Tuesday, January 27, 2015

Daily Crime Reports As on 27/01/2015 at 19:30 Hrsಹುಡುಗ ಕಾಣೆ ಪ್ರಕರಣ
  • ಕೊಲ್ಲೂರು: ದಿನಾಂಕ 24/01/2015 ರಂದು ಬೆಳಿಗ್ಗೆ 06:00 ರಿಂದ 06:30 ಗಂಟೆಯ ಮಧ್ಯೆ ಪಿರ್ಯಾದಿದಾರರಾದ ಐರೇಶ್‌ ಶೆಟ್ಟಿ (22) ತಂದೆ:ಕರುಣಾಕರ ಶೆಟ್ಟಿ ವಾಸ:ಬಾಳ್ಕಟ್ಟಿ ಮನೆ, ಹೀರೆಬೆಟ್ಟು ಅಂಚೆ ಉಡುಪಿ ತಾಲೂಕು ಮತ್ತು ಜಿಲ್ಲೆ ಎಂಬವರ ಚಿಕ್ಕಮ್ಮನ ಮಗ 14 ವರ್ಷ ಪ್ರಾಯದ ದೀಪಕ್‌ ಶೆಟ್ಟಿ ತಂದೆ:ಹರೀಶ ಶೆಟ್ಟಿ, ವಾಸ:ಬಾಳ್ಕಟ್ಟಿ  ಮನೆ ನಂಬ್ರ 1-75, ಹೀರೆಬೆಟ್ಟು ಅಂಚೆ ಉಡುಪಿ ತಾಲೂಕು ಮತ್ತು ಜಿಲ್ಲೆ ಎಂಬವನು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಹುಡುಗರ ಹಾಸ್ಟೆಲ್‌ನಿಂದ ಕಾಣೆಯಾಗಿದ್ದು ಆತನನ್ನು ಯಾರಾದರೂ ಪುಸಲಾಯಿಸಿಕೊಂಡು ಹೋಗಿರುವರೇ ಅಥವಾ ಆತನೇ ಶಾಲೆಗೆ ಹೋಗಲು ಬೇಸರವಾಗಿ ಕಾಣೆಯಾಗಿರುವನೆ ಎಂಬ ವಿಚಾರ ತಿಳಿದು ಬಂದಿರುವುದಿಲ್ಲ ಎಂಬುದಾಗಿ ಐರೇಶ್‌ ಶೆಟ್ಟಿರವರು ನೀಡಿದ ದೂರಿನಂತೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 12/2015 ಕಲಂ: 363 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಲಾಗಿದೆ.
ಮಟ್ಕಾ ದಾಳಿ ಪ್ರಕರಣ
  • ಕುಂದಾಪುರ: ದಿನಾಂಕ 16/01/2015 ರಂದು ಬೆಳಿಗ್ಗೆ ಕುಂದಾಪುರ ಪೊಲೀಸ್ ಠಾಣಾ ಉಪ ನಿರೀಕ್ಷಕರಾದ ಶ್ರೀ ನಾಸೀರ್ ಹುಸೇನ್ ರವರು ಸಿಬ್ಬಂದಿಗಳೊಂದಿಗೆ ಕುಂದಾಪುರ ತಾಲೂಕು ಕೋಣಿ ಗ್ರಾಮದ ಪೂರ್ಣಿಮಾ ಬಾರ್‌ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಓರ್ವ ವ್ಯಕ್ತಿಯು ಸಾರ್ವಜನಿಕರಿಂದ ಹಣವನ್ನು ಪಣವಾಗಿ ಸ್ವೀಕರಿಸಿಕೊಂಡು ಮಟ್ಕಾ ಜುಗಾರಿ ಆಟ ಆಡಿಸುತ್ತಿದ್ದುದ್ದನ್ನು ಖಚಿತಪಡಿಸಿಕೊಂಡು 12:00 ಗಂಟೆಗೆ ದಾಳಿ ನಡೆಸಿ, ಸದ್ರಿ ಮಟ್ಕಾ ಜುಗಾರಿ ಆಡಿಸುತ್ತಿದ್ದ ಅಶೋಕ್‌‌ ಪೂಜಾರಿ ಪ್ರಾಯ 36 ವರ್ಷ ತಂದೆ: ದಿವಂಗತ ಕೃಷ್ಣ ಪೂಜಾರಿ ವಾಸ: ಹೆಚ್.ಎಂ ಟಿ. ರೋಡ್‌ ಕೋಣಿ ಗ್ರಾಮ ಕುಂದಾಪುರ ತಾಲೂಕು ಎಂಬಾತನನ್ನು ದಸ್ತಗಿರಿ ಮಾಡಿ, ಆರೋಪಿತನಿಂದ ಮಟ್ಕಾ ಆಟಕ್ಕೆ ಬಳಸಿದ ನಗದು ರೂಪಾಯಿ 1,090-00  ಬಾಲ್ ಪೆನ್ -1 ಮತ್ತು ಮಟ್ಕಾ ನಂಬರ್ ಬರೆದ ಚೀಟಿ -1 ನ್ನು ಮುಂದಿನ ಕ್ರಮದ ಬಗ್ಗೆ ಸ್ವಾದೀನ ಪಡಿಸಿಕೊಂಡಿರುವುದಾಗಿದೆ, ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 21/2015 ಕಲಂ: 78 (i) (iii) ಕರ್ನಾಟಕ ಪೊಲೀಸ್‌ ಕಾಯ್ದೆಯಂತೆ ಪ್ರಕರಣ ದಾಖಲಿಸಲಾಗಿದೆ.

No comments: