Sunday, March 29, 2015

Daily Crime Reports As on 29/03/2015 at 07:00 Hrs


ಅಪಘಾತ ಪ್ರಕರಣಗಳು
  • ಕೋಟ:ಪಿರ್ಯಾದಿದಾರರಾದ ಮಹಮ್ಮದ್ ಹುಸೇನ್ (22), ತಂದೆ:ವನ್ನೂರು ಆಲಿ, ನೆಲಗೇತನ ಹಟ್ಟಿ ಗ್ರಾಮ,ತೊರನೂರು ಹೋಬಳಿ,ಚಳ್ಳಕೆರೆ ತಾಲೂಕು ಚಿತ್ರದುರ್ಗ ಜಿಲ್ಲೆರವರು ಪಿ.ದೇವರಾಜ್‌ರವರ ಕೆಎ 35 ಬಿ 1957 ನೇ ನಂಬ್ರದ ಲಾರಿಯಲ್ಲಿ ಕ್ಲೀನರ್ ಆಗಿ ಕೆಲಸ ಮಾಡಿಕೊಂಡಿದ್ದು ಸದ್ರಿ ಲಾರಿಯಲ್ಲಿ ಮಂಗಳೂರಿನಿಂದ ಸಾಬೂನು ಲೋಡ್ ಮಾಡಿಕೊಂಡು ದಾವಣಗೆರೆಗೆ ಹೋಗುವರೇ ಕುಂದಾಪುರ ತಾಲೂಕು ಹಳ್ಳಾಡಿ ಹರ್ಕಾಡಿ ಗ್ರಾಮದ ಗಾವಳಿ ಚಿಕ್ಕಮ್ಮ ದೈವಸ್ಥಾನದ ಹತ್ತಿರದ ರಸ್ತೆಯ ತಿರುವಿನಲ್ಲಿ ಲಾರಿಯ ಚಾಲಕ ಪಿ.ದೇವರಾಜ್ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಎದುರಿನಿಂದ ಬರುವ ವಾಹನವನ್ನು ನೋಡಿ ಒಮ್ಮೇಲೆ ಬ್ರೇಕ್ ಹಾಕಿದ ಪರಿಣಾಮ ಲಾರಿ ಮಗುಚಿ ಬಿದ್ದು, ಲಾರಿಯ ಎಡ ಭಾಗ ಹಾಗೂ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದಾಗಿದೆ. ಈ ಬಗ್ಗೆ ಮಹಮ್ಮದ್ ಹುಸೇನ್‌ರವರು ನೀಡಿದ ದೂರಿನಂತೆ ಕೋಟ ಠಾಣಾ ಅಪರಾಧ ಕ್ರಮಾಂಕ 58/2015 ಕಲಂ 279 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಕಾರ್ಕಳ ಗ್ರಾಮಾಂತರ:ದಿನಾಂಕ:28/03/2015 ರಂದು 17:00 ಗಂಟೆಗೆ ಕೆಎ 20 ಸಿ 5733 ನೇ ನಂಬ್ರದ ದುರ್ಗಾಪರಮೇಶ್ವರಿ ಬಸ್ಸಿನ ಚಾಲಕನು ಆತನ ಬಸ್ಸನ್ನು ಪಳ್ಳಿ ಕಡೆಯಿಂದ ಕಾರ್ಕಳ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಕಾರ್ಕಳ ತಾಲೂಕಿನ ಕಲ್ಯಾ ಗ್ರಾಮದ ಅಶೋಕ ನಗರ ಕೈಕಂಬ ಕುಂಟಾಡಿ ಎಂಬಲ್ಲಿ ಕಾರ್ಕಳ–ಪಳ್ಳಿ ರಸ್ತೆಯಲ್ಲಿ ಎದುರಿನಿಂದ ಅಂದರೆ ಕಾರ್ಕಳ ಕಡೆಯಿಂದ ಪಳ್ಳಿ ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದ ಪಿರ್ಯಾದಿದಾರರಾದ ಭಾಸ್ಕರ (39), ತಂದೆ:ಕರಿಯ ಮೂಲ್ಯ, ವಾಸ:ದೇವಿಪ್ರಸಾದ, ಎನ್.ಆರ್ ರಸ್ತೆ, ಪೆರ್ವಾಜೆ ಕಾರ್ಕಳ ಕಸಬಾ, ಕಾರ್ಕಳ ತಾಲೂಕುರವರ ಅಣ್ಣ ಸದಾನಂದ ಮೂಲ್ಯರವರ ಕೆಎ 19 ಎ 8573 ನೇ ನಂಬ್ರದ ಆಟೋ ರಿಕ್ಷಾಕ್ಕೆ ಢಿಕ್ಕಿ ಹೊಡೆದ ಪರಿಣಾಮ, ರಿಕ್ಷಾ ಪಲ್ಟಿಯಾಗಿ ರಸ್ತೆಯ ಪೂರ್ವಬದಿಗೆ ಎಸೆಯಲ್ಪಟ್ಟು ರಿಕ್ಷಾ ಚಾಲಕ ಸದಾನಂದ ಮೂಲ್ಯರು ಸ್ಥಳದಲ್ಲೇ ಮೃತಪಟ್ಟು, ಪ್ರಯಾಣಿಕರಾಗಿದ್ದ ಸದಾನಂದ ಮೂಲ್ಯ ಮಗ ಸಚಿನ್ (16) ರವರಿಗೆ ಗಾಯ ಉಂಟಾಗಿರುವುದಾಗಿದೆ. ಈ ಬಗ್ಗೆ ಭಾಸ್ಕರರವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಠಾಣಾ ಅಪರಾಧ ಕ್ರಮಾಂಕ 47/2015 ಕಲಂ:279, 337, 304(ಎ) ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಶಂಕರನಾರಾಯಣ:ದಿನಾಂಕ:28/03/2015 ರಂದು ಮದ್ಯಾಹ್ನ 3:00 ಗಂಟೆಗೆ ಆರೋಪಿ KA 20 ED 9604 ನಂಬ್ರದ ಹಿರೋ ಹೊಂಡಾ ಬೈಕನ್ನು ಕುಂದಾಪುರ ತಾಲೂಕು ಸಿದ್ದಾಪುರ ಗ್ರಾಮದ ಸಂತು ಭಟ್‌ರವರ ಮನೆಯ ಹತ್ತಿರ ಟಾರ್‌ ರಸ್ತೆಯಲ್ಲಿ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸುರೇಂದ್ರ ನಾಯ್ಕ ತಂದೆ: ನಾಗು ನಾಯ್ಕರವರು ಸವಾರಿ ಮಾಡುತ್ತಿದ್ದ KA 20 R 5244 ನಂಬ್ರದ ಬಜಾಜ್‌ ಸಿ.ಟಿ 100 ಬೈಕ್‌ಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಸುರೇಂದ್ರ ನಾಯ್ಕರವರಿಗೆ ಬಲಕಾಲಿಗೆ ರಕ್ತಗಾಯವಾಗಿರುತ್ತದೆ ಹಾಗೂ ಎರಡು ಬೈಕ್‌ಗಳು ಜಖಂಗೊಂಡಿರುತ್ತದೆ.ಈ ಬಗ್ಗೆ ರಮೇಶ್‌ ನಾಯ್ಕ (30), ತಂದೆ:ಅಂತು ನಾಯ್ಕ ಮನೆ, ವಡ್ನಾಳಿ, ಯಡಮೊಗ್ಗೆ ಗ್ರಾಮ, ಕುಂದಾಪುರ ತಾಲೂಕುರವರು ನೀಡಿದ ದೂರಿನಂತೆ ಶಂಕರನಾರಾಯಣ ಠಾಣಾ ಅಪರಾಧ ಕ್ರಮಾಂಕ 51/15 ಕಲಂ:279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ
  • ಕೋಟ:ಪಿರ್ಯಾದಿದಾರರಾದ ಉಮೇಶ (45), ತಂದೆ:ಕೃಷ್ಣ, ವಾಸ:ಮಟಪಾಡಿ ಮನೆ, ಕೋಡಿ ಬೇಂಗ್ರೆ, ಕೋಡಿ ಕನ್ಯಾನ ಗ್ರಾಮ, ಉಡುಪಿ ತಾಲೂಕುರವರ ಬಾವ ಮಂಜುನಾಥ ತಿಂಗಳಾಯ (47) ಎಂಬವರು ಕಳೆದ 2 ವರ್ಷದಿಂದ ಮಾನಸಿಕ ಅಸ್ವಸ್ಥರಾಗಿದ್ದು, ದಿನಾಂಕ:28/03/2015 ರಂದು ಸುಮಾರು 12:00 ಗಂಟೆಗೆ ಕೋಟಪಡುಕೆರೆಯ ತನ್ನ ಮನೆಯಲ್ಲಿ ಯಾರು ಇಲ್ಲದ ಸಮಯ ವಿಷ ಕುಡಿದು ಅಸ್ವಸ್ಥಗೊಂಡವರನ್ನು ಚಿಕಿತ್ಸೆ ಬಗ್ಗೆ ಕೋಟ ಸಮುದಾಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಬಳಿಕ ಹೆಚ್ಚಿನ ಚಿಕಿತ್ಸೆ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಚಿಕಿತ್ಸೆಯಲ್ಲಿರುತ್ತಾ ಮಧ್ಯಾಹ್ನ 3:00 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ  ಮೃತಪಟ್ಟಿದ್ದು, ಮೃತರ ಮರಣದಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲ ಎಂಬುದಾಗಿ ಉಮೇಶರವರು ನೀಡಿದ ದೂರಿನಂತೆ ಕೋಟ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 15/2015 ಕಲಂ:174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.   
ಮಟ್ಕಾ ಜುಗಾರಿ ಪ್ರಕರಣಗಳು
  • ಶಂಕರನಾರಾಯಣ:ದಿನಾಂಕ:28/03/2015 ರಂದು 20:40 ಗಂಟೆಗೆ  ಕುಂದಾಪುರ ತಾಲೂಕು ಅಂಪಾರು ಗ್ರಾಮದ ಅಂಪಾರು ಪೇಟೆಯಲ್ಲಿರುವ ಬಸ್‌ ಪ್ರಯಾಣಿಕರ ತಂಗುದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ನಡೆಯುತ್ತಿದ್ದ ಮಟ್ಕಾ-ಜುಗಾರಿ ಆಟಕ್ಕೆ ಶಂಕರನಾರಾಯಣ ಪೊಲೀಸ್ ಠಾಣಾ ಪಿ.ಎಸ್.ದೇಜಪ್ಪರವರು ಠಾಣಾ ಸಿಬ್ಬಂದಿ ಹಾಗೂ ಕುಂದಾಪುರ ಪೊಲೀಸ್‌ ಉಪಾಧೀಕ್ಷಕರ ಅಪರಾಧ ಪತ್ತೆ ದಳದ ಸಿಬ್ಬಂದಿಯವರೊಂದಿಗೆ ಪಂಚಸಾಕ್ಷೀದಾರರ  ಸಮಕ್ಷಮ ದಾಳಿ ನಡೆಸಿ ಅರೋಪಿ ಚಂದ್ರ ಪೂಜಾರಿ (30) ಯನ್ನು ವಶಕ್ಕೆ ಪಡೆದು, ಆರೋಪಿ ವಶದಲ್ಲಿದ್ದ ಮಟ್ಕಾ ಚೀಟಿ, ಬಾಲ್‌ ಪೆನ್ನು ಮತ್ತು ನಗದು ರೂಪಾಯಿ 840/- ನ್ನು ಸ್ವಾದೀನಪಡಿಸಿಕೊಂಡದ್ದಾಗಿದೆ. ಈ ಬಗ್ಗೆ ಶಂಕರನಾರಾಯಣ ಠಾಣಾ ಅಪರಾಧ ಕ್ರಮಾಂಕ 53/15 ಕಲಂ:78 (i)(iii) ಕೆ.ಪಿ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
  • ಶಂಕರನಾರಾಯಣ:ದಿನಾಂಕ:28/03/15 ರಂದು 19:30 ಘಂಟೆಗೆ ಕುಂದಾಪುರ ತಾಲೂಕಿನ ಅಂಪಾರು ಗ್ರಾಮದ ಅಂಪಾರು-ಶಂಕರನಾರಾಯಣ ರಸ್ತೆಯ ಶಾಂತೇರಿ ಹೊಟೇಲ್ ಬಳಿ ಗೂಡಂಗಡಿಯ ಎದುರುಗಡೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ನಾರಾಯಣ ನಾಯ್ಕ (46) ತಂದೆ:ಗೋವಿಂದ ನಾಯ್ಕ ಎಂಬವನು ಮಟ್ಕಾ ಜುಗಾರಿ ಆಟಕ್ಕೆ ಹಣ ಸಂಗ್ರಹ ಮಾಡುತ್ತಿರುವಾಗ ಪಿರ್ಯಾದಿದಾರರಾದ ದೇಜಪ್ಪ, ಪಿ.ಎಸ್‌.ಐ, ಶಂಕರನಾರಾಯಣ ಪೊಲೀಸ್‌ ಠಾಣೆರವರು ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿ ಮಟ್ಕಾ  ಸಂಖ್ಯೆ  ಬರೆದ ಚೀಟಿ-1,  ನಗದು ಹಣ 580/- ರೂಪಾಯಿ ಹಾಗೂ ಬಾಲ್‌ ಪೆನ್ನು-1 ನ್ನು  ವಶಪಡಿಸಿಕೊಂಡಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಠಾಣಾ ಅಪರಾಧ ಕ್ರಮಾಂಕ 52/15 ಕಲಂ:78 (i)(iii) ಕೆ.ಪಿ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: