Tuesday, March 31, 2015

Daily Crime Reports As on 31/03/2015 at 07:00 Hrs


ಅಪಘಾತ ಪ್ರಕರಣಗಳು
  • ಹಿರಿಯಡ್ಕ:ದಿನಾಂಕ:30/03/2015 ರಂದು ಸಂಜೆ 18:00 ಗಂಟೆಗೆ ಕುಕ್ಕೆಹಳ್ಳಿ ಜಂಕ್ಷನ್ ಎಂಬಲ್ಲಿ ಪಿರ್ಯಾದಿದಾರರಾದ ರಫೀಕ್‌ ಪೊಲೀಸ್ ಉಪನಿರೀಕ್ಷರು, ಹಿರಿಯಡ್ಕ ಪೊಲೀಸ್ ಠಾಣೆರವರು ವಾಹನ ತಪಾಸಣೆ ಮಾಡುತ್ತಿರುವಾಗ ಪೆರ್ಡೂರು ಕಡೆಯಿಂದ  ಬ್ರಹ್ಮಾವರ ಕಡೆಗೆ ಸಾರ್ವಜನಿಕ ರಸ್ತೆಯಲ್ಲಿ ಸ್ವರಾಜ್ ಮಜ್ದಾ ಕ್ಯಾಂಟರ್ ಲಾರಿಯ ಚಾಲಕ ಪುಷ್ಪರಾಜು, ತಂದೆ:ಕುಶಾಲಪ್ಪ ಗೌಡ, ವಾಸ:ಶಿರಾಡಿ ಗ್ರಾಮ, ಉದಾನೆ ಅಂಚೆ, ಪೂತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆರವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು  ಬರುತ್ತಿರುವಾಗ, ಪೊಲೀಸ್‌ ಸಿಬ್ಬಂದಿಯವರು ನಿಲ್ಲಿಸಲು ಸೂಚನೆ ನೀಡಿದರೂ ಸಹ ವಾಹನವನ್ನು ನಿಲ್ಲಿಸದೆ ಚಲಾಯಿಸಿಕೊಂಡು ಹೋಗಿರುತ್ತಾರೆ. ಸದ್ರಿ ವಾಹನದ ನಂಬ್ರ ನೋಡಲಾಗಿ ಕೆಎ 20 ಬಿ 8027 ಆಗಿರುತ್ತದೆ. ಈ ಬಗ್ಗೆ ಹಿರಿಯಡ್ಕ ಠಾಣಾ ಅಪರಾಧ ಕ್ರಮಾಂಕ 18/15 ಕಲಂ 279 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.  
  • ಕಾರ್ಕಳ ಗ್ರಾಮಾಂತರ:ದಿನಾಂಕ:30/03/2015 ರಂದು 12:00 ಗಂಟೆಗೆ ಪಿರ್ಯಾದಿದಾರರಾದ ರಾಜೇಶ ಪೂಜಾರಿ (33) ತಂದೆ:ಸುರೇಂದ್ರ ಪೂಜಾರಿ, ಆಂಜನೇಯ ಕೃಪಾ, ಪಡುಕೆರೆ ಮಲ್ಪೆ, ಕೊಡವೂರು ಗ್ರಾಮ, ಕಾರ್ಕಳ ತಾಲೂಕುರವರು ಕಾರ್ಕಳ ತಾಲೂಕು ನಿಟ್ಟೆ  ಗ್ರಾಮದ ಹಾಳೆಕಟ್ಟೆ ಬಳಿ ಕಾರ್ಕಳ ಪಡುಬಿದ್ರೆ ರಾಜ್ಯ ಹೆದ್ದಾರಿ-1 ರಲ್ಲಿ ರಸ್ತೆ ಗಾಮಗಾರಿ ನಡೆಯುತ್ತಿದ್ದ ಸಳ್ಥದಲ್ಲಿ ಸುಪರ್ ವೈಸರ್ ಅನ್ವರ್ ಭಾಷಾರವರೊಂದಿಗೆ ಮಾತನಾಡುತ್ತ ನಿಂತಿದ್ದಾಗ ಕಾರ್ಕಳ ಕಡೆಯಿಂದ ಪಡುಬಿದ್ರೆ ಕಡೆಗೆ ಕೆ ಎ 19 ಎಂ ಬಿ 342 ನಂಬ್ರದ ಆಲ್ಟೋ ಕಾರನ್ನು ಅದರ ಚಾಲಕ ರಸ್ತೆ ಕಾಮಗಾರಿ ನಡೆಯುವ ಬಗ್ಗೆ ಸೂಚಾನಾ ಫಲಕಗಳನ್ನು ಹಾಕಿದ್ದರೂ, ರಸ್ತೆಯಲ್ಲಿ ಕೋನಗಳನ್ನು ಹಾಕಿದ್ದರೂ, ಅದನ್ನು ಧಿಕ್ಕರಿಸಿ ರಸ್ತೆಯ ಎಡ ಬದಿಗೆ ಬಂದು ರಸ್ತೆಯಲ್ಲಿ ಸುಣ್ಣದ ಗೆರೆಗಳನ್ನು ಹಾಕುತ್ತಿದ್ದ ರಾಜೇಶ್ವರಿ ಎಂಬ ಹುಡುಗಿಗೆ ಢಿಕ್ಕಿ ಹೊಡೆದ ಪರಿಣಾಮ, ರಾಜೇಶ್ವರಿಯ ಬಕಾಲಿನ ಮೊಣ ಗಂಟಿನ ಕೊಳಗೆ ರಕ್ತಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಕಾರ್ಕಳ ಸ್ಪಂದನಾ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲು ಮಾಡಿದ್ದು, ಅಪಘಾತ ಮಾಡಿದ ಕಾರಿನ  ಚಾಲಕನ ಹೆಸರು ರಾಜಗೋಪಾಲ ಎಂಬುದಾಗಿದೆ.ಈ ಬಗ್ಗೆ ರಾಜೇಶ ಪೂಜಾರಿರವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಠಾಣಾ ಅಪರಾಧ ಕ್ರಮಾಂಕ 49/2015 ಕಲಂ:279, 338 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣಗಳು
  • ಪಡುಬಿದ್ರಿ:ಪಿರ್ಯಾದಿದಾರರಾದ ಮನೋಜ್ ಶ್ರೀಯಾನ್, (31), ತಂದೆ:ಸಂಜೀವ ಎನ್. ಶ್ರೀಯಾನ್ ವಾಸ:ಸುನಂದ ಶ್ರೀ, ಎರ್ಮಾಳ್ ತೆಂಕ ಗ್ರಾಮ, ಉಡುಪಿ ತಾಲೂಕು ಮತ್ತು ಜಿಲ್ಲೆರವರ ತಂದೆ ಸಂಜೀವ ಶ್ರೀಯಾನ್ (65) ಹೃದಯ ಕಾಯಿಲೆಯಿಂದ ಇದ್ದು, ದಿನಾಂಕ:30/03/2015 ರಂದು 3:30 ಗಂಟೆಗೆ ಎರ್ಮಾಳ್ ತೆಂಕ ಗ್ರಾಮದ ಎರ್ಮಾಳ್ ಬಸ್ ನಿಲ್ದಾಣದಲ್ಲಿ ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ಹೋಗಲು ಬಸ್ಸು ಕಾಯುತ್ತಿರುವ ವೇಳೆ ಕುಸಿದು ಬಿದ್ದಿದ್ದು, ಚಿಕಿತ್ಸೆಯ ಬಗ್ಗೆ ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ಕರೆದು ಹೋಗಿದ್ದು, ಸಂಜೆ 4:30 ಗಂಟೆಗೆ ಮೃತಪಟ್ಟಿರುತ್ತಾರೆ. ಈ ಬಗ್ಗೆ ಮನೋಜ್ ಶ್ರೀಯಾನ್‌ರವರು ನೀಡಿದ ದೂರಿನಂತೆ ಪಡುಬಿದ್ರಿ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 06/15 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: