Tuesday, January 27, 2015

Daily Crimes Reported as On 27/01/2015 at 17:00 Hrs


ಅಪಘಾತ ಪ್ರಕರಣಗಳು
  • ಗಂಗೊಳ್ಳಿ:ದಿನಾಂಕ:27/01/2015 ರಂದು ಬೆಳಿಗ್ಗೆ 06:20 ಗಂಟೆಗೆ ಪಿರ್ಯಾದಿದಾರರಾದ ಸತೀಶ್ ಮಧ್ಯಸ್ಥ (35), ತಂದೆ:ದಿವಂಗತ ಪಿ.ಕೆ.ಪಿ ಮಧ್ಯಸ್ಥ ವಾಸ:ಕೃಷ್ಣ ಕೃಪಾ, ಮರವಂತೆ ಗ್ರಾಮ, ಕುಂದಾಪುರ ತಾಲೂಕು ಎಂಬವರು ರಾಷ್ಟ್ರೀಯ ಹೆದ್ದಾರಿ 66 ರ ಮರವಂತೆ ಬಸ್ಸು ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಸಮಯ,ದುರ್ಗಾಂಬಾ ಕಂಪನಿಯ ಬಸ್ಸು KA 20 B 7950 ಬರುತ್ತಿದ್ದು, ಕಂಡಕ್ಟರ್ ಬಸ್ಸನ್ನು ನಿಲ್ಲಿಸುವರೇ ಸೀಟಿ ಹಾಕಿದ್ದು ಚಾಲಕ ಬಸ್ಸು ನಿಲ್ಲಿಸುವಂತೆ ಮಾಡಿ ಪುನ: ಬಸ್ಸನ್ನು ಮುಂದಕ್ಕೆ ಚಲಾಯಸಿದ್ದು ಪರಿಣಾಮ ಬಸ್ಸಿನಲ್ಲಿ ಪ್ರಯಾಣಿಸಿದ್ದ ಕಿರಣ್ ಪೂಜಾರಿ ಬಸ್ಸಿನಿಂದ ಇಳಿಯುವರೇ ಎದುರು ಬಾಗಿಲಿನಲ್ಲಿ ನಿಂತವರು ಬಸ್ಸಿನಿಂದ ರಸ್ತೆಗೆ ಬಿದ್ದು, ತಲೆಗೆ ಕೈಗೆ ರಕ್ತದ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಾಗಿರುತ್ತಾರೆ.ಈ ಅಪಘಾತಕ್ಕೆ ಬಸ್ಸ್ ಚಾಲಕನ ಅಜಾಗರೂಕತೆ ಹಾಗೂ ನಿರ್ಲಕ್ಷತೆಯ ಚಾಲನೆಯೇ ಕಾರಣವಾಗಿದೆ.ಈ ಬಗ್ಗೆ ಸತೀಶ್ ಮಧ್ಯಸ್ಥರವರು ನೀಡಿದ ದೂರಿನಂತೆ ಗಂಗೊಳ್ಳಿ ಠಾಣಾ ಅಪರಾಧ ಕ್ರಮಾಂಕ 17/2015 ಕಲಂ:279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಕೊಲ್ಲೂರು:ಪಿರ್ಯಾದಿದಾರರಾದ ಚಂದ್ರಶೇಖರ  (38) ತಂದೆ:ಪುಟ್ಟಸ್ವಾಮಿ, ವಾಸ:ಕಾಮಾಕ್ಷಿ ಪಾಳ್ಯ , ಮಾರುತಿ ನಗರ ,ವಿನಾಯಕ ನಗರ 4 ನೇ ಕ್ರಾಸ್ ಬೆಂಗಳೂರುರವರು ದಿನಾಂಕ:26/01/2015 ರಂದು ಬೆಳಿಗ್ಗೆ ಬೆಂಗಳೂರಿನಿಂದ ಕೊಲ್ಲೂರಿಗೆ ಬಂದು, ಶ್ರೀ ದೇವಿಯ ದರ್ಶನ ಪಡೆದು ನಂತರ  ವಾಪಾಸು ಮುರ್ಡೆಶ್ವರಕ್ಕೆ ತಮ್ಮ ಕೆ.ಎ 02 ಎಮ್.ಸಿ 2448 ನೇ ಮಾರುತಿ ಓಮ್ನಿ ಕಾರಿನಲ್ಲಿ ಕೊಲ್ಲೂರು-ಬೈಂದೂರು ರಾಜ್ಯ ಹೆದ್ದಾರಿಯಲ್ಲಿ ತೆರಳುತ್ತಿರುವಾಗ  ಜಡ್ಕಲ್ ಗ್ರಾಮದ ಹಾಲ್ಕಲ್ ಬ್ರಿಡ್ಜ್ ಬಳಿ ತಲುಪುವಾಗ ಮದ್ಯಾಹ್ನ ಸುಮಾರು 02:30 ಗಂಟೆಗೆ ಎದುರಿನಿಂದ ಅಂದರೆ ಬೈಂದೂರು ಕಡೆಯಿಂದ ಕೆ.ಎ 20 ಬಿ 3055 ನೇ ಬಸ್ಸಿನ ಚಾಲಕನು ತನ್ನ ಬಸ್ಸನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಭಾಗಕ್ಕೆ ಚಲಾಯಿಸಿಕೊಂಡು ಬಂದು ಚಂದ್ರಶೇಖರರವರು ಚಲಾಯಿಸುತ್ತಿದ್ದ, ಕೆ.ಎ 02 ಎಮ್.ಸಿ 2448 ನೇ ಓಮ್ನಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ, 1)ಚಂದ್ರಶೇಖರ (38) ತಂದೆ:ಪುಟ್ಟಸ್ವಾಮಿ, ವಾಸ:ಕಾಮಾಕ್ಷಿ ಪಾಳ್ಯ , ಮಾರುತಿ ನಗರ ,ವಿನಾಯಕ ನಗರ 4 ನೇ ಕ್ರಾಸ್ ಬೆಂಗಳೂರು, 2)ಅಲಮೇಲಮ್ಮ (65) ಗಂಡ:ಮುನಿರಾಜಪ್ಪ, ವಾಸ: ಸುಂಕಟ್ಟೆ ಶ್ರೀನಿವಾಸ ನಗರ ಪೈಪ್ ಲೈನ್ ಬೆಂಗಳೂರು, 3)ಶ್ರೀನಿವಾಸ (34) ತಂದೆ:ಗಂಗಯ್ಯ. ವಾಸ: ಕಾಮಾಕ್ಷಿ ಪಾಳ್ಯ , ಮಾರುತಿ ನಗರ ,ವಿನಾಯಕ ನಗರ 4 ನೇ ಕ್ರಾಸ್ ಬೆಂಗಳೂರು, 4)ರತ್ನಮ್ಮ (24) ಗಂಡ:ಶ್ರೀನಿವಾಸ ವಾಸ:ಕಾಮಾಕ್ಷಿ ಪಾಳ್ಯ, ಮಾರುತಿ ನಗರ, ವಿನಾಯಕ ನಗರ 4 ನೇ ಕ್ರಾಸ್ ಬೆಂಗಳೂರು ಇವರುಗಳಿಗೆ ರಕ್ತ ಗಾಯವಾಗಿದ್ದು, ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ.ಎಂ.ಸಿ  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು  ಠಾಣೆಗೆ ಬಂದು ಈ ಘಟನೆಗೆ ಪ್ರತ್ಯಕ್ಷ ಸಾಕ್ಷಿದಾರರಾದ ಚಂದ್ರಶೇಖರರವರು ಕೆ.ಎ 20 ಬಿ 3055 ನೇ ಬಸ್ಸು ಚಾಲಕನ  ವಿರುದ್ಧ ಸೂಕ್ತ ಕ್ರಮಕ್ಕಾಗಿ ದೂರು ನೀಡಿದ್ದು,ಅದರಂತೆ ಠಾಣಾ ಅಪರಾಧ ಕ್ರಮಾಂಕ 11/2015 ಕಲಂ:279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.  
  • ಕಾಪು:ದಿನಾಂಕ:26/01/2015 ರಂದು 15:00 ಗಂಟೆಗೆ ಉಡುಪಿ ತಾಲೂಕು ಇನ್ನಂಜೆ ಗ್ರಾಮದ ಮರ್ಕೊಡಿ ಸೇತುವೆಯ ಬಳಿ ಪಿರ್ಯಾದಿದಾರರಾದ ರಾಧಾಕೃಷ್ಣ ಪ್ರಭು (60) ತಂದೆ:ಸದಾನಂದ ಪ್ರಭು, ದೇವಿಕಿರಣ ಕಲ್ಯ, ಕಾಪುರವರು ತನ್ನ ಕೆ.ಎ 20 ಎಸ್ 4141ನೇ ಮೋಟಾರು ಸೈಕಲ್‌ನಲ್ಲಿ ತನ್ನ ಪತ್ನಿ ಶ್ರೀಮತಿ ಭಾರತಿರವರನ್ನು ಕುಳ್ಳಿರಿಸಿಕೊಂಡು ಕಲ್ಯ ಕಡೆಗೆ ಬರುತ್ತಿದ್ದಾಗ ಕಲ್ಯ ಕಡೆಯಿಂದ ಕೆ.ಎ 20 ಡಿ-3052ನೇ ಆಟೋರಿಕ್ಷಾವನ್ನು ಅದರ ಚಾಲಕ ಅಡ್ಡಾದಿಡ್ಡಿಯಾಗಿ ನಿರ್ಲಕ್ಷ್ಯತನದಿಂದ ಚಲಾಯಿಕೊಂಡು ಬಂದು ರಾಧಾಕೃಷ್ಣ ಪ್ರಭುರವರ ಮೋಟಾರು ಸೈಕಲ್‌ನ ಬಲಬದಿಗೆ ಡಿಕ್ಕಿ ಹೊಡೆದ  ಪರಿಣಾಮ ರಾಧಾಕೃಷ್ಣ ಪ್ರಭುರವರು ಹಾಗೂ ಸಹಸವಾರರಾದ ಶ್ರೀಮತಿ ಭಾರತಿರವರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು ಗಾಯಗೊಂಡಿರುವುದಾಗಿದೆ. ಅಲ್ಲದೆ ಮೋಟಾರು ಸೈಕಲ್ ಕೂಡಾ ಜಖಂಗೊಂಡಿರುವುದಾಗಿದೆ.ಈ ಬಗ್ಗೆ ರಾಧಾಕೃಷ್ಣ ಪ್ರಭುರವರು ನೀಡಿದ ದೂರಿನಂತೆ ಕಾಪು ಠಾಣಾ ಅಪರಾಧ ಕ್ರಮಾಂಕ 13/2015 ಕಲಂ:279 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಶಿರ್ವಾ:ದಿನಾಂಕ: 26.01.2015ರಂದು  ರಾತ್ರಿ 20:30  ಗಂಟೆಗೆ ಶಿರ್ವಾ ಸೈಂಟ್‌ ಮೇರಿಸ್‌ ಚರ್ಚ್‌ನ ಮುಖ್ಯ ದ್ವಾರದ  ಸ್ವಲ್ಪ ಮುಂದೆ ಉಡುಪಿಗೆ  ಹೋಗುವ  ಡಾಮಾರು  ರಸ್ತೆಯ  ಬಳಿಯಲ್ಲಿ ಕಬ್ಬಿಣದ  ಏಣಿಯನ್ನು ರಸ್ತೆ  ಬದಿಯಲ್ಲಿ  ನಿಲ್ಲಿಸಿ  ತೋರಣ ಕಟ್ಟುತ್ತಿರುವಾಗ ಕೆಎ  20 ಎಸ್‌  5141 ನೇ ನಂಬ್ರದ  ಮೋಟಾರ್‌  ಸೈಕಲ್‌  ಸವಾರ ಶಿರ್ವಾ  ಕಡೆಯಿಂದ  ಉಡುಪಿ ಕಡೆಗೆ ತನ್ನ ಮೋಟಾರ್‌ ಸೈಕಲನ್ನು  ಅತೀವೇಗ ಮತ್ತು ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು  ಬಂದು ಕಬ್ಬಿಣದ  ಏಣಿಗೆ  ಢಿಕ್ಕಿ  ಹೊಡೆದ  ಪರಿಣಾಮ  ಏಣಿಯ  ಮೇಲೆ  ಇದ್ದ  ಪಿರ್ಯಾದಿ ಮಾದೇಶ  (27) ತಂದೆ:ರಾಯಪ್ಪ ವಾಸ: ಸಿಂಡಿಕೇಟ್‌ ಬ್ಯಾಂಕ್‌  ಹಿಂಬದಿ  ಬಾಡಿಗೆ  ಮನೆ, ಶಿರ್ವಾ ಗ್ರಾಮ ಮತ್ತು ಅಂಚೆ, ಉಡುಪಿ ತಾಲೂಕು ಇವರು  ನೆಲಕ್ಕೆ  ಬಿದ್ದ  ಪರಿಣಾಮ ಎಡ  ಕೈಯ ಮಣಿಗಂಟು ಹಾಗೂ ಮೂಳೆ  ಮುರಿತವಾಗಿದ್ದು, ಉಡುಪಿ  ಹೈಟೆಕ್‌  ಆಸ್ಪತ್ರೆಯಲ್ಲಿ  ಪರೀಕ್ಷಿಸಿದ  ವೈದ್ಯರು ಒಳ ರೋಗಿಯಾಗಿ  ದಾಖಲು  ಮಾಡಿರುತ್ತಾರೆ.  ಮೋಟಾರ್‌  ಸೈಕಲ್‌  ಸವಾರನ  ಹೆಸರು  ಈಶ್ವರ  ಎಂದು ತಿಳಿದಿದ್ದು, ಈ ಅಫಘಾತಕ್ಕೆ  ಕೆ ಎ  20 ಎಸ್‌  5141  ನೇ ನಂಬ್ರದ  ಮೋಟಾರ್‌  ಸೈಕಲ್‌  ಸವಾರ ಈಶ್ವರನ  ಅತೀವೇಗ ಮತ್ತು ಅಜಾಗರೂಕತೆಯೇ  ಕಾರಣವಾಗಿರುತ್ತದೆ ಎನ್ನುವುದಾಗಿ ಮಾದೇಶರವರು ಶಿರ್ವಾ ಠಾಣೆಗೆ ದೂರು ನೀಡಿದ್ದು ಠಾಣೆಯಲ್ಲಿ ಅಪರಾಧ ಕ್ರಮಾಂಕ 07/2015 ಕಲಂ:279,338 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ  ತನಿಖೆ ಕೈಗೊಳ್ಳಲಾಗಿದೆ. 
ಅಸ್ವಾಭಾವಿಕ ಮರಣ ಪ್ರಕರಣ 
  • ಉಡುಪಿ ನಗರ:ಪಿರ್ಯಾದಿದಾರರಾದ ರೇಷ್ಮ (43) ಗಂಡ ಮೌರಿಸ್ ವಾಸ ಬಬ್ಬರ್ಯಗುಜ್ಜಿ ಕೊರಂಗ್ರಪಾಡಿ  ಉಡುಪಿ ಇವರು ಬೀಡಿನಗುಡ್ಡೆ ಜಂಕ್ಷನ್ ಬಳಿ ಸುಮತಿ ಪೂಜಾರ್ತಿಯವರ ಗೂಡಂಗಡಿ ಹೋಟೇಲ್‌ನ್ನು ನಡೆಸುವರೇ ಬಾಯಿ ಮಾತಿನ ಅಧಾರದಲ್ಲಿ ಬಾಡಿಗೆಗೆ  ಪಡೆದು 4-5 ದಿನಗಳ ಹಿಂದೆ ಅಂಗಡಿಯ ನೆಲಕ್ಕೆ ಸಿಮೆಂಟ್ ಗಾರೆ ಮಾಡಿದ್ದು , ಪ್ರತಿ ದಿನ ಬೆಳಿಗ್ಗೆ ಸಿಮೆಂಟ್ ನೆಲಕ್ಕೆ ನೀರನ್ನು ಹಾಕಿ ಹೋಗುತ್ತಿದ್ದು ಅದರಂತೆ ಈ ದಿನ ದಿನಾಂಕ:27/01/2015 ರಂದು ಸಿಮೆಂಟ್ ನೆಲಕ್ಕೆ ನೀರು ಹಾಕುವರೇ ಬೀಡಿನ ಗುಡ್ಡೆ ಹೋಟೇಲಿಗೆ ಹೋದಾಗ ಹೋಟೇಲಿನ ಹಿಂಬಾಗದ ಬೆಂಚಿನ ಕೆಳಗಡೆ ಓರ್ವ ವ್ಯಕ್ತಿ ಬಿದ್ದುಕೊಂಡಿರುವುದನ್ನು ನೋಡಿ ಹತ್ತಿರಕ್ಕೆ ಹೋಗಿ ನೋಡಿದಾಗ ತಲೆಯ ಹಿಂಭಾಗಕ್ಕೆ ರಕ್ತ ಗಾಯವಾಗಿ ನೆಲದಲ್ಲಿ ರಕ್ತ ಚೆಲ್ಲಿತ್ತು ಮೈಮೇಲೆ ಇರುವೆಗಳು ತಿಂದ ಗಾಯಗಳು ಕಂಡು ಬಂದಿದ್ದು ,ಪಿರ್ಯಾದಿದಾರರು ಅಕ್ಕ ಪಕ್ಕದವರಿಗೆ ತಿಳಿಸಿ ಎಲ್ಲರೂ ಬಂದು ನೋಡಿದ್ದು  ಅಪರಿಚಿತ ವ್ಯಕ್ತಿಯು ಸುಮಾರು 40-45 ವರ್ಷದವನಾಗಿದ್ದು ದಿನಾಂಕ 26/01/2015ರ ಬೆಳಿಗ್ಗೆ 9:00ಗಂಟೆಯಿಂದ ದಿನಾಂಕ 27/01/2015ರ ಬೆಳಿಗ್ಗೆ 10:00 ಗಂಟೆಯ ಮಧ್ಯೆ  ಆತನು ಗೂಡಂಗಡಿಯ ಬೆಂಚಿನ ಮೇಲೆ ಮಲಗಿ ಆಯ ತಪ್ಪಿ ಕೆಳಗೆ ಸಿಮೆಂಟ್ ನೆಲಕ್ಕೆ ಬಿದ್ದು  ಮೃತಪಟ್ಟಿದ್ದಾಗಿದೆ ಎನ್ನುವುದಾಗಿ ರೇಷ್ಮರವರು ಉಡುಪಿ ನಗರ ಠಾಣೆಗೆ ದೂರು ನೀಡಿದ್ದು ಠಾಣಾ ಯು.ಡಿ.ಆರ್‌ ಸಂಖ್ಯೆ 03/15ಕಲಂ 174(ಸಿ) ಸಿ ಆರ್ ಪಿ.ಸಿ ರಂತೆ ಪ್ರಕರಣ  ದಾಖಲಿಸಿ  ತನಿಖೆಕೈಗೊಳ್ಳಲಾಗಿದೆ. 
ಅನುಮಾನಾಸ್ಪದ ವ್ಯಕ್ತಿಯ ಬಂಧನ
  • ಬೈಂದೂರು:ಬೈಂದೂರು ಠಾಣಾ ಪಿಎಸ್‌ಐ ಸಂತೋಷ ಎ ಕಾಯ್ಕಿಣಿ ರವರು ರಾತ್ರಿ ರೌಂಡ್ಸ್‌ ಕರ್ತವ್ಯದಲ್ಲಿರುವ ಸಮಯ  ದಿನಾಂಕ 27/01/2015 ರಂದು ಬೆಳಗ್ಗಿನ ಜಾವ 04:00 ಗಂಟೆಗೆ ತೊಂಡೆಮಕ್ಕಿ ಶಾಲೆಯ ಬಾಗಿಲ ಬಳಿ ಯಾವುದೋ ವ್ಯಕ್ತಿ ಏನೋ ಮಾಡುತ್ತಿದ್ದಾನೆಂದು ಮಾಹಿತಿ ಬಂದ ಮೇರೆಗೆ ದಿನಾಂಕ 27/01/2015 ರಂದು ಬೆಳಗ್ಗಿನ ಜಾವ 4:15 ಗಂಟೆಗೆ ಇಲಾಖಾ ಜೀಪಿನಲ್ಲಿ ಸದ್ರಿ ಶಾಲೆಯ ಸಮೀಪ ಹೋಗಿ ಅಲ್ಲಿದ್ದ ಪ್ರವೀಣ ಶೆಟ್ಟಿ, ಕಿರಣ್ ದೇವಾಡಿಗ, ನವೀನ್ ದೇವಾಡಿಗ, ಮೋಹನ್ ಮೊಗವೀರ, ಪ್ರಶಾಂತ್ ದೇವಾಡಿಗ ಹಾಗೂ ತೊಂಡೆಮಕ್ಕಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಬಾಲಯ್ಯ ಶೇರಿಗಾರರವರೊಂದಿಗೆ ಶಾಲಾ ವಠಾರದಲ್ಲಿ ಕತ್ತಲೆಯಲ್ಲಿ ಟಾರ್ಚ್ ಬೆಳಕಿನ ಸಹಾಯದಿಂದ ಹುಡುಕಲಾಗಿ ಶಾಲಾ ಶೌಚಾಲಯದ ಮರೆಯಲ್ಲಿ ಓರ್ವ ವ್ಯಕ್ತಿ ಅಡಗಿ ಕುಳಿತುಕೊಂಡಿದ್ದು, ಆತನು ಅಲ್ಲಿಂದ ಓಡಿ ಹೋಗಲು ಪ್ರಯತ್ನಿಸಿದ ಆತನನ್ನು ಹುಡುಕಲು ಸಹಕರಿಸಿದ ಇತರರ ಸಹಾಯದಿಂದ ಸದ್ರಿ ವ್ಯಕ್ತಿಯನ್ನು ಹಿಡಿದು ಆತನ ಹೆಸರು ವಿಳಾಸ ವಿಚಾರಿಸಲಾಗಿ ಆತನು ತಡವರಿಸಿಕೊಂಡು ತನ್ನ ಹೆಸರು ಒಮ್ಮೆ ಸುರೇಶ ಭಟ್ಕಳ ಎಂದೂ, ನಂತರ ಮತ್ತೊಮ್ಮೆ ಗಣೇಶ ಯೋಜನಾ ನಗರ ಎಂದೂ ಉತ್ತರಿಸಿದ್ದು, ನಂತರ ಆತನ ಹೆಸರನ್ನು ಸರಿಯಾಗಿ ತಿಳಿದುಕೊಂಡಲ್ಲಿ ಸುಬ್ರಮಣ್ಯ @ ನಾಗರಾಜ, (19) ತಂದೆ-ಶಿವರಾಮ, ವಾಸ:ತೊಂಡೆಮಕ್ಕಿ, ಬೈಂದೂರು ಗ್ರಾಮ, ಕುಂದಾಪುರ ತಾಲೂಕು ಎಂಬುದಾಗಿ ತಿಳಿಸಿದ್ದು, ಆತನ ಕೈಯಲ್ಲಿ ಕಬ್ಬಿಣದ ರಾಡ್-1 ಇದ್ದು, ಆತನ ಇರುವಿಕೆಯ ಬಗ್ಗೆ ಕಾರಣ ಕೇಳಲಾಗಿ ಆತನು ಸಮರ್ಪಕವಾದ ಉತ್ತರವನ್ನು ನೀಡಿರುವುದಿಲ್ಲ. ಆದುದರಿಂದ ಆತನು ತೊಂಡೆಮಕ್ಕಿ ಶಾಲೆಯಿಂದ ಅಥವಾ ಅಲ್ಲಿಯೇ ಅಕ್ಕಪಕ್ಕದಲ್ಲಿ ಕಳ್ಳತನ ಮಾಡುವ ಉದ್ದೇಶದಿಂದ ಕೈಯಲ್ಲಿ ಕಬ್ಬಿಣದ ರಾಡನ್ನು ಹಿಡಿದುಕೊಂಡು ಅಥವಾ ಇನ್ಯಾವುದೋ ಬೇವಾರಂಟು ತಕ್ಷೀರು ಮಾಡುವ ಉದ್ದೇಶದಿಂದ ಕತ್ತಲೆಯಲ್ಲಿ ತನ್ನ ಇರುವಿಕೆಯನ್ನು ಮರೆಮಾಚಿಕೊಂಡು ಇದ್ದಿದ್ದರಿಂದ ಆತನಿಗೆ ಆತನ ತಪ್ಪನ್ನು ತಿಳಿಯಪಡಿಸಿ, ಅದಕ್ಕೆ ಆತನು ಒಪ್ಪಿಕೊಂಡಿದ್ದರಿಂದ 4-30 ಗಂಟೆಯಿಂದ 5-30 ಗಂಟೆಯವರೆಗೆ ತಕ್ಷೀರು ಸ್ಥಳದ ಮಹಜರು ತಯಾರಿಸಿ ಆರೋಪಿಯ ವಶದಲ್ಲಿದ್ದ ಕಬ್ಬಿಣದ ರಾಡನ್ನು ಸ್ವಾಧೀನಪಡಿಸಿಕೊಂಡು ಬೈಂದೂರು ಠಾಣಾ ಅಪರಾಧ ಕ್ರಮಾಂಕ 14/15 ಕಲಂ:96 ಕೆ.ಪಿ ಆಕ್ಟ್‌ ರಂತೆ ಪ್ರಕರಣ  ದಾಖಲಿಸಿ  ತನಿಖೆ ಕೈಗೊಳ್ಳಲಾಗಿದೆ.

No comments: