Monday, January 26, 2015

Daily Crime Reports As on 26/01/2015 at 07:00 Hrs

ಅಪಘಾತ ಪ್ರಕರಣ
  • ಪಡುಬಿದ್ರಿ: ದಿನಾಂಕ 25.01.2015 ರಂದು ಹಗಲು 11.30 ಗಂಟೆಗೆ ಪಿರ್ಯಾಧಿ ಸದಾಶಿವ ಪೆಜತ್ತಾಯ ಇವರು ಅವರ ಬಾಬ್ತು ದ್ವಿಚಕ್ರ ವಾಹನ ನಂಬ್ರ ಕೆಎ 20 ಯು- 9679 ನ್ನು ಎರ್ಮಾಳ್ ಜನಾರ್ಧನ ದೇವಸ್ಥಾನದಿಂದ ರಾಹೆ 66 ಕ್ಕೆ ತಲುಪಿ ಪೂರ್ವದಿಂದ ಪಶ್ಚಿಮಕ್ಕೆ ರಸ್ತೆ ದಾಟುವರೇ ಸವಾರಿ ಮಾಡುತ್ತಾ ಅಣಿಯಾಗುತ್ತಿರುವಾಗ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಕಾರು ನಂಬ್ರ ಕೆಎ 19 ಎಂಎ- 7128 ನ್ನು ಅದರ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತವೆಸಗಿದ್ದು ಪರಿಣಾಮ ಸವಾರ ಸದಾಶಿವ ಪೆಜತ್ತಾಯ ರವರಿಗೆ ತೀವ್ರ ಸ್ವರೂಪದ ಗಾಯವಾಗಿರುತ್ತದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 21/15 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: