Thursday, December 18, 2014

Daily Crime Reported As On 18/12/2014 At 07:00Hrs

ಆತ್ಮಹತ್ಯೆ ಪ್ರಕರಣ
  • ಬ್ರಹ್ಮಾವರ: ಪಿರ್ಯಾದಿದಾರರಾದ ಕೃಷ್ಣ ಪೂಜಾರಿ (44) ತಂದೆ ಗಿರಿಯಪ್ಪ ಪೂಜಾರಿ ವಾಸ ನಡೂರು ಗ್ರಾಮ ಉಡುಪಿ ತಾಲೂಕು ಇವರ ಬಾವ ಸುಧಾಕರ ಪೂಜಾರಿ  (45), ಎಂಬವರು ದಿನಾಂಕ 17/12/2014 ರಂದು 02:30 ಗಂಟೆಯಿಂದ 03:30 ಗಂಟೆಯ ಮದ್ಯದ ಅವಧಿಯಲ್ಲಿ ಕಾಡೂರು ಗ್ರಾಮದ ಬೆಳ್ತಾಡಿಯಲ್ಲಿರುವ ಮನೆಯಲ್ಲಿ ಯಾವುದೋ ವೈಯುಕ್ತಿಕ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಎಂಬುದಾಗಿ ಕೃಷ್ಣ ಪೂಜಾರಿ ಇವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣಾ ಅಪರಾಧ ಕ್ರಮಾಂಕ 61/14 ಕಲಂ 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
ಅಪಘಾತ ಪ್ರಕರಣ
  • ಶಂಕರನಾರಾಯಣ: ಆಪಾದಿತ ಪ್ರವೀಣ್‌ ಕುಮಾರ್‌ ಶೆಟ್ಟಿ ಇವರ KA 20EC 2462 TVS ಅಪಾಚಿ ಬೈಕನ್ನು ದಿನಾಂಕ 17-12-2014 ರಂದು ಬೆಳಿಗ್ಗೆ 7:00 ಗಂಟೆಗೆ ಕುಂದಾಪುರ ತಾಲೂಕು ಕುಂದಾಪುರ ಹೋಬಳಿಯ ಹೆಂಗವಳ್ಳಿ ಗ್ರಾಮದ ಕಿಬೈಲ್‌ ಎಂಬಲ್ಲಿ ದಿ. ಸಂಪಾ ಬಿ ಶೆಡ್ತಿ ರವರ ತೆಂಗಿನ  ತೋಟದ ಎದುರು ಅಮಾಸೆಬೈಲ್‌-ಹೆಂಗವಳ್ಳಿ ರಸ್ತೆಯಲ್ಲಿ ಅತೀ ವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿ ರಸ್ತೆಗೆ ಅಡ್ಡ ಬಂದ ಜಿಂಕೆಯನ್ನು ನೋಡಿ ಒಮ್ಮೇಲೆ ಬ್ರೇಕ್‌ ಹಾಕಿದ ಪರಿಣಾಮ ಬೈಕ್‌ ಸ್ಕಿಡ್‌ ಆಗಿ ರಸ್ತೆಗೆ ಬಿದ್ದು ಬೈಕ್‌ನಲ್ಲಿದ್ದ ಸಹಸವಾರ ಕೊರಗಯ್ಯ ಶೆಟ್ಟಿ ಮತ್ತು ಆರೋಪಿ ಗಾಯಗೊಂಡಿದ್ದು ಬೈಕ್‌ ಜಖಂಗೊಂಡಿರುತ್ತದೆ ಎಂಬುದಾಗಿ ಪಿರ್ಯಾದಿದಾರರಾದ ದಿನೇಶ್‌ ಶೆಟ್ಟಿ (42), ತಂದೆ ಗಣಪಯ್ಯ ಶೆಟ್ಟಿ, ವಾಸ ಹೀಲಿಬೈಲ್‌, ಹೆಂಗವಳ್ಳಿ ಗ್ರಾಮ, ಕುಂದಾಪುರ ಇವರು ನೀಡಿದ ದೂರಿನಂತೆ ಶಂಕರ ನಾರಾಯಣ ಠಾಣಾ ಅಪರಾಧ ಕ್ರಮಾಂಕ 191/14 ಕಲಂ 279, 337 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿತನಿಖೆಯಲ್ಲಿರುತ್ತದೆ.
  • ಕುಂದಾಪುರ: ದಿನಾಂಕ 17/12/2014ರಂದು ರಂದು ರಾತ್ರಿ ಸಮಯ 7:45 ಗಂಟೆಗೆ ಕುಂದಾಪುರ ತಾಲೂಕು ಕಂದಾವರ ಗ್ರಾಮದ ಮೂಡ್ಲಕಟ್ಟೆ ಸೇತುವೆಯ ಬಳಿ ರಾಜ್ಯ ರಸ್ತೆಯಲ್ಲಿ ಆಪಾದಿತ ಶ್ರೀಕಾಂತ ಎಂಬವರು KA 19D 9884ನೇ ಮಿನಿ ಟಿಪ್ಪರ್ ಲಾರಿಯನ್ನು ಬಸ್ರೂರು ಕಡೆಯಿಂದ ಕುಂದಾಪುರ ಕಡೆಗೆ ಅತೀ ವೇಗವಾಗಿ ಚಲಾಯಿಸಿಕೊಂಡು ರಸ್ತೆಯ ತೀರ ಬಲಬದಿಗೆ ಬಂದು ಬಳಿಕ ಒಮ್ಮಲೆ ರಸ್ತೆಯ ಎಡಬದಿಗೆ ಚಲಾಯಿಸಿ ಪಿರ್ಯಾದಿದಾರರಾದ ಭರತ್ ಕುಮಾರ್ ಶೆಟ್ಟಿ (26), ತಂದೆ ಶೇಖರ ಶೆಟ್ಟಿ ವಾಸ ಆಳ್ವರ ಮನೆ, ಗುಲ್ವಾಡಿ ಗ್ರಾಮ, ಕುಂದಾಪುರ ತಾಲೂಕು ಇವರು ಕುಂದಾಪುರ ಕಡೆಯಿಂದ ಬಸ್ರೂರು ಕಡೆಗೆ ಚಲಾಯಿಸಿಕೊಂಡಿದ್ದ KA 20C 8462ನೇ ಅಟೋರಿಕ್ಷಾಕ್ಕೆ ಎದುರುಗಡೆಯಿಂದ ಅಪಘಾತಪಡಿಸಿದ ಪರಿಣಾಮ ಅಟೋರಿಕ್ಷಾ ರಸ್ತೆಯಲ್ಲಿ ಅಡ್ಡ ಬಿದ್ದು ಪಿರ್ಯಾದಿ ಹಾಗೂ ಸದ್ರಿ ಅಟೋರಿಕ್ಷಾದಲ್ಲಿದ್ದ ಮಧುಚಂದ್ರ ಅಟೋರಿಕ್ಷಾದ ಅಡಿಗೆ ಸಿಲುಕಿ, ಮಧುಚಂದ್ರರವರು ಗಾಯಗೊಂಡು ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಗೆ  ಹೋಗಿರುತ್ತಾರೆ ಎಂಬುದಾಗಿ ಭರತ್ ಕುಮಾರ್ ಶೆಟ್ಟಿ ಇವರು ನೀಡಿದ ದೂರಿನಂತೆ ಕುಂದಾಪುರ ಠಾಣಾ ಅಪರಾಧ ಕ್ರಮಾಂಕ 155/2014 279,337 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿತನಿಖೆಯಲ್ಲಿರುತ್ತದೆ.

No comments: