Wednesday, December 17, 2014

Daily Crime Reported As On 17/12/2014 At 19:30Hrs

ಇತರ ಪ್ರಕರಣ
  • ಶಂಕರನಾರಯಣ: ಪಿರ್ಯಾದಿದಾರರಾದ ಎಸ್‌ ವಾಮನ್‌ ಸಾದು (44) ತಂದೆ ಕೆ ಸುಬ್ಬ ಕಾವ್ರಾಡಿ, ಸಾದು ನಿಲಯ ಬರೆಕಟ್ಟು ಕುಂದಾಫುರ ತಾಲೂಕು ಇವರ ಅಕ್ಕ ಶಾಂತಾದೇವಿ ಯವರು ಕುಂದಾಫುರ ತಾಲೂಕು ಅಂಪಾರು ಗ್ರಾಮದ ಸರ್ವೆ ನಂಬ್ರ 15/4 ರಲ್ಲಿ 3.06 ಎಕ್ರೆ ಜಮೀನು ಹೊಂದಿದ್ದು ಸದ್ರಿ ಜಮೀನಿನ ಬಗ್ಗೆ ಪಿರ್ಯಾದಿದಾರರು ಅಧಿಕಾರ ಪತ್ರವನ್ನು ಹೊಂದಿರುತ್ತಾರೆ. ಸದ್ರಿ ಜಮೀನಿನಲ್ಲಿ ಅಕೇಶಿಯಾ ಮರವನ್ನು ಬೆಳಸಿದ್ದು ದಿನಾಂಕ 25/11/2014ರ ಆಸುಪಾಸಿನ ದಿನಗಳಲ್ಲಿ ಸದ್ರಿ ಜಾಗಕ್ಕೆ ಆರೋಪಿತರುಗಳಾದ ರಾಮ ಪಾಣ ಮತ್ತು ಮನೆಯವರು ಇವರುಗಳು ಸಮಾನ ಉದ್ದೇಶದಿಂದ ಅಕ್ರಮ ಪ್ರವೇಶ ಮಾಡಿ ಸದ್ರಿ ಜಮೀನಿನಲ್ಲಿರುವ ಅಕೇಶಿಯಾ ಮರಗಳನ್ನು ಕಡಿದು ಹಾಕಿ ಸುಮಾರು 2,00,000/- ರೂಪಾಯಿ ನಷ್ಟ ಉಂಟು ಮಾಡಿರುತ್ತಾರೆ ಎಂಬುದಾಗಿ ಎಸ್‌ ವಾಮನ್‌ ಸಾದು ಇವರು ನೀಡಿದ ದೂರಿನಂತೆ ಶಂಕರನಾರಯಣ ಠಾಣಾ ಅಪರಾಧ ಕ್ರಮಾಂಕ 190/14 ಕಲಂ 447, 427 ಜೊತೆಗೆ 34 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.    
ಜೀವ ಬೆದರಿಕೆ ಪ್ರಕರಣ
  • ಕಾಪು: ದಿನಾಂಕ 16/12/2014ರಂದು 13:30 ಗಂಟೆಗೆ ಉಡುಪಿ ತಾಲೂಕು ಮಣಪುರ ಗ್ರಾಮದಲ್ಲಿರುವ    ಪಿರ್ಯಾದಿದಾರರಾದ ಮೈಮುನಾ (51) ಗಂಡ ಕರೀಂ ಬ್ಯಾರಿ ವಾಸ “ಫರ್ಝಾನ ಮಂಝಿಲ್ “ ಮಣಿಪುರ ಅಂಚೆ ಮತ್ತು ಗ್ರಾಮ ವಯಾ ಕಟಪಾಡಿ ಇವರ ಮನೆಗೆ ಪಿರ್ಯಾದಿದಾರರು ಹಾಗೂ ಸೊಸೆ ಆಯಿಶಾ ಇವರು ಮನೆಯಲ್ಲಿರುವಾಗ   ಆರೋಪಿತರುಗಳಾದ 1). ಹಸನ್‌ ಶೇಖ್ ಅಹಮ್ಮದ್, 2). ಮೊಹಮ್ಮದ್ ಖಾಲಿದ್‌, 3). ಮೈಯದ್ದಿ, 4) ಇಸ್ಮಾಯಿಲ್‌ ಶೇಖ್ ಅಹಮ್ಮದ್ 4). ವಾಸಿಂ ವಾಕರ್‌ , 5). ಹಾಝಿ ಮೋನು, 6). ರಶೀದ@ ಅವ್ವಮ್ಮ ಇವರುಗಳು ಮನೆಗೆ  ಅಕ್ರಮ ಪ್ರವೇಶ ಮಾಡಿ, ಪಿರ್ಯಾದಿದಾರರ  ಮಗ ಅಬ್ದುಲ್ ಸಮೀರ್ ರರವನ್ನು ಮನೆಯಲ್ಲಿ ಹುಡುಕಾಡಿ, ಅವಾಚ್ಯ ಶಬ್ದಗಳಿಂದ  ಬೈದು ಪಿರ್ಯಾದಿದಾರರ ಮಗ ಅಬ್ದುಲ್ ಸಮೀರ್ ರವರು ಆತನ ಪತ್ನಿ ನಝ್ಮಾ ರವರಿಗೆ  ಡೈವರ್ಸ ನೀಡಬೇಕೆಂದು   ಹಾಗೂ  ಜೀವನಾಂಶವಾಗಿ 15,00, 000 ರೂಪಾಯಿ ನೀಡಬೇಕು, ಹಣ ನೀಡದಿದ್ದಲ್ಲಿ  ಪಿರ್ಯಾದಿದಾರರನ್ನು, ಅವರ ಮಗ ಅಬ್ದುಲ್ ಸಮೀರ್ ಮತ್ತು ಪಿರ್ಯಾದಿದಾರರ ಸೊಸೆ ಆಯಿಶಾ  ಇವರುಗಳನ್ನು ಜೀವ ಸಹಿತ  ಬಿಡುವುದಿಲ್ಲವಾಗಿ    ಬೆದರಿಕೆಯೊಡ್ಡಿ ಹೋಗಿರುತ್ತಾರೆ. ಪಿರ್ಯಾದಿದಾರರ ಮಗ ಹಾಗೂ ಆತನ ಪತ್ನಿ ನಝ್ಮಾ ರವರ  ನಡುವಿನ ದಾಂಪತ್ಯದ  ವಿರಸ ಈ ತಕ್ಷೀರಿಗೆ ಕಾರಣವಾಗಿರುತ್ತದೆ ಎಂಬುದಾಗಿ ಮೈಮುನಾ ಇವರು ನೀಡಿದ ದೂರಿನಂತೆ ಕಾಪು ಠಾಣಾ ಅಪರಾಧ ಕ್ರಮಾಂಕ 232/2014 ಕಲಂ 143, 147, 448, 504, 506 ಜೊತೆ 149 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.   

No comments: