಿ  ಮಾಹಿತಿ ಬಂದಂತೆ ಹೋಗಿ ನೋಡಲಾಗಿ ಓರ್ವ ವ್ಯಕ್ತಿ ಒಂದು ರೂಪಾಯಿಗೆ ಎಪ್ಪತ್ತು ರೂಪಾಯಿ ನೀಡುವುದಾಗಿ ಕರೆದು ಸಾರ್ವಜನಿಕರಿಂದ ಹಣ ಪಡೆದು ಮಟ್ಕಾ ನಂಬ್ರ ಬರೆಯುವುದನ್ನು ಖಚಿತಪಡಿಸಿಕೊಂಡು 17:00 ಗಂಟೆಗೆ ದಾಳಿ ಮಾಡಿದ್ದು, ಸಾರ್ವಜನಿಕರಿಂದ ಹಣವನ್ನು ಪಡೆದು ಮಟ್ಕ ಜುಗಾರಿ ನಡೆಸುತ್ತಿದ್ದ ವ್ಯಕ್ತಿ ಓಡಲು ಪ್ರಾರಂಭಿಸಿದವನನ್ನು ಹಿಡಿದು ವಿಚಾರಿಸಲಾಗಿ ತನ್ನ ಹೆಸರು ರಾಘವೇಂದ್ರ ದೇವಾಡಿಗ (30) ತಂದೆ: ದೇವ ದೇವಾಡಿಗ ವಾಸ:ಕಂಚ್‌ಗೋಡು ಹೊಸಾಡು ಗ್ರಾಮ ಕುಂದಾಪುರ ತಾಲೂಕು ಎಂಬುದಾಗಿ ತಿಳಿಸಿದ್ದು, ಆತನಿಂದ ಮಟ್ಕಾ ಹಣ 1,130/-, ಮಟ್ಕಾ ಚೀಟಿ-1, ಬಾಲ್‌ಪೆನ್ನು-1, ಸ್ವಾಧೀನಪಡಿಸಿಕೊಂಡು ಗಂಗೊಳ್ಳಿ ಠಾಣಾ ಅಪರಾಧ ಕ್ರಮಾಂಕ 43/2015 U/s 78(1)(3) KP Act ನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
  • ಉಡುಪಿ: ದಿನಾಂಕ 31/03/2015 ರಂದು ಟಿ ಆರ್ ಜೈಶಂಕರ್, ಪೊಲೀಸ್ ನಿರೀಕ್ಷಕರು ಡಿಸಿಐಬಿ ಉಡುಪಿ ಇವರು  ಕಛೇರಿಯಲ್ಲಿರುವಾಗ 16:30 ಗಂಟೆಗೆ ಬಲಾಯಿಪಾದೆ ಮೀನು ಮಾರ್ಕೇಟ್ ಬಳಿ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದಾರೆ ಎಂಬುದಾಗಿ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಸದ್ರಿ ಸ್ಥಳಕ್ಕೆ ಹೋದಾಗ ಒಬ್ಬ ವ್ಯಕ್ತಿಯು ಮುಂಬೈ ಕಲ್ಯಾಣಿ ಮಾರ್ಕೇಟ್ ಹಾಗೂ ಬಿ ಕೆ ಮಾರ್ಕೇಟ್ ಒಂದು ರೂಪಾಯಿಗೆ 70 ರೂಪಾಯಿ ಕೊಡುತ್ತೇನೆ ಎಂದು ಹೇಳುತ್ತಾ ನಾಲ್ಕೈದು ಜನರನ್ನು ಸೇರಿಸಿಕೊಂಡು ಕಾನೂನು ಬಾಹಿರವಾಗಿ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದವರನ್ನು ಸಮಯ ಸುಮಾರು 17:00 ಗಂಟೆಗೆ ದಾಳಿ ಮಾಡಿದ್ದು ನಾಲ್ಕೈದು ಜನರು ಓಡಿ ಹೋಗಿದ್ದು ಚೀಟಿ ಬರೆದುಕೊಡುತ್ತಿದ್ದವನನ್ನು ವಶಕ್ಕೆ ಪಡೆದು ವಿಚಾರಿಸಲಾಗಿ ತನ್ನ ಹೆಸರು ಶಿವ @ ಸೋಮನಾಥ ಎಂಬುದಾಗಿ ತಿಳಿಸಿದ್ದು ನಾನು ಮಟ್ಕಾ ಬರೆದ ಹಣವನ್ನು  ಮಧು ಎಂಬವರಿಗೆ ಕೊಡುತ್ತೇನೆ, ಮಧುವರವರು ತನಗೆ ದಿನಕ್ಕೆ 500/- ರೂಪಾಯಿ ಹಣ ಕೊಡುತ್ತಾರೆ ಎಂಬುದಾಗಿ ತಿಳಿಸಿರುತ್ತಾನೆ ಆರೋಪಿತ ತಾನು  ಅಕ್ರಮವಾಗಿ ಮಟ್ಕ ಜುಗಾರಿ ಆಟ ನಡೆಸುತ್ತಿರುವುದಾಗಿ ಒಪ್ಪಿಕೊಂಡಿದ್ದು ಮಟ್ಕಾ ಜುಗಾರಿ ಆಟಕ್ಕೆ ಬಳಸಿದ ನಗದು 1260/- ರೂಪಾಯಿ ಹಾಗೂ ಮಟ್ಕಾ ಸಂಖ್ಯೆ ಬರೆದ ಒಂದು ಚೀಟಿ ಮತ್ತು ಮಟ್ಕಾ ಬರೆಯಲು ಉಪಯೋಗಿಸಿದ ಬಾಲ್ ಪಾಯಿಂಟ್ ಪೆನ್ ಮಹಜರ್ ಮುಖೇನ ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಉಡುಪಿ ನಗರ  ಠಾಣಾ ಅಪರಾಧ ಕ್ರಮಾಂಕ 67/2015 ಕಲಂ 78(1)(3) KP Act ನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.  
  • ಉಡುಪಿ: ಪ್ರಕರಣದ ಸಾರಂಶವೇನೆಂದರೆ ದಿನಾಂಕ 31/03/2015 ರಂದು ಟಿ ಆರ್ ಜೈಶಂಕರ್, ಪೊಲೀಸ್ ನಿರೀಕ್ಷಕರು ಡಿಸಿಐಬಿ ಉಡುಪಿ ಇವರು  ಕಛೇರಿಯಲ್ಲಿರುವಾಗ 20:00 ಗಂಟೆಗೆ ಆದಿ ಉಡುಪಿ ಮಾರ್ಕೇಟ್ ಬಳಿ ಅಂದರ್  ಬಾಹರ್ ಇಸ್ಪೀಟ್ ಜುಗಾರಿ  ಆಟ ಆಡುತ್ತಿದ್ದಾರೆ ಎಂಬುದಾಗಿ ಖಚಿತ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಸದ್ರಿ ಸ್ಥಳಕ್ಕೆ ಹೋದಾಗ ಮಾರ್ಕೇಟ್ ಒಳಗಿನ ಖಾಲಿ ಜಾಗದಲ್ಲಿ 5 ಜನ ವೃತ್ತಾಕಾರದಲ್ಲಿ ಕುಳಿತು ನಡುವೆ ಒಂದು ದಿನಪತ್ರಿಕೆಯ ಹಾಳೆಯನ್ನು ಹಾಸಿ ಒಬ್ಬನು ಇಸ್ಪೀಟ್ ಎಲೆಯನ್ನು ಕೈಯಲ್ಲಿ ಹಿಡಿದುಕೊಂಡು ಎದುರು ಕುಳಿತವರ ಕಡೆಗೆ ಹಾಕುತ್ತ ಕೆಲವರು ಒಳಗೆ ಕೆಲವರು ಹೊರಗೆ ಎಂದು ಹೇಳುತ್ತ ನೋಟುಗಳನ್ನು ಹಾಳೆ ಮೇಲೆ ಹಾಕುತ್ತಿರುವವರ ಮೇಲೆ 20:40 ಗಂಟೆಗೆ ದಾಳಿ ಮಾಡಿ ವಶಕ್ಕೆ ಪಡೆದುಕೊಂಡು ಹೆಸರು ಕೇಳಲಾಗಿ ಸಿದ್ದರಾಮ ರೆಡ್ಡಿ, ಆದಮ್, ರಿಜ್ವಾನ್, ಲಕ್ಷ್ಮಣ್, ವಿರೂಪಾಕ್ಷ ಎಂಬುದಾಗಿ ತಿಳಿಸಿರುತ್ತಾರೆ ಆರೋಪಿತರು ಕಾನೂನು ಬಾಹಿರವಾಗಿ ಹಣವನ್ನು ಪಣವಾಗಿಟ್ಟು ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಟ ಆಡುತ್ತಿರುವುದಾಗಿ ಒಪ್ಪಿಕೊಂಡಿರುತ್ತಾರೆ. ಆರೋಪಿಗಳು ಇಸ್ಪೀಟ್ ಜುಗಾರಿ ಆಟಕ್ಕೆ ಬಳಸಿದ ಇಟ್ಟು 14,820/- ರೂಪಾಯಿ, 52 ಇಸ್ಪೀಟ್ ಎಲೆಗಳು, ಹಳೆ ದಿನಪತ್ರಿಕೆಯನ್ನು  ಮಹಜರು ಮುಖೇನ ಸ್ವಾಧೀನಪಡಿಕೊಂಡು ದಸ್ತಗಿರಿ ಮಾಡಿರುತ್ತಾರೆ. ಈ ಬಗ್ಗೆ ಉಡುಪಿ ನಗರ  ಠಾಣಾ ಅಪರಾಧ ಕ್ರಮಾಂಕ 68/2015 ಕಲಂ 87 KP Act ನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಪಘಾತ ಪ್ರಕರಣ 
  • ಕೊಲ್ಲೂರು: ಪಿರ್ಯಾದಿ ಶ್ರೀಮತಿ ಪ್ರೇಮ ಪೂಜಾರ್ತಿ ಅವರ ಮಗ ಪ್ರಾಣೇಶ್ (4 ವರ್ಷ) ಎಂಬವರೊಂದಿಗೆ ದಿನಾಂಕ :30/03/2015 ರಂದು ನೇರಳಕಟ್ಟೆಯ ಕೆನರಾ ಬ್ಯಾಂಕಿಗೆ ವ್ಯವಹಾರದ ಬಗ್ಗೆ ಹೋಗಿದ್ದು ವಾಪಾಸು ಮನೆಗೆ ಹೋಗುವರೇ ಅವರ ಮಾವ ವಿಠಲ ಪೂಜಾರಿ ಎಂಬುವರ ಬಜಾಜ್ ಬಾಕ್ಸರ್ ಮೋಟಾರು ಸೈಕಲ್ ನಂಬ್ರ:KA 20 L 8574  ನೇದರಲ್ಲಿ ಮಗುವನ್ನು ಕುಳ್ಳಿರಿಸಿಕೊಂಡು ಹೋಗುತ್ತಿದ್ದಾಗ ಮಧ್ಯಾಹ್ನ ಸಮಯ ಸುಮಾರು 02.00 ಗಂಟೆಗೆ ಚಿತ್ತೂರು ಜಂಕ್ಷನ್ ದಾಟಿ ಸ್ವಲ್ಪ ಮುಂದೆ ಹೋಗುತ್ತಾ ಡಾ. ಅತುಲ್ ಕ್ಲಿನಿಕ್ ಹತ್ತಿರ ತಲುಪುವಷ್ಟರಲ್ಲಿ ಸವಾರನು ಮೋಟಾರು ಸೈಕಲ್ ಅನ್ನು ಅತೀ ವೇಗ ಹಾಗೂ ಅಜಾರೂಕತೆಯಿಂದ ಚಲಾಯಿಸಿ ರಸ್ತೆಯ ಹೊಂಡ ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ಮೋಟಾರು ಸೈಕಲ್ ಸ್ಕಿಡ್ ಆಗಿ ಬಿದ್ದು ಪಿರ್ಯಾದಿದಾರರ ತಲೆಗೆ ಬೆನ್ನಿಗೆ ಮಗುವಿನ ತಲೆಗೆ ಬೆನ್ನಿಗೆ ರಕ್ತಗಾಯ ಉಂಟಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾಗಿದೆ. ಈ ಬಗ್ಗೆ ಕೊಲ್ಲೂರು ಠಾಣಾ ಅಪರಾಧ ಕ್ರಮಾಂಕ 33/15 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ

No comments: