Sunday, January 25, 2015

Daily Crimes Reported as On 25/01/2015 at 19:30 Hrs


ಅಪಘಾತ ಪ್ರಕರಣಗಳು
  • ಕಾರ್ಕಳ ಗ್ರಾಮಾಂತರ:ದಿನಾಂಕ: 25/01/2015 ರಂದು ಮದ್ಯಾಹ್ನ ಸುಮಾರು 1-25 ಗಂಟೆಗೆ ಪಿರ್ಯಾದಿದಾರರಾದ ಚಂದ್ರಶೇಖರ (57) ತಂದೆ:ದಿವಂಗತ ಕೃಷ್ಣಪ್ಪ ಪೂಜಾರಿ ವಾಸ:ಸಮ್ರದ್ದಿ ಮನೆ, ನೆಲ್ಲಿಗುಡ್ಡೆ ದರ್ಖಾಸ್ತು, ನಿಟ್ಟೆ ಗ್ರಾಮ ಮತ್ತು ಅಂಚೆ, ಕಾರ್ಕಳ ತಾಲೂಕುರವರು ಲೆಮಿನಾ ಕ್ರಾಸ್‌ನ ತನ್ನ ಅಂಗಡಿಯಿಂದ ಅವರ ಕೆಎ 20 ಬಿ 7097 ನೇ ನಂಬ್ರದ ಟೋ ರಿಕ್ಷಾದಲ್ಲಿ ಬ್ರಾಮರಿ ಬಳಿ ಇರುವ ತನ್ನ ಮನೆ ಕಡೆಗೆ ಆಟೋ ರಿಕ್ಷಾವನ್ನು ಪಡುಬಿದ್ರೆ-ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿ  ಚಲಾಯಿಸಿಕೊಂಡು ಹೋಗುತ್ತಾ, ರಸ್ತೆಯಲ್ಲಿ ರಿಕ್ಷಾವನ್ನು ಬಲಕಡೆಗೆ ಕೈ ಸನ್ನೆ ಮಾಡಿ ತಿರುಗಿಸುತ್ತಿದ್ದಂತೆ ಮದ್ಯಾಹ್ನ ಸುಮಾರು 1:30 ಗಂಟೆಗೆ ಹಿಂದಿನಿಂದ ಅಂದರೆ ಪಡುಬಿದ್ರೆ ಕಡೆಯಿಂದ ಬಂದ ಕೆಎ 53 ಎಂಬಿ 9133 ನೇ ನಂಬ್ರದ ಹೊಂಡಾ ಮೊಬಿಲಿಯೊ ಕಾರನ್ನು ಅದರ ಚಾಲಕನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಚಂದ್ರಶೇಖರರವರ ರಿಕ್ಷಾದ ಬಲ ಬದಿಗೆ ಡಿಕ್ಕಿ ಹೊಡೆದ ಪರಿಣಾಮ,  ಚಂದ್ರಶೇಖರರವರು ರಿಕ್ಷಾ ಸಮೇತ ರಸ್ತೆಗೆ ಬಿದ್ದಿದ್ದು, ಇದರಿಂದ ಚಂದ್ರಶೇಖರರವಬಲ ಕಾಲಿನ ಪಾದಕ್ಕೆ ರಕ್ತಗಾಯ ಹಾಗೂ ಬಲಕೈ ಮೊಣಗಂಟು, ಎಡ ಸೊಂಟಕ್ಕೆ ಮತ್ತು ಎದೆಯ ಭಾಗಕ್ಕೆ ಗುದ್ದಿದ ಜಖಂ ಆಗಿ ಸಾಮಾನ್ಯ ಸ್ವರೂಪದ ಗಾಯವಾಗಿರುವುದಾಗಿದೆ. ಚಂದ್ರಶೇಖರರವರ ಟೋ ರಿಕ್ಷಾದ ಎದುರು ಭಾಗ ಪೂರ್ಣ ಜಖುಂಗೊಂಡಿರುವುದಾಗಿದೆ . ಈ ಅಪಘಾತಕ್ಕೆ ಕೆಎ 53 ಎಂಬಿ 9133 ನೇ ನಂಬ್ರದ ಕಾರು ಚಾಲಕನ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ.ಈ ಬಗ್ಗೆ ಚಂದ್ರಶೇಖರರವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಠಾಣಾ ಅಪರಾಧ ಕ್ರಮಾಂಕ 10/2015 ಕಲಂ:279,338 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.  
  • ಕಾರ್ಕಳ ನಗರ:ದಿನಾಂಕ:25/01/2015 ರಂದು 14:45 ಗಂಟೆಗೆ ಕಾರ್ಕಳ ತಾಲೂಕಿನ ಕಸಬ ಗ್ರಾಮದ ಕಾರ್ಕಳ ತಾಲೂಕು ಆಫೀಸ್ ಜಂಕ್ಷನ್  ಸಮೀಪ ಪಿರ್ಯಾದಿದಾರರಾದ ಶ್ರುತಿ ಕುಮಾರಿ (22) ತಂದೆ:ದಿವಾಕರ ಹೆಚ್. ಎಸ್. ವಾಸ:ಶ್ರೀಪೂರ್ಣ, ಲಕ್ಷ್ಮೀ ಜನಾರ್ಧನ ದೇವಸ್ಥಾನದ ಹತ್ತಿರ, ಬೆಳ್ಮಣ್ ಅಂಚೆ, ಕಾರ್ಕಳ ತಾಲೂಕುರವರು ಆಲ್ಟೋ ಕಾರು ನಂಬ್ರ KA 20 Z 3583 ನೇಯದನ್ನು ಕಲ್ಲೊಟ್ಟೆ ಕಡೆಯಿಂದ ತಾಲೂಕು ಕಛೇರಿ ಕಡೆಗೆ ಚಲಾಯಿಸಿಕೊಂಡು ಬರುವಾಗ, ಕಾರ್ಕಳದ ಸಾಲ್ಮಾರ್ ಕಡೆಯಿಂದ ಮೋಟಾರು ಸೈಕಲ್ ನಂಬ್ರ KA 20 EG 6574 ನೇದರ ಸವಾರ ಮೋಟಾರು ಸೈಕಲನ್ನು ಅತಿವೇಗ ಹಾಗೂ ದುಡುಕುತನದಿಂದ ಸಹ ಸವಾರರೊಬ್ಬರನ್ನು ಕುಳ್ಳಿರಿಸಿಕೊಂಡು ಸವಾರಿ ಮಾಡಿಕೊಂಡು ಬಂದು ಕಾರಿನ ಎಡಬದಿಯ ಹಿಂಬದಿಯ ಬಾಗಿಲಿಗೆ ಢಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್ ಸವಾರನ ಬಲ ಭುಜಕ್ಕೆ ಗಾಯವಾಗಿರುತ್ತದೆ.ಈ ಬಗ್ಗೆ ಶ್ರುತಿ ಕುಮಾರಿರವರು ನೀಡಿದ ದೂರಿನಂತೆ ಕಾರ್ಕಳ ನಗರ ಠಾಣಾ ಅಪರಾಧ ಕ್ರಮಾಂಕ 08/2015 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಕಾರ್ಕಳ ನಗರ:ದಿನಾಂಕ:25/01/2015 ರಂದು 15:00 ಗಂಟೆಗೆ ಕಾರ್ಕಳ ಕಸಬ ಗ್ರಾಮದ ಕಾಬೆಟ್ಟು ಎಂಬಲ್ಲಿ ಹಾದು ಹೋಗುವ ರಾಜ್ಯ ಹೆದ್ದಾರಿ 1 ರ ಬೈಪಾಸ್ ರಸ್ತೆಯಲ್ಲಿ ಪಿರ್ಯಾದಿದಾರರಾದ ವಿಜೇಂದ್ರ, (42) ತಂದೆ:ರಾಚಾಚಾರಿ, ವಾಸ:ಬನ್ನಿಕಟ್ಟೆ ರೋಡ್, ಅಗ್ರಹಾರ, ಸಾಗರ, ಶಿವಮೊಗ್ಗ ಜಿಲ್ಲೆರವರು ಕಾರು ನಂಬ್ರ KA 15 M 5245 ನೇದನ್ನು ಚಲಾಯಿಸಿಕೊಂಡು ಹೋಗುತ್ತಿರುವ ಸಮಯ ಅದೇ ದಿಕ್ಕಿನಲ್ಲಿ ಮುಂದುಗಡೆಯಿಂದ ಗಣೇಶ ಎಂಬವರು ಚಲಾಯಿಸಿಕೊಂಡು ಹೋಗುತ್ತಿದ್ದ ಓಮ್ನಿ ಕಾರು ನಂಬ್ರ KA 20 N 9899 ನೇಯದನ್ನು ಹಿಂದಿಕ್ಕಿ, ಮುಂದಕ್ಕೆ ಹೋಗುವಾಗ, ಓಮ್ನಿ ಕಾರು ಚಾಲಕನು ದುಡುಕತನದಿಂದ ಒಮ್ಮೆಲೆ ನಿರ್ಲಕ್ಷತನದಿಂದ ತನ್ನ ಬಲಕ್ಕೆ ಚಲಾಯಿಸಿ, ವಿಜೇಂದ್ರರವರ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ, ಓಮ್ನಿ ಕಾರು ಚಾಲಕನಿಗೆ ಗಾಯವಾಗಿದ್ದು, ಅಲ್ಲದೆ ಎರಡೂ ವಾಹನಗಳು ಜಖಂಗೊಂಡಿರುತ್ತವೆ. ಈ ಬಗ್ಗೆ ವಿಜೇಂದ್ರರವರು ನೀಡಿದ ದೂರಿನಂತೆ ಕಾರ್ಕಳ ನಗರ ಠಾಣಾ ಅಪರಾಧ ಕ್ರಮಾಂಕ 09/2015 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: