Monday, March 30, 2015

Daily Crime Reports As on 30/03/2015 at 19:30 Hrs



ಹಲ್ಲೆ ನಡೆಸಿ, ಜೀವ ಬೆದರಿಕೆ ನೀಡಿದ ಪ್ರಕರಣ

  • ಕುಂದಾಪುರ: ದಿನಾಂಕ 29.03.2015 ರಂದು ಸಂಜೆ 6:00 ಗಂಟೆಗೆ ಪಿರ್ಯಾದುದಾರರಾದ ಸುರೇಶ (19) ತಂದೆ: ಮಾರಿಯಪ್ಪ ವಾಸ: ನವನಗರ, ವಕ್ವಾಡಿ ಗ್ರಾಮ, ಕುಂದಾಪುರ ತಾಲೂಕು ರವರ ಮನೆ ಬಳಿ ಆಪಾದಿತರಾದ ಅರವಿಂದ, ಕುಂಭಾಸಿ, ಗಣೇಶ ಹಾಗೂ ಇತರ ಮೂವರು ಸಮಾನ ಉದ್ದೇಶದಿಂದ ಅಕ್ರಮ ಕೂಟ ಸೇರಿ, ಪಿರ್ಯಾದುದಾರರಿಗೆ  ಹಲ್ಲೆ ನಡೆಸಿ, ಇನ್ನು ಮುಂದಕ್ಕೆ ನಮ್ಮ ತಂಟೆಗೆ ಬಂದರೆ ನಿನ್ನನ್ನು ಕೊಂದು ಮುಗಿಸುವುದಾಗಿ’ ಕೊಲೆ ಬೆದರಿಕೆ ಹಾಕಿರುವುದಾಗಿದೆ. ಆಪಾದಿತರು ಈ ಹಿಂದಿನ ಹಳೆಯ ದ್ವೇಷದಿಂದ ಈ ಕೃತ್ಯ ನಡೆಸಿದ್ದಾಗಿದೆ ಎಂಬುದಾಗಿ ಸುರೇಶ ರವರು ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 99/15 ಕಲಂ 143, 147, 341, 504, 323, 506 ಜೊತೆಗೆ 149 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಮಟ್ಕಾ ದಾಳಿ ಪ್ರಕರಣ

  • ಕೋಟ: ದಿನಾಂಕ 30/03/15 ರಂದು 12.30 ಗಂಟೆಗೆ ಬ್ರಹ್ಮಾವರ ವೃತ್ತ ನಿರೀಕ್ಷಕರಾದ ಶ್ರೀ ಅರುಣ್ ಬಿ ನಾಯಕ್ ರವರು ಸಿಬ್ಬಂದಿಗಳೊಂದಿಗೆ ಕೋಟ ಪೊಲೀಸ್ ಠಾಣಾ ಸರಹದ್ದಿನಲ್ಲಿ ರೌಂಡ್ಸ ಕರ್ತವ್ಯದಲ್ಲಿರುವ ವೇಳೆ  ಕುಂದಾಪುರ ತಾಲೂಕು ತೆಕ್ಕಟ್ಟೆ ಗ್ರಾಮದ ತೆಕ್ಕಟ್ಟೆ ಮೀನು ಮಾರ್ಕೆಟ್ ಬಳಿಯ ಕೋಳಿ ಅಂಗಡಿ ಬಳಿ ಮಟ್ಕಾ ಜುಗಾರಿ ನಡೆಯುತ್ತಿರುವ ಬಗ್ಗೆ ದೊರೆತ ಖಚಿತ ವರ್ತಮಾನದಂತೆ ಸದ್ರಿ ಸ್ಥಳಕ್ಕೆ ಸಿಬ್ಬಂದಿಯವರೊಂದಿಗೆ 13.15 ಗಂಟೆಗೆ ದಾಳಿ ನಡೆಸಿ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ಜಯರಾಮ ದೇವಾಡಿಗನನ್ನು ದಸ್ತಗಿರಿ ಮಾಡಿ ಆರೋಪಿಯು ಮಟ್ಕಾ ಜುಗಾರಿ ಆಟಕ್ಕೆ ಬಳಸಿದ ನಗದು 1060/- ರೂಪಾಯಿಗಳು,ಮಟ್ಕಾ ನಂಬ್ರ ಬರೆದ ಚೀಟಿ-1.ಹಾಗೂ ಬಾಲ್ ಪೆನ್ನು-1 ನ್ನು ಸ್ವಾದೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 59/15 ಕಲಂ 78(1)(3) ಕರ್ನಾಟಕ ಪೊಲೀಸ್ ಕಾಯ್ದೆಯಂತೆ ಪ್ರಕರಣ ದಾಖಲಿಸಲಾಗಿದೆ.

ಅಪಘಾತ ಪ್ರಕರಣ

  • ಮಲ್ಪೆ: ದಿನಾಂಕ 29/03/15 ರಂದು ರಾತ್ರಿ 07:15 ಗಂಟೆಗೆ ಪಿರ್ಯಾದಿದಾರರಾದ ಶೇಖರ ಕಾಂಚನ್ (43) ತಂದೆ: ದಿ ದೊಂಗ್ರ ಅಮೀನ್ ವಾಸ: ರಾಧ ನಿಲಯ ಕಡೆಕಾರು ಪಡುಕೆರೆ ಕುದ್ರು ಕೆರೆ ಕಡೆಕಾರ ಗ್ರಾಮ ರವರು ಮಲ್ಪೆ ಪಡುಕೇರೆ ಶನಿಶ್ವರ ದೇವಸ್ಥಾನದ ಹತ್ತಿರ ಪಡುಕೆರೆ ಉದ್ಯಾವರ ಡಾಂಬಾರು ರಸ್ತೆಯಲ್ಲಿ ಕೆಲಸ ಮುಗಿಸಿ ಮನೆ ಕಡೆ ನಡೆದುಕೊಂಡು ಬರುತ್ತಿರುವಾಗ ಅವರ ಹಿಂದಿನಿಂದ ಕೆಎ 20ಇ ಬಿ 5969 ನೇ ಮೋಟಾರ್ ಸೈಕಲ್ ಸವಾರ ರಾಜೇಶ್ ಪೂಜಾರಿ ಎಂಬವರು ತನ್ನ ಮೋಟಾರು ಸೈಕಲ್‌ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಫಿರ್ಯಾದಿದಾರರ ಬಲ ಕಾಲಿಗೆ ಡಿಕ್ಕಿ ಹೊಡೆದಿದ್ದರಿಂದ ಫಿರ್ಯಾದಿದಾರರು ರಸ್ತೆಗೆ ಬಿದ್ದ ಪರಿಣಾಮ ಫಿರ್ಯಾದಿದಾರ ಬಲ ಕಾಲಿನ ಮೊಣ ಗಂಟಿಗೆ ರಕ್ತಗಾಯವಾಗಿದ್ದು  ಅವರನ್ನು ಚಿಕಿತ್ಸೆಯ ಬಗ್ಗೆ ಮೋಟಾರು ಸೈಕಲ್‌ ಸವಾರ ಮತ್ತು ಜಯಂತ ಕಾಂಚನ್ ಎಂಬುವರು ಚಿಕಿತ್ಸೆಯ ಬಗ್ಗೆ ಉಡುಪಿಯ ಡಾ ಟಿ ಎಮ್ ಎ ಫೈ ಆಸ್ಪತ್ರೆ ಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಶೇಖರ ಕಾಂಚನ್ ರವರು ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 46/15 ಕಲಂ 279, 337 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

No comments: