Monday, January 26, 2015

Daily Crime Reports As on 26/01/2015 at 17:00 Hrs

ಅಪಘಾತ ಪ್ರಕರಣಗಳು
  • ಕೊಲ್ಲೂರು: ಪಿರ್ಯಾದುದಾರರಾದ ನಾಗರಾಜ (23) ತಂದೆ:ಜಟ್ಟ ಪೂಜಾರಿ ವಾಸ: ದಳಿ, ಕೊಲ್ಲೂರು ಗ್ರಾಮ ಕುಂದಾಪುರ ತಾಲೂಕು ರವರು ದಿನಾಂಕ 24/01/2015  ರಂದು ಸಂಜೆ 19:15 ಗಂಟೆಗೆ ಕೊಲ್ಲೂರು ಬಸ್‌ ನಿಲ್ದಾಣದಿಂದ ತನ್ನ ಮನೆಯ ಕಡೆಗೆ ರಸ್ತೆ ಬದಿಯ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಬರುತ್ತಿರುವಾಗ ಪಿರ್ಯಾದಿದಾರರ ಎದುರಿನಿಂದ ಅಂದರೆ ಕೊಲ್ಲೂರು ದೇವಸ್ಥಾನ ಕಡೆಯಿಂದ ಕುಂದಾಪುರ ಕಡೆಗೆ ಕೆ.ಎ 20 ಎಮ್‌ 7293 ನೇ ಜೀಪು ಚಾಕನು ತನ್ನ ಜೀಪನ್ನು ಅತೀ ವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರೀಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು ತೀವ್ರ ತರದ ಗಾಯ ಉಂಟಾಗಿರುತ್ತದೆ ಎಂಬುದಾಗಿ ನಾಗರಾಜ ರವರು ನೀಡಿದ ದೂರಿನಂತೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 07/2015 ಕಲಂ: 279, 338  ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಕಾರ್ಕಳ: ದಿನಾಂಕ: 25/01/2015 ರಂದು 20:15 ಗಂಟೆಗೆ ಬಸ್ಸು ನಂಬ್ರ  ಕೆ ಎ 32 ಬಿ 9220 ನೇಯದನ್ನು ಅದರ ಚಾಲಕ ವಿಜಯ ಎಂಬವರು  ಕಾರ್ಕಳ ಬಂಡಿಮಠ ಬಸ್ಸು ನಿಲ್ದಾಣದಿಂದ  ಕಾರ್ಕಳ ಪೇಟೆಗೆ ಕಡೆಗೆ ಅತೀ ವೇಗ ಅಜಾಗರೂಕತೆಯಿಂದ ಚಲಾಯಿಸಿ  ಕಾರ್ಕಳ ತಾಲೂಕು ಕಸಬಾ ಗ್ರಾಮದ  ಸಾಲ್ಮರ ಜೋಗಿನ ಕ್ರಾಸ್ ಬಳಿ  ರಸ್ತೆ ದಾಟುತ್ತಿದ್ದ ಮಾದವ ಶೆಣೈ ಎಂಬವರಿಗೆ ಡಿಕ್ಕಿ ಹೊಡೆದ ಪರಿಣಾಮ ಮಾಧವ ಶೆಣೈಯವರ ತಲೆಗೆ ಗಂಭೀರ ರಕ್ತಗಾಯವಾಗಿ ನಿಟ್ಟೆ ಗಾಜ್ರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿದ್ದರು. ನಂತರ  ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ ಎಂ ಸಿ ಆಸ್ಪತ್ರೆಗೆ ದಾಖಲಾಗಿದ್ದವರು ತಾನು ಪಡೆಯುತ್ತಿದ್ದ ಚಿಕಿತ್ಸೆಗೆ ಸ್ಪಂದಿಸದೇ ದಿನಾಂಕ: 26/01/2015 ರಂದು ಬೆಳಿಗ್ಗೆ 6:00 ಗಂಟೆಗೆ ಮೃತಪಟ್ಟಿರುತ್ತಾರೆ ಎಂಬುದಾಗಿ ರಾಜೇಶ ಪಿ. ಶೆಟ್ಟಿ, (37), ತಂದೆ: ಪುಟ್ಟಣ್ಣ ಶೆಟ್ಟಿ, ವಾಸ: ಮೈಲೊಟ್ಟು, ಮೂಲ್ಕಿ, ಮಂಗಳೂರು ರವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 10/2015 ಕಲಂ: 279,  304(ಎ) ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಬ್ರಹ್ಮಾವರ: ದಿನಾಂಕ 23/01/2015 ರಂದು 20:00 ಗಂಟೆಗೆ ಆರೋಪಿ ಶಶಿಧರ ಎಂಬಾತನು ತನ್ನ ಹೊಸ ಮಹೀಂದ್ರ XUV500 ಕಾರನ್ನು ಉಡುಪಿ ತಾಲೂಕು ಉಪ್ಪೂರು ಗ್ರಾಮದ ಕೆ.ಜಿ ರೋಡ್ ಬಳಿ ರಾ.ಹೆ-66 ರಲ್ಲಿ ಕುಂದಾಫುರ ಕಡೆಯಿಂದ ಉಡುಪಿ ಕಡೆಗೆ ಅತೀ ವೇಗ ಹಾಗು ನಿರ್ಲಕ್ಷ್ಯತನದಿಂದ ಚಲಾಯಿಸಿ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಮೊಟಾರು ಸೈಕಲ್ ನಂಬ್ರ ಕೆಎ-20ಇ-8981 ರಲ್ಲಿ ಹೋಗುತ್ತಿದ್ದ ಪಿರ್ಯಾದಿದಾರರಾದ ಸುರೇಶ್ ಸನಿಲ್ (49), ತಂದೆ: ಚಂದ್ರ ಶೇಕರ ಶೇರ್ವೆಗಾರ್, ವಾಸ: ಸಾಲ್ಮರ, ತೆಂಕಬೆಟ್ಟು ಅಂಚೆ, ಉಪ್ಪೂರು ಗ್ರಾಮ, ಉಡುಪಿ ತಾಲೂಕು ಎಂಬವರ ಪರಿಚಯದ ಗಿರೀಶ್ ಎಂಬುವರಿಗೆ ಢಿಕ್ಕಿ ಹೊಡೆದ ಪರಿಣಾಮ ಗಿರೀಶ್ ರವರಿಗೆ ಮೈ ಕೈ ಗೆ ತರಚಿದ ಗಾಯ ಹಾಗೂ ತಲೆಗೆ ಒಳ ಗಾಯ ಉಂಟಾಗಿರುತ್ತದೆ ಎಂಬುದಾಗಿ ಸುರೇಶ್ ಸನಿಲ್ ರವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 20/2015 ಕಲಂ: 279, 338 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಶಂಕರನಾರಾಯಣ: ಆರೋಪಿ KA 18 X 2608 ನಂಬ್ರದ ಬಜಾಜ್‌ ಡಿಸ್ಕವರ್‌ ಮೋಟಾರ್‌ ಸೈಕಲ್‌ನಲ್ಲಿ ಸಹಸವಾರನನ್ನು ಕುಳ್ಳಿರಿಸಿಕೊಂಡು ದಿನಾಂಕ 25/01/2015 ರಂದು 11:20 ಗಂಟೆಗೆ ಕುಂದಾಪುರ ತಾಲೂಕು ಅಲ್ಬಾಡಿ ಗ್ರಾಮದ ಆರ್ಡಿ ಹಾಲುಡೈರಿ ಎದುರುಗಡೆ ಸೊಮೇಶ್ವರ – ಬೆಳ್ವೆ ಮುಖ್ಯ ರಸ್ತೆಯಲ್ಲಿ ಸೊಮೇಶ್ವರ ಕಡೆಯಿಂದ ಬೆಳ್ವೆ ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಬೆಳ್ವೆ ಕಡೆಯಿಂದ ಸೋಮೇಶ್ವರ ಕಡೆಗೆ ಸವಾರಿ ಮಾಡಿಕೊಂಡು ಬಂದು ಆರ್ಡಿ ಹಾಲುಡೈರಿ ಎದುರುಗೆಡೆ ಪಿರ್ಯಾದಿದಾರರಾದ ಲಕ್ಷ್ಮಣ ನಾಯ್ಕ (50) ತಂದೆ: ಚಿಂಟು ನಾಯ್ಕ ಹಾಲು ಡೈರಿ ಎದುರುಗಡೆ, ಆರ್ಡಿ, ಅಲ್ಬಾಡಿ ಗ್ರಾ,ಮ ಕುಂದಾಪುರ  ತಾಲೂಕು  ರವರ KA 20 EF 7406 ನಂಬ್ರದ ಟಿ.ವಿ.ಎಸ್‌ ಜುಪೀಟರ್‌ ಮೋಟಾರ್‌ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ KA 18 X 2608 ಮೋಟಾರ್‌ ಸೈಕಲ್‌ ಸವಾರಿ ಮಾಡುತ್ತಿದ್ದ ಆರೋಪಿ ಸಹಿತ ಆರೋಪಿಯ ಜೊತೆ ಮೋಟಾರ್‌ ಸೈಕಲ್‌ನಲ್ಲಿದ್ದ ಸಹ ಸವಾನಿಗೂ ಹಾಗೂ KA 20 EF 7406 ಮೋಟಾರ್‌ ಸೈಕಲ್‌ನಲ್ಲಿದ್ದ ಸವಾರ ಹಾಗೂ ಸಹಸವಾರನಿಗೂ ಗಾಯವಾಗಿರುತ್ತದೆ ಎಂಬುದಾಗಿ ಲಕ್ಷ್ಮಣ ನಾಯ್ಕ ರವರು ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 11/2015 ಕಲಂ: 279, 337 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

No comments: