Tuesday, January 27, 2015

ಪತ್ರಿಕಾ ಪ್ರಕಟಣೆ

  • ದಿನಾಂಕ 27/01/2015 ರಂದು ಶ್ರೀ ಕೆ.ಅಣ್ಣಾಮಲೈ ಐ.ಪಿ.ಎಸ್, ಮಾನ್ಯ ಪೊಲೀಸ್ ಅಧೀಕ್ಷಕರು ಉಡುಪಿ ಜಿಲ್ಲೆ, ಶ್ರೀ ಸಂತೋಷ್ ಕುಮಾರ್ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಉಡುಪಿ ಜಿಲ್ಲೆ ಹಾಗೂ ಶ್ರೀ ಕೆ.ಎಂ ಚಂದ್ರಶೇಖರ್ ಮಾನ್ಯ ಪೊಲೀಸ್ ಉಪಾಧೀಕ್ಷಕರು ಉಡುಪಿ ಉಪ ವಿಭಾಗ ಇವರ ಮಾರ್ಗದರ್ಶನದಲ್ಲಿ ಡಿಸಿಐಬಿ ಪೊಲೀಸ್ ನಿರೀಕ್ಷಕರಾದ ಶ್ರೀ ಟಿ.ಆರ್ ಜೈಶಂಕರ್ ಮತ್ತು ಉಡುಪಿ ವೃತ್ತ ನಿರೀಕ್ಷಕರಾದ ಶ್ರೀ ಕೆ.ಶ್ರೀಕಾಂತ್ ಹಾಗೂ ಉಡುಪಿ ನಗರ ಠಾಣಾ ಪಿ.ಎಸ್‌.ಐ ಮಧು ಟಿ.ಎಸ್‌ ರವರು ಸಿಬ್ಬಂದಿಯವರೊಂದಿಗೆ ಈ ದಿನ ಹಿರಿಯಡ್ಕ ಪೊಲೀಸ್ ಠಾಣಾ ಸರಹದ್ದು ಮೆಣಸಿನಹಾಡಿ ಎಂಬಲ್ಲಿ ಶಿರ್ವಾದ ಉದ್ಯಮಿ ಒಬ್ಬರಿಗೆ ಕೊಲೆ ಮಾಡಲು ಅಪರಾಧಿಕ ಒಳಸಂಚು ನಡೆಸಿರುವ ಬಗ್ಗೆ ಖಚಿತ ವರ್ತಮಾನದೊಂದಿಗೆ ಅಲ್ಲಿ ದಾಳಿ ಮಾಡಿ 3 ಜನ ಆರೋಪಿತರಾದ 1)ದಿನಕರ ಪೂಜಾರಿ (29) ತಂದೆ:ದಿವಂಗತ ಬಸವ ಪೂಜಾರಿ, ಶ್ರೀ ದುರ್ಗಾ ಕೃಪಾ, ಚಾರ ಗ್ರಾಮ ,ಹುತ್ತುರ್ಕೆ ಹೆಬ್ರಿ 2)ಸಂದೀಪ್ ಮೊಗವೀರ ತಂದೆ:ನಾರಾಯಣ ಮೆಂಡನ್, ಸಂದೀಪ ನಿಲಯ, ಆರೂರು ಕುಂಜಾಲು ಗ್ರಾಮ, ಉಡುಪಿ 3)ಅರವಿಂದ ನಾಯಕ್ (31), ತಂದೆ:ನಾರಾಯಣ ನಾಯ್ಕ, ಪಿಲಾರ್ಕಾನ ಶಿರ್ವಾ, ಮಂಚಕಲ್ ಉಡುಪಿ ಇವರನ್ನು ದಸ್ತಗಿರಿ ಮಾಡಿ ಅಪರಾಧ ನಡೆಸಲು ತಯಾರು ಮಾಡಿಕೊಂಡಿದ್ದ ರಿವಾಲ್ವರ್-1, ಸಜೀವ ಗುಂಡುಗಳು-2, ಲಾಂಗ್ ಮಚ್ಚು-1, 3 ಮೊಬೈಲ್ ಫೋನ್‌ಗಳನ್ನು ಸ್ಥಳದಲ್ಲಿಯೇ ಪಂಚರ ಸಮಕ್ಷಮ ಸ್ವಾಧೀನಪಡಿಸಿಕೊಳ್ಳಲಾಗಿದೆ. ಆರೋಪಿತರು ಮತ್ತು ಸ್ವತ್ತುಗಳನ್ನು ಹಿರಿಯಡ್ಕ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ಈ ಆರೋಪಿಗಳು ಭೂಗತ ಜಗತ್ತಿನೊಂದಿಗೆ ಸಂಪರ್ಕ ಹೊಂದಿದವರಾಗಿದ್ದು, ದಿನಕರ ಪೂಜಾರಿ ಎಂಬವನ ವಿರುದ್ದ ಹೆಬ್ರಿ ಪೊಲೀಸ್ ಠಾಣೆಯಲ್ಲಿ 4 ಪ್ರಕರಣಗಳು ದಾಖಲಾಗಿರುತ್ತದೆ. ಅರವಿಂದ ನಾಯಕ್ ಎಂಬವನ ವಿರುದ್ದ ಮಲ್ಪೆ ಪೊಲೀಸ್ ಠಾಣೆಯಲ್ಲಿ ಹಾಗೂ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಒಂದೊಂದು ಪ್ರಕರಣ ದಾಖಲಾಗಿರುತ್ತದೆ.ಈ ಕಾರ್ಯಚರಣೆಯಲ್ಲಿ ಸಿಬ್ಬಂದಿಯವರಾದ ಎ.ಎಸ್.ಐ ಶ್ರೀ ರೊಸಾರಿಯೊ ಡಿಸೋಜ, ಸಿಬ್ಬಂದಿಯವರಾದ ರವಿಚಂದ್ರ, ಸುರೇಶ, ಸಂತೋಷ ಕುಂದರ್, ಸಂತೋಷ ನಿಟ್ಟೂರು, ಚಂದ್ರ ಶೆಟ್ಟಿ, ರಾಮು ಹೆಗ್ಡೆ, ಮೋಹನ ಕೊತ್ವಾಲ್, ಥಾಮ್ಸನ್, ರಾಘವೇಂದ್ರ, ಬಶೀರ್, ಶಂಕರ ಮತ್ತು ಚಾಲಕರಾದ ಚಂದ್ರಶೇಖರ್ ಮತ್ತು ಮಹಾಬಲೇಶ್ವರ ಪಾಲ್ಗೊಂಡಿರುತ್ತಾರೆ.

No comments: